ಸಂಚಾರ ನಿಯಮ ಉಲ್ಲಂಘಿಸುವವರ ಅತಿ ಹೆಚ್ಚು ಫೋಟೋ ತೆಗೆದ ಪೊಲೀಸರಿಗೆ ಸನ್ಮಾನ..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜು.6- ಸಂಚಾರ ನಿಯಮ ಉಲ್ಲಂಘಿಸಿ ಪರಾರಿಯಾಗುವ ವಾಹನಗಳ ಫೋಟೋಗಳನ್ನು ಅತಿ ಹೆಚ್ಚು ಸೆರೆಹಿಡಿದಿರುವ ಸಂಚಾರಿ ಪೊಲೀಸರಿಗೆ ಇನ್ಸ್‍ಪೆಕ್ಟರ್ ಬಹುಮಾನ ನೀಡಿ ಪ್ರೋತ್ಸಾಹಿಸಿದ್ದಾರೆ.

ದೇವರಾಜ ಸಂಚಾರಿ ಠಾಣೆ ಇನ್ಸ್‍ಪೆಕ್ಟರ್ ಮುನಿಯಪ್ಪ ಅವರು ಛತ್ರಪತಿ, ವಿದ್ಯಾಸಾಗರ್ ಹಾಗೂ ಗುರುಮಲ್ಲಪ್ಪ ಅವರಿಗೆ ಬಹುಮಾನ ನೀಡಿ ಗೌರವಿಸಿದ್ದಾರೆ.

ವಿದ್ಯಾಸಾಗರ್ ಅವರು ಅತಿ ಹೆಚ್ಚು ಫೋಟೋಗಳನ್ನು ತೆಗೆದು 159 ಪ್ರಕರಣ ದಾಖಲಿಸಿದ್ದಾರೆ. ಹಾಗೆಯೇ ಛತ್ರಪತಿ ಅವರು 106, ಗುರುಮಲ್ಲಪ್ಪ 73 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಏಕಮುಖ ರಸ್ತೆಯಲ್ಲಿ ಸಂಚಾರ, ಸಿಗ್ನಲ್ ಜಂಪ್ ಸೇರಿದಂತೆ ಇನ್ನೂ ಹಲವು ಸಂಚಾರ ನಿಯಮ ಉಲ್ಲಂಘಿಸಿದವರ ಫೋಟೋಗಳನ್ನು ಈ ಮೂವರು ಪೊಲೀಸರು ಹೆಚ್ಚಾಗಿ ಪ್ರಕರಣ ದಾಖಲಿಸಿದ್ದಾರೆ. ಹಾಗಾಗಿ ಅವರನ್ನು ಪ್ರೋತ್ಸಾಹಿಸಲಾಗಿದೆ.

Facebook Comments