ಏ.22ರಿಂದ 25ರವರೆಗೆ ಬೆಂಗಳೂರಿನಲ್ಲಿ ಏಷ್ಯನ್ ಸ್ನೋಕರ್ ಟೂರ್ ಟೆನ್ ರೆಡ್ ಚಾಂಪಿಯನ್ ಶಿಪ್ ಪಂದ್ಯಾವಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.20- ಏಷ್ಯನ್ ಸ್ನೋಕರ್ ಟೂರ್‍ನ ಟೆನ್ ರೆಡ್ ಚಾಂಪಿಯನ್ ಶಿಪ್‍ನ ಮೂರನೆ ಹಂತದ ಪಂದ್ಯಾವಳಿಗಳು ಬೆಂಗಳೂರಿನಲ್ಲಿ ಏ.22ರಿಂದ 25ರವರೆಗೆ ನಡೆಯಲಿದೆ. ಏಷ್ಯನ್ ಕಾನ್ಫಿಡರೇಷನ್ ಆಫ್ ಬಿಲಿಯಡ್ರ್ಸ್ ಸ್ಪೋಟ್ರ್ಸ್ (ಎಸಿಬಿಎಸ್) ವತಿಯಿಂದ ಆಯೋಜಿಸಿರುವ ಈ ಚಾಂಪಿಯನ್‍ಶಿಪ್ ಮೂರು ಹಂತಗಳಲ್ಲಿ ಕೂಡಿದ್ದು ,

ಈಗಾಗಲೇ ಮೊದಲ ಹಂತ ಕತಾರ್‍ನ ದೋಹಾದಲ್ಲಿ, ಎರಡನೆ ಹಂತ ಚೀನಾದ ಜಿನಾನ್‍ನಲ್ಲಿ ಮುಕ್ತಾಯಗೊಂಡಿದ್ದು , ಮೂರನೆ ಹಂತದ ಪಂದ್ಯಾವಳಿ ಬೆಂಗಳೂರಿನಲ್ಲಿ ನಡೆಯುತ್ತಿದೆ ಎಂದು ಅಂತಾರಾಷ್ಟ್ರೀಯ ಆಟಗಾರ ಹಾಗೂ ವಲ್ರ್ಡ್ ಬಿಲಿಯರ್ಡ್ ಚಾಂಪಿಯನ್ ಪಂಕಜ್ ಅದ್ವಾನಿ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.

ಅಂತಾರಾಷ್ಟ್ರೀಯ ಬಿಲಿಯಡ್ರ್ಸ್ ಮತ್ತು ಸ್ನೂಕರ್ ಒಕ್ಕೂಟದ ಸಹಕಾರ ದೊಂದಿಗೆ ಎಸಿಬಿಎಸ್ ಈ ಪ್ರತಿಷ್ಠಿತ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. 40 ಸಾವಿರ ಡಾಲರ್ ಪ್ರಶಸ್ತಿ ಮೊತ್ತದ ಇದರಲ್ಲಿ ಲೀಗ್ ಹಂತಗಳು ಮುಗಿದು 24 ನಂತರ 16, ನಂತರ 8, ನಂತರ 4 ಆಟಗಾರರು ಆಯ್ಕೆಯಾಗುತ್ತಾರೆ.

ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ರೋಚಕತೆಯಿಂದ ಕೂಡಿರುತ್ತದೆ. ವಿಜೇತ ಆಟಗಾರನಿಗೆ 12,000 ಯುಎಸ್ ಡಾಲರ್ ನಗದು ಸೇರಿದಂತೆ ಪಾರಿತೋಷಕ ಹಾಗೂ ಪ್ರಶಸ್ತಿಗಳು ಇರುತ್ತವೆ.

ಇರಾನ್, ಮ್ಯಾನ್ಮಾರ್, ಸಿರಿಯಾ, ಥೈಲ್ಯಾಂಡ್, ಹಾಂಕಾಂಗ್, ಕಥಾರ್, ಮಲೇಷಿಯಾ, ವೇಲ್ಸ್, ಚೈನಾದಿಂದ ಒಟ್ಟು 16 ಆಟಗಾರರು ಹಾಗೂ ಭಾರತದಿಂದ 9 ಮಂದಿ ಆಟಗಾರರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಎಸಿಬಿಎಸ್‍ನ ಪ್ರಧಾನ ಕಾರ್ಯದರ್ಶಿ ಮಿಚುಯಲ್ ಅಲ್ ಕೋರಿ ತಿಳಿಸಿದರು.

ಭಾರತ ತಂಡದಲ್ಲಿ ಪಂಕಜ್ ಅದ್ವಾನಿ, ಮನನ್ ಚಂದ್ರ, ಲಕ್ಷ್ಮಣ್ ರಾವತ್, ಕಮಲ್ ಚಾಲ್ವಾ, ಆದಿತ್ಯ ಮೆಹ್ತಾ, ಸೌರವ್ ಕೊತಾರಿ, ಸಂದೀಪ್ ಗುಲಾತಿ, ಯೋಗೇಶ್ ಕುಮಾರ್ ಪಾಲ್ಗೊಳ್ಳುತ್ತಿದ್ದಾರೆ.

ಈ ಪಂದ್ಯಾವಳಿ ಬೆಂಗಳೂರಿನಲ್ಲಿ ನಡೆಯುತ್ತಿ ರುವುದು ಹೆಮ್ಮೆ ತಂದಿದೆ ಎಂದು ಕರ್ನಾಟಕ ಬಿಲಿಯಡ್ರ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಅರವಿಂದ್ ತರೂರ್ ಖುಷಿ ವ್ಯಕ್ತಪಡಿಸಿದರು. ಉಪಾಧ್ಯಕ್ಷ ಜಯರಾಜ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ