ಚಲಿಸುತ್ತಿದ್ದ ರೈಲಿನಿಂದ ತಳ್ಳಿ ಪತ್ನಿಯನ್ನು ಕೊಂದ ಪತಿ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಜ.14- ಚಲಿಸುತ್ತಿರುವ ರೈಲಿನ ಬಾಗಿಲ ಬಳಿ ನಿಂತಿದ್ದ ಪತ್ನಿಯನ್ನು, ಆಕೆಯ ಪತಿ ಹೊರಗೆ ತಳ್ಳಿ ಕೊಲೆ ಮಾಡಿರುವ ಘಟನೆ ಇಲ್ಲಿ ವರದಿಯಾಗಿದೆ. ಮೊದಲ ಹೆಂಡತಿಯ 7 ವರ್ಷದ ಮಗು ಹಾಗೂ ಪತ್ನಿಯೊಂದಿಗೆ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಸ್ಥಳೀಯ ರೈಲಿನಲ್ಲಿ ಹಿಂತಿರುಗುತ್ತಿದ್ದರು. ಚೇಂಬೂರ್ ಮತ್ತು ಗೋವಂಡಿ ರೈಲು ನಿಲ್ದಾಣದ ನಡುವೆ ಚಲಿಸುತ್ತಿದ್ದ ವೇಳೆ ಬಾಗಿಲ ಬಳಿ ನಿಂತಿದ್ದ 26 ವರ್ಷದ ಪತ್ನಿಯನ್ನು ಹೊರಕ್ಕೆ ತಳ್ಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆ ತೀವ್ರ ಗಾಯಗಳಿಂದ ಪ್ರಜ್ಞಾ ಕಳೆದುಕೊಂಡು ಸ್ಥಳದಲ್ಲೇ ಮೃತ ಪಟ್ಟಿದ್ದಾಳೆ. 31 ವರ್ಷದ ಈ ಆರೋಪಿಗೆ ಈಕೆ 2ನೇ ಹೆಂಡತಿಯಾಗಿದ್ದು, ಮನ್‍ಖುರ್ದ್ ಪ್ರದೇಶದಲ್ಲಿ ವಾಸಿಸುತ್ತಿದ್ದರೆಂದು ತಿಳಿದುಬಂದಿದೆ.  ಆರೋಪಿ ಮತ್ತು ಸಂತ್ರಸ್ತೆ ಕೂಲಿ ಕೆಲಸ ಮಾಡುತ್ತಿದ್ದು, ಎರಡು ತಿಂಗಳ ಹಿಂದೆಯಷ್ಟೇ ಮದುಮೆಯಾಗಿದ್ದರು.

ಆತನಿಗೆ 7 ವರ್ಷದ ಮಗಳಿದ್ದಳು. ಅದು ಮೊದಲ ಹೆಂಡತಿ ಮಗುವಾಗಿತ್ತು. ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‍ಪಿ) ತಿಳಿಸಿದ್ದಾರೆ. ಆರೋಪಿ ರೈಲ್ವೆ ಪೊಲೀಸರ ಕಣ್ತಪ್ಪಿಸಿ ಓಡಿಹೋಗಲು ಯತ್ನಿಸಿದ್ದ.

ಜಾಗ್ರತರಾದ ರೈಲ್ವೆ ಪೊಲೀಸರು ಸ್ಥಳದಲ್ಲಿ ಬಂಧಿಸಿದ್ದಾರೆ. ರೈಲಿನಿಂದ ಹೊರಗೆ ಬಿದ್ದಿದ್ದ ಆತನ ಪತ್ನಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿತಾದರೂ, ಆಕೆ ಆಸ್ಪತ್ರೆ ತಲುಪುವುರೊಳಗೆ ಸಾವಿಗೀಡಾಗಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ದೂರು ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Facebook Comments