ಟ್ರ್ಯಾಕ್ಟರ್ ಪಲ್ಟಿಯಾಗಿ ಮೂವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Tractor

ಶ್ರೀರಂಗಪಟ್ಟಣ, ಮೇ 30- ತಾಲ್ಲೂಕಿನ ನೇರಲಕೆರೆ ಬಳಿ ಸೈಜುಗಲ್ಲು ತುಂಬಿಕೊಂಡು ಚಲಿಸುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಚಾಲಕ ಸೇರಿ ಮೂವರು ಸ್ಥಳದಲ್ಲಿಯೇ ಅಸುನೀಗಿದ ದಾರುಣ ಘಟನೆ ಜರುಗಿದೆ. ತಾಲ್ಲೂಕಿನ ದೊಡ್ಡಪಾಳ್ಯ ಗ್ರಾಮದ ದೇಶಿಗೌಡರ ಮಗ, ಟ್ರ್ಯಾಕ್ಟರ್ ಚಾಲಕ ಪ್ರಸನ್ನ(35), ಹಂಗರಹಳ್ಳಿ ಗ್ರಾಮದ ಟ್ರ್ಯಾಕ್ಟರ್ ಮಾಲೀಕ ರಾಜು ಅವರ ಮಗ ನಿತಿನï(21), ಇದೇ ಗ್ರಾಮದ ನಾಥೇಗೌಡರ ಮಗ ಪ್ರವೀಣ್(22), ಮೃತ ದುದ್ರ್ಯೆವಿಗಳು.

ಹಂಗರಹಳ್ಳಿ ಕಲ್ಲು ಕ್ವಾರೆಯಿಂದ ಟಿ.ನರಸೀಪುರ ತಾಲ್ಲೂಕು ಯಾಚೇನಹಳ್ಳಿ ಗ್ರಾಮಕ್ಕೆ ನಿನ್ನೆ ಟ್ರ್ಯಾಕ್ಟರ್ ನಲ್ಲಿ ಸೈಜುಗಲ್ಲು ತುಂಬಿಕೊಂಡು ಸಾಗುತ್ತಿದ್ದಾಗ, ನೇರಲಕೆರೆ ಗ್ರಾಮದ ಸಮೀಪ ಮರಿಯಯ್ಯನ ಕೆರೆ ಬಳಿ ಬರುತ್ತಿದ್ದಂತೆ, ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಪಲ್ಟಿ ಹೊಡೆದಿದೆ. ಪರಿಣಾಮ ಮೂವರು ಟ್ರ್ಯಾಕ್ಟರ್ ಕೆಳಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿಷಯ ಅರಿತ ಕ್ಷೇತ್ರದ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ, ಡಿವೈಎಸ್ ಪಿ ಯೋಗೇಂದ್ರನಾಥ್, ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಘಟನೆಯ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin