ಅಧಿಕ ಆದಾಯ ಹೊಂದಿರುವ ನಟಿಯರ ಟಾಪ್ 10 ಪಟ್ಟಿಯಿಂದ ಹೊರಗುಳಿದ ದೀಪಿಕಾ,ಪ್ರಿಯಾಂಕಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.25- ವಿಶ್ವದ ಅತ್ಯಂತ ಆದಾಯವನ್ನು ಹೊಂದಿರುವ ನಟಿಯರ ಪಟ್ಟಿಯನ್ನು ಪೋಬ್ರ್ಸ್ ಬಿಡುಗಡೆ ಮಾಡಿದ್ದು ಎರಡನೇ ಬಾರಿಯೂ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಚೋಪ್ರಾ ಟಾಪ್ 10 ಪಟ್ಟಿಯಿಂದ ಹೊರಗುಳಿ ದಿದ್ದಾರೆ.

ಹಾಲಿವುಡ್‍ನ ಸಮ್ಮರ್ ಮಾರ್ವಲ್ ಅವೆಂಜರ್ಸ್ ಚಿತ್ರದ ನಟಿ ಸ್ಕಾರ್ಲೆಟ್ ಜೋಹಾನ್ಸನ್ ಅವರು ವರ್ಷಕ್ಕೆ 5 ಮಿಲಿಯನ್ ಡಾಲರ್ ವರಮಾನ ಗಳಿಸುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನಿ ಯಾಗಿದ್ದಾರೆ. ಬ್ಲ್ಯಾಕ್ ವಿಡೋ ಚಿತ್ರದ ನಟಿ ಸೋಪಿಯಾ ವರ್‍ಗೇರಾ (44.1 ಮಿಲಿಯನ್ ಡಾಲರ್) ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

ಇತ್ತೀಚೆಗೆ ಪೋಬ್ರ್ಸ್ ಬಿಡುಗಡೆ ಮಾಡಿದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರುಗಳ ಸಾಲಿನಲ್ಲಿ ಡ್ವೇನ್ ಜಾನ್ಸನ್ (89.4 ಮಿಲಿಯನ್ ಡಾಲರ್)ನಂಬರ್ 1 ಸ್ಥಾನಿಯಾಗಿದ್ದರೆ, ಬಾಲಿವುಡ್‍ನ ಕಿಲಾಡಿ ಸ್ಟಾರ್ ಅಕ್ಷಯ್‍ಕುಮಾರ್ (66 ಮಿಲಿಯನ್ ಡಾಲರ್)ನಂಬರ್ 4 ಸ್ಥಾನದಲ್ಲಿದ್ದರೂ, ನಟಿಯರ ಪಟ್ಟಿಯಲ್ಲಿ ಯಾವೊಬ್ಬ ಭಾರತೀಯ ನಟಿಯರೂ ಸ್ಥಾನ ಪಡೆದಿಲ್ಲ.

ಅತಿ ಹೆಚ್ಚು ವರಮಾನದ ಟಾಪ್ 10 ನಟಿಯರು:
1) ಸ್ಕಾರ್ಲೆಟ್ ಜಾನ್ಸನ್ (56 ಮಿಲಿಯನ್ ಡಾಲರ್)
2) ಸೋಫಿಯಾ ವರ್‍ಗೇರಾ (44 ಮಿಲಿಯನ್ ಡಾಲರ್)
3) ರೆಸೆ ವಿದೇರ್‍ಸ್ಪೂನ್ (35 ಮಿಲಿಯನ್ ಡಾಲರ್)
4) ನಿಕೊಲೋ ಕಿಡ್ಮನ್ (34ಮಿಲಿಯನ್ ಡಾಲರ್)
5) ಜೆನ್ನಿಪರ್ ಅನಿಸ್ಟೋನ್ (28 ಮಿಲಿಯನ್ ಡಾಲರ್)
6) ಕೇಲಿ ಕುವೊಕೊ (25 ಮಿಲಿಯನ್ ಡಾಲರ್)
7) ಎಲಿಸಬೆತ್ ಮಾಸ್ (24 ಮಿಲಿಯನ್ ಡಾಲರ್)
8) ಮಾರ್ಗಾಟ್ ರಾಬಿ (23.5 ಮಿಲಿಯನ್ ಡಾಲರ್)
9) ಚಾರ್ಲಿಜ್ ಥರಾನ್ (23 ಮಿಲಿಯನ್ ಡಾಲರ್)
10) ಎಲ್ಲೆನ್ ಪೆÇಂಪಿಯೊ (22ಮಿಲಿಯನ್ ಡಾಲರ್).

Facebook Comments