ಕುಖ್ಯಾತ ಲಷ್ಕರ್ ಉಗ್ರ ಸೇರಿ 3 ಭಯೋತ್ಪಾದಕರು ಎನ್‌ಕೌಂಟರ್‌ನಲ್ಲಿ ಖತಂ..!

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಆ.20- ಕಣಿವೆ ಪ್ರಾಂತ್ಯ ಕಾಶ್ಮೀರದಲ್ಲಿ ಹೆಚ್ಚಾಗುತ್ತಿರುವ ಉಗ್ರಗಾಮಿಗಳ ಉಪಟಳ ನಿಗ್ರಹಕ್ಕಾಗಿ ನಡೆದ ನಾಲ್ಕು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಕುಖ್ಯಾತ ಭಯೋತ್ಪಾದಕ ಸೇರಿದಂತೆ ಮೂವರು ಆತಂಕವಾದಿಗಳನ್ನು ಯೋಧರು ಹೊಡೆದುರುಳಿಸಿದ್ದಾರೆ. ಅಲ್ಲದೆ, ನಾಲ್ವರು ಉಗ್ರಗಾಮಿಗಳನ್ನು ಬಂಸಲಾಗಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದು-ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರಾದ ಗಣಿಪೋರ ಪ್ರದೇಶದಲ್ಲಿ ನಿನ್ನೆ ಸಂಜೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಯೋಧರು ಲಷ್ಕರ್-ಎ-ತಯ್ಬಾ (ಎಲ್‍ಇಟಿ) ಉಗ್ರಗಾಮಿ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.

ಹತರಾದವರಲ್ಲಿ ಒಬ್ಬನನ್ನು ನಾಸಿರುದ್ದೀನ್ ಲೋನ್ ಎಂದು ಗುರುತಿಸಲಾಗಿದೆ. ಈತ ಎಲ್‍ಇಟಿಯ ಕುಖ್ಯಾತ ಕಮಾಂಡರ್ ಆಗಿದ್ದು, ಇದೇ ವರ್ಷ ಏಪ್ರಿಲ್ ಮತ್ತು ಮಾರ್ಚ್‍ನಲ್ಲಿ ಸೊಪೋರಾ ಮತ್ತು ಹಂದ್ವಾರಾದಲ್ಲಿ ಆರು ಸಿಆರ್‍ಪಿಎಫ್ ಯೋಧರನ್ನು ಹತ್ಯೆಗೈದಿದ್ದ.

ಈತನನ್ನು ಮಹತ್ವದ ಕಾರ್ಯಾಚರಣೆಯಲ್ಲಿ ಯೋಧರು ಹೊಡೆದುರುಳಿಸಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರೀಕ್ಷಕ ವಿಜಯ್‍ಕುಮಾರ್ ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಸಿಆರ್‍ಪಿಎಫ್ ರಾಷ್ಟ್ರೀಯ ರೈಫಲ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಶ್ರಮ ವಹಿಸಿದ್ದರು. ಶೋಪಿಯಾನ್‍ನಲ್ಲಿ ನಡೆದ ಮತ್ತೊಂದು ಎನ್‍ಕೌಂಟರ್‍ನಲ್ಲಿ ಮತ್ತೊಬ್ಬ ಉಗ್ರಗಾಮಿಯನ್ನು ಹೊಡೆದುರುಳಿಸಲಾಗಿದೆ.

ಇದೇ ವೇಳೆ ಕಾಶ್ಮೀರದಲ್ಲಿ ನಡೆದ ಎರಡು ಪ್ರತ್ಯೇಕ ಉಗ್ರಗಾಮಿ ನಿಗ್ರಹ ಕಾರ್ಯಾಚರಣೆಗಳಲ್ಲಿ ನಾಲ್ವರು ಭಯೋತ್ಪಾದಕರನ್ನು ಬಂಸಲಾಗಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಸೋಟಕಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

Facebook Comments

Sri Raghav

Admin