ಟೊಮ್ಯಾಟೋ ಬೆಳೆಗಾರರಿಗೆ ವಿಮಾ ನೋಂದಣಿ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.25- ತೋಟಗಾರಿಕೆ ಇಲಾಖೆ ವತಿಯಿಂದ 2020-21ನೆ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ಟೊಮ್ಯಾಟೊ ಬೆಳೆಗೆ ರೈತರು ವಿಮಾ ನೋಂದಣಿ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ.

ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹಾಗೂ ವಿಜಯಪುರ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕಿನ ಕಸಬಾ ಹಾಗೂ ತೂಬಗೆರೆ ಹೋಬಳಿ, ನೆಲಮಂಗಲ ತಾಲ್ಲೂಕಿನ ಕಸಬಾ ಹೋಬಳಿ ಮತ್ತು ಹೊಸಕೋಟೆ ತಾಲ್ಲೂಕಿನ ಅನುಗೊಂಡನಹಳ್ಳಿ, ಜಡಿಗೇನಹಳ್ಳಿ ಹಾಗೂ ನಂದಗುಡಿ ಹೋಬಳಿಯ ರೈತರು ವಿಮಾ ನೋಂದಣಿ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ.

ಪ್ರತಿ ಹೆಕ್ಟೇರ್‍ಗೆ ವಿಮಾ ಮೊತ್ತ 1,18,000 ರೂ.ಗಳಾಗಿದ್ದು, ರೈತರು ಪಾವತಿಸಬೇಕಾಗಿರುವ ವಿಮಾ ಕಂತು ವಿಮಾ ಮೊತ್ತದ ಶೇ.5ರಂತೆ 5,900ರೂ.ಗಳನ್ನು ಜು.15ರೊಳಗೆ ಪಾವತಿಸಬೇಕಾಗಿದೆ.  ವಿಮೆ ಮಾಡಿಸುವ ರೈತರು ನಿಗದಿತ ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್ ಖಾತೆ ಪುಸ್ತಕ, ಆರ್ಧಾ ನಕಲು ಪ್ರತಿಗಳನ್ನು ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳನ್ನು ಲಗತ್ತಿಸಿ ಆಯಾ ತಾಲ್ಲೂಕಿನ ಯಾವುದಾದರೂ ರಾಷ್ಟ್ರೀಯ ಅಕೃತ ಬ್ಯಾಂಕ್‍ಗಳಲ್ಲಿ (ಖಾತೆ ಹೊಂದಿರುವ ಬ್ಯಾಂಕ್) ನೋಂದಾಯಿಸಬಹುದಾಗಿದೆ.

ಟೊಮ್ಯಾಟೋ ಬೆಳೆ ಸಾಲ ಪಡೆದಿರುವ ರೈತರು ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಇಚ್ಛಿಸದಿದ್ದಲ್ಲಿ ನೋಂದಣಿಯ ಕೊನೆಯ ದಿನಾಂಕವಾದ 15-07-2020ರ 7 ದಿನಗಳ ಮುಂಚಿತವಾಗಿ ಸಾಲ ಪಡೆದ ಬ್ಯಾಂಕ್‍ನಲ್ಲಿ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ತಾಲ್ಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ತಾಂತ್ರಿಕ ಅಕಾರಿಗಳನ್ನು ಸಂಪರ್ಕಿಸಬಹುದು. ದೇವನಹಳ್ಳಿ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ಮೊ.ಸಂ.: 9448001644, ತಾಂತ್ರಿಕ ಸಹಾಯಕರು ಮೊ.ಸಂ.: 9886736664, ಕಚೇರಿ ದೂ.ಸಂ.: 080 27681204. ದೊಡ್ಡಬಳ್ಳಾಪುರ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ಮೊ.ಸಂ.: 9632410677,

ತಾಂತ್ರಿಕ ಸಹಾಯಕರು ಮೊ.ಸಂ.: 9741895988, ಕಚೇರಿ ದೂ.ಸಂ.: 080 27623770. ಹೊಸಕೋಟೆ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ಮೊ.ಸಂ.: 9538953949, ತಾಂತ್ರಿಕ ಸಹಾಯಕರು ಮೊ.ಸಂ.: 8453966868, ಕಚೇರಿ ದೂ.ಸಂ.: 080 29716626. ಹಾಗೂ ನೆಲಮಂಗಲ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ಮೊ.ಸಂ.: 9901754339,

ತಾಂತ್ರಿಕ ಸಹಾಯಕರು ಮೊ.ಸಂ.: 9980276248, ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರು(ಜಿಪಂ) ಮಾಹಾಂತೇಶ ಮುರಗೋಡ (ಮೊ.ಸಂ.: 9448999214) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin