ಬೆಂಗಳೂರಿಗರೇ ನಾಳೆ ವಾಹನ ಹೊರತೆಗೆಯುವ ಮುನ್ನ ಇಲ್ಲಿ ಗಮನಿಸಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.20- ಅರಮನೆ ಮೈದಾನದ ಕೃಷ್ಣ ವಿಹಾರ್ ಆವರಣದಲ್ಲಿ ಪಂಚಮಸಾಲಿ ವೀರಶೈವ ಮಹಾಸಭಾ ಸಮಾವೇಶವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಸ್ವಾಮೀಜಿಗಳು, ಗಣ್ಯರು, ಆಹ್ವಾನಿತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇರುವುದರಿಂದ ಅರಮನೆ ಮೈದಾನ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.

ಆ ಭಾಗದಲ್ಲಿ ಸಂಚಾರ ದಟ್ಟಣೆ ಅಧಿಕವಾಗುವ ಸಾಧ್ಯತೆಗಳಿರುವುದರಿಂದ ಈ ರಸ್ತೆಗಳನ್ನು ಬಳಸುವವರು ಪರ್ಯಾಯ ಮಾರ್ಗಗಳನ್ನು ಬಳಸಲು ಕೋರಲಾಗಿದೆ. ಬಸ್, ಟೆಂಪೋ ಟ್ರಾವೆಲರ್‍ಗೆ ವ್ಯವಸ್ಥೆ: ಮೈಸೂರು ರಸ್ತೆ ಕಡೆಯಿಂದ ಬರುವ ಬಸ್‍ಗಳು, ಟೆಂಪೋಗಳು ಮೈಸೂರು ರಸ್ತೆ- ನಾಯಂಡಹಳ್ಳಿ- ಎಡ ತಿರುವ, ಸುಮನಹಳ್ಳಿ-ಡಾ.ರಾಜಕುಮಾರ್ ಸಮಾಧಿ, ತುಮಕೂರುಸ್ತೆ- ಬಲ ತಿರುವು-ಗೊರಗುಂಟೆಪಾಳ್ಯ ಜಂಕ್ಷನ್- ಎಡ ತಿರುವು-ಬಿಇಎಲ್-ಹೆಬ್ಬಾಳ ಮೇಲು ಸೇತುವೆ-ಮೇಖ್ರಿ ವೃತ್ತ ಸರ್ವೀಸ್ ರಸೆ-ಜಯಮಹಲ್ ರಸ್ತೆ ಮೂಕ ಸಾಗಿ ಸರ್ಕಸ್ ಮೈದಾನ ಆವರಣದಲ್ಲಿ ನಿಲುಗಡೆ ಮಾಡಲು ವ್ಯವಸ್ಥೆ ಕಲ್ಪಿಸಿದೆ.

ತುಮಕೂರು ರಸ್ತೆ ಕಡೆಯಿಂದ ಬರುವವರು ತುಮಕೂರು ರಸ್ತೆ-ಬಲ ತಿರುವು-ಗೊರಂಗುಟೆಪಾಳ್ಯ ಜಂಕ್ಷನ್-ಎಡ ತರಿವು-ಬಿಇಎಲ್- ಹೆಬ್ಬಾಳ ಮೇಲು ಸೇತುವೆ ಮೂಲಕ ಬಂದು ಸರ್ಕಸ್ ಮೈದಾನ ಆವರಣದಲ್ಲಿ ನಿಲುಗಡೆ ಮಾಡಲು ಅನುವು ಮಾಡಿಕೊಡಲಾಗಿದೆ. ಕನಕಪುರ ರಸ್ತೆ ಕಡೆಯಿಂದ ಬರುವವರು ಕನಕಪುರ ರಸ್ತೆ-ಬನಶಂಕರಿ ದೇವಸ್ಥಾನ ಬಸ್ ನಿಲ್ದಾಣ-ಬಲ ತಿರುವು-ರಾಜಲಕ್ಷ್ಮಿ ಜಂಕ್ಷನ್ ಮೂಲಕ ಜಯನಗರ 4ನೇ ಮೈನ್-ಸೌತ್ ಎಂಡ್ ವೃತ್ತ-ಆರ್.ವಿ.ಜಂಕ್ಷನ್-ಲಾಲ್‍ಬಾಗ್ ಪಶ್ಚಿಮ ಗೇಟ್-ಮಿನರ್ವ ವೃತ್ತ-ಜೆ.ಸಿ.ರಸ್ತೆ- ಜಯಮಹಲ್ ರಸ್ತೆ ಮೂಲಕ ಸರ್ಕಸ್ ಮೈದಾನ ಆವರಣದಲ್ಲಿ ನಿಲುಗಡೆ ಮಾಡಲು ವ್ಯವಸ್ಥೆ ಕಲ್ಪಿಸಿದೆ.

ಬನ್ನೇರುಘಟ್ಟ ರಸ್ತೆ ಕಡೆಯಿಂದ ಬರುವವರು- ಬನ್ನೇರುಘಟ್ಟ ರಸ್ತೆ-ಡೈರಿ ವೃತ್ತ-ಎಡ ತಿರುವು- ಡಾ.ಮರಿಗೌಡ ರಸ್ತೆ-ಕೆ.ಎಚ್.ವೃತ್ತ-ಲಾಲ್‍ಬಾಗ್ ಮುಖ್ಯದ್ವಾರ-ಮಿನರ್ವ ವೃತ್ತ-ಬಲ ತಿರುವು ಪಡೆದು ಕಂಟೋನ್ಮೆಂಟ್ ಅಂಡರ್‍ಪಾಸ್ -ಜಯಮಹಲ್ ರಸ್ತೆ ಮೂಲಕ ಸರ್ಕಸ್ ಮೈದಾನ ಆವರಣದಲ್ಲಿ ನಿಲುಗಡೆ ಮಾಡಲು ವ್ಯವಸ್ಥೆ ಕಲ್ಪಿಸಿದೆ.

ಹೊಸೂರು ಕಡೆಯಿಂದ ಬರುವ ವಾಹನಗಳು, ಹೊಸೂರು ರಸ್ತೆ-ಮಡಿವಾಳ ಚೆಕ್‍ಪೋಸ್ಟ್-ಎಡ ತಿರುವು-ಡೈರಿ ವೃತ್ತಿ-ಡಾ.ಮರಿಗೌಡ ರಸ್ತೆ-ಕೆ.ಎಚ್.ವೃತ್ತ-ಲಾಲ್‍ಬಾಗ್ ಮುಖ್ಯದ್ವಾರ-ಮಿನರ್ವ ವೃತ್ತ, ಮೌಂಟ್ ಕಾರ್ಮೆಲ್ ಕಾಲೇಜು-ವಸಂತನಗರ ಅಂಡರ್‍ಪಾಸ್-ಎಂ.ವಿ.ಜಯರಾಮನ್ ರಸ್ತೆ-ಉದಯ ಟಿವಿ ಜಂಕ್ಷನ್-ಕಂಟೋನ್ಮೆಂಟ್ ಅಂಡರ್‍ಪಾಸ್-ಜಯಮಹಲ್ ರಸ್ತೆ ಮೂಲಕ ಸರ್ಕಸ್ ಮೈದಾನ ಆವರಣದಲ್ಲಿ ನಿಲುಗಡೆ ಮಾಡಲು ಅನುವು ಮಾಡಿಕೊಡಲಾಗಿದೆ.

ಬಳ್ಳಾರಿ ರಸ್ತೆ ಕಡೆಯಿಂದ ಬರುವವರು ಕೊಡಿಗೇಹಳ್ಳಿ ಗೇಟ್-ಹೆಬ್ಬಾಳ ಮೇಲು ಸೇತುವೆ-ಮೇಕ್ರಿ ವೃತ್ತ ಸರ್ವೀಸ್ ರಸ್ತೆ-ಜಯಮಹಲ್ ರಸ್ತೆ ಮೂಲಕ ಸರ್ಕಸ್ ಮೈದಾನ ಆವರಣದಲ್ಲಿ ನಿಲುಗಡೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ ದ್ವಿಚಕ್ರ ವಾಹನ ನಿಲುಗಡೆ: ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಬರುವವರು ರಮಣಮಹರ್ಷಿ ರಸ್ತೆಯ ತ್ರಿಪುರವಾಸಿನಿ ಆವರಣ ಗೇಟ್ ನಂ.2ರ ಮೂಲಕ ಹಾಗೂ ಜಯಮಹಲ್ ರಸ್ತೆ ಮೂಲಕ ಪ್ರವೇಶಿಸಿ, ತ್ರಿಪುರವಾಸಿನಿ ಆವರಣದಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ ಹಾಗೂ ತ್ರಿಪುರವಾಸಿನಿ ಗೇಟ್ ನಂ.3ರ ಮೂಲಕ ನಿರ್ಗಮಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಗಣ್ಯ ವ್ಯಕ್ತಿಗಳ ವಾಹನ: ಗಣ್ಯ ಮತ್ತು ಅತಿಗಣ್ಯ ವ್ಯಕ್ತಿಗಳ ವಾಹನಗಳನ್ನು ರಮಣಮಹರ್ಷಿ ರಸ್ತೆ ಮೂಲಕ ಕೃಷ್ಣ ವಿಹಾರ ಮೈದಾನದಲ್ಲಿ ನಿಲುಗಡೆ ಮಾಡಲು ಅನುವು ಮಾಡಿಕೊಡಲಾಗಿದೆ. ನಿಲುಗಡೆ ನಿಷೇಧ: ನಾಳೆ ಬೆಳಗ್ಗೆ 4 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ರಮಣಮಹರ್ಷಿ ರಸ್ತೆ, ಸರ್.ಸಿ.ವಿ.ರಾಮನ್ ರಸ್ತೆ, ಬಳ್ಳಾರಿ, ಹೆಬ್ಬಾಳ ಮೇಲುಸೇತುವೆ, ಹೆಚ್.ಕ್ಯೂಟಿಸಿ ಮತ್ತು ಮೇಕ್ರಿ ವೃತ್ತ, ಜಯಮಹಲ್, ತರಳಬಾಳು, ಎಮ.ವಿ.ಜಯರಾಮನ್, ಪ್ಯಾಲೇಸ್, ಪ್ಯಾಲೇಸ್ ಕ್ರಾಸ್, ಪಿಆರ್‍ಟಿಸಿ ಜಂಕನ್‍ನಿಂದ ವಾಟರ್ ಟ್ಯಾಂಕ್ ಜಂಕ್ಷನ್ ಹಾಗ ಟಿ.ಚೌಡಯ್ಯ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಈ ಸಂಚಾರ ಮಾರ್ಪಾಡುಗಳಿಗೆ ಸಹಕರಿಸಬೇಕಾಗಿ ಸಾರ್ವಜನಿಕರಲ್ಲಿ ಕೋರಲಾಗಿದೆ.

Facebook Comments