ಟ್ರಾಕ್ಟರ್ ಪಲ್ಟಿ: ಬಾಲಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident--012ಚನ್ನಪಟ್ಟಣ, ಡಿ.29- ಚಾಲಕನ ನಿಯಂತ್ರಣ ತಪ್ಪಿಟ್ರಾಕ್ಟರ್‍ನ ಪಲ್ಟಿ ಹೊಡೆದ ಪರಿಣಾಮ ಇಂಜಿನ್ ಮೇಲೆ ಕುಳಿತಿದ್ದ 13ರ ಪೋರನೊರ್ವ ಇಂಜಿನ್ ಅಡಿಗೆ ಸಿಲುಕಿ ಧಾರುಣವಾಗಿ ಸಾವನಪ್ಪಿರುವ ಘಟನೆ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ಜಗದಪುರದ ಬಳಿ ನಡೆದಿದೆ. ತಾಲ್ಲೂಕಿನ ಇಗ್ಗಲೂರು ಬಳಿಯ ಮಾದೇಗೌಡನದೊಡ್ಡಿಯ ಮಲ್ಲೇಶ್ ಎಂಬುವರ ಮಗ ಎಂ. ವಿಶಾಲ್‍ಗೌಡ(13) ಮೃತಪಟ್ಟ ಬಾಲಕ.

ರಸ್ತೆಯಲ್ಲಿ ಹಳ್ಳವಿದ್ದ ಪರಿಣಾಮ, ಹಳ್ಳಕ್ಕೆ ಇಂಜಿನ್ ಚಕ್ರಗಳು ಹರಿದು ಏಕಾಎಕಿ ಇಂಜಿನ್ ಮಗುಚಿ ಬಿದ್ದಿದೆ. ತಕ್ಷಣ ಮೇಲೆ ಕುಳಿತಿದ್ದ ಬಾಲಕ ವಿಶಾಲ್‍ಗೌಡ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾವನಪ್ಪಿದರೆ, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈ ಸಂಬಂಧ ಅಕ್ಕೂರು ಪೊೀಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಮಲ್ಲೇಶ್‍ಗೆ ಒಂದು ಗಂಡು, ಒಂದು ಹೆಣ್ಣು ಮಗಳಿದ್ದು, ಮಗ ಜೆ.ಬ್ಯಾಡರಹಳ್ಳಿಯ ಬಿ.ಜಿ.ಎಸ್. ಗಾರ್ಡನ್ ಇಂಗ್ಲಿಸ್ ಶಾಲೆಯಲ್ಲಿ 8 ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದನೆಂದು ಹೇಳಲಾಗಿದೆ, ಪ್ರತಿಭಾವಂತನಾಗಿದ್ದ ಆತ ಶಾಲೆಯಲ್ಲಿ ಒಳ್ಳೆಯ ಹೆಸರು ಪಡೆದಿದ್ದ.ಮಗನನ್ನು ಕಳೆದುಕೊಂಡ ಕುಟುಂಬದ ರೋಧನ ಮುಗಿಲು ಮುಟ್ಟತ್ತು. ಒಳ್ಳೆಯ ವಿದ್ಯಾರ್ಥಿಯನ್ನು ಕಳೆದು ಕೊಂಡ ಬಿಜಿಎಸ್ ಶಾಲೆಯ ಆಡಳಿತವರ್ಗ, ಶಿಕ್ಷಕವರ್ಗ, ಸಹಪಾಠಿ ವಿದ್ಯಾರ್ಥಿಗಳು ಮೃತ ಎಂ.ವಿಶಾಲ್‍ಗೌಡನಿಗೆ ಶ್ರದ್ದಾಂಜಲಿ ಅರ್ಪಿಸಿ ಕಂಬನಿ ಮಿಡಿದಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

4 thoughts on “ಟ್ರಾಕ್ಟರ್ ಪಲ್ಟಿ: ಬಾಲಕ ಸಾವು

Comments are closed.