ಹಾಸನದಿಂದ‌ಲೂ ರೈಲು ಸಂಚಾರ ಆರಂಭಿಸುವಂತೆ ಎಚ್.ಡಿ.ರೇವಣ್ಣ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ರಾಜ್ಯದಲ್ಲಿ ಈಗಾಗಲೇ ಕೆಲ‌ ಜಿಲ್ಲೆಯಲ್ಲಿ ರೈಲು‌ ಸಂಚಾರ ಆರಂಭವಾಗಿದ್ದು ಅದರಂತೆ ಹಾಸನ ಜಿಲ್ಲೆಗೂ ರೈಲು ಸಂಚಾರ ಆರಂಭಿಸಬೇಕು ಎಂದು ಮಾಜಿ‌ ಸಚಿವ ಎಚ್.ಡಿ.ರೇವಣ್ಣ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು ಬಸ್ ಪ್ರಯಾಣ ದರಕ್ಕಿಂತ ರೈಲು ಪ್ರಯಾಣ ದರ ಕಡಿಮೆಯಾಗಿದ್ದು‌ ಇದರಿಂದ ‌ಸಾಮಾನ್ಯ ಜನರು ಹಾಗೂ ದಿನನಿತ್ಯ ಕೆಲಸಕ್ಕೆ ನಗರಗಳಿಗೆ ಸಂಚರಿಸಲು ಅನುಕೂಲವಾಗಲಿದೆ. ಆದ್ದರಿಂದ ಅರಸೀಕೆರೆಯಿಂದ- ಮೈಸೂರು, ಹಾಸನದಿಂದ -ಬೆಂಗಳೂರು, ಮಂಗಳೂರಿನಿಂದ- ಹಾಸನಕ್ಕೆ ರೈಲು‌ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಹಾಸನದಿಂದ ಬೆಂಗಳೂರಿಗೆ ಹೋಗುವ ಬೆಳಗಿನ ರೈಲಿನಲ್ಲಿ ಹಾಸನ, ಚನ್ನರಾಯಪಟ್ಟಣ , ಹಿರೀಸಾವೆಯಿಂದ ಸಾವಿರಾರು ನೌಕರರು, ಕಾರ್ಮಿಕರು ಓಡಾಡಲಿದ್ದು ರೈಲು ‌ಸಂಚಾರ ಆರಂಭವಾದರೆ ಹೆಚ್ಚು ಅನುಕೂಲವಾಗಲಿದೆ . ಈ‌ ಬಗ್ಗೆ ಸರ್ಕಾರ‌ ಗಮನಹರಿಸಬೇಕು;
ಈಗಾಗಲೇ ಬೆಳಗಾಂ, ಶಿವಮೊಗ್ಗ ಜಿಲ್ಲೆಯಲ್ಲಿ ಶ್ರಮಿಕ‌ ಹೆಸರಿನಲ್ಲಿ ರೈಲು ಸಂಚಾರ‌ ಆರಂಭವಾಗಿದೆ‌ ಅದರಂತೆ ಮುಖ್ಯಮಂತ್ರಿ ಹಾಸನದ ರೈಲು ಸಂಚಾರಕ್ಕೂ ಅನುವು‌ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

# ಕಾಲೇಜು ಸ್ಥಳಾಂತರ ಬೇಡ ;
ಜಿಲ್ಲೆಯ ಹೆತ್ತೂರು- ಅರೇಹಳ್ಳಿ ಹಾಗೂ ಹಳ್ಳಿ ಮೈಸೂರು ಇಲ್ಲಿರುವ ಕಾಲೇಜುಗಳನ್ನು ಸ್ಥಳಾಂತರ ಮಾಡಬಾರದು ಎಂದು ಒತ್ತಾಯಿಸಿದ ರೇವಣ್ಣ ಅವರು ಸ್ಥಳಾಂತರ ಮಾಡುವುದರಿಂದ ಬಡ ಹಾಗೂ ಗ್ರಾಮಿಣ‌ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಅನಾನುಕೂಲವಾಗಲಿದೆ ಹೆತ್ತೂರು ಗ್ರಾಮದಲ್ಲಿರುವ ಕಾಲೇಜಿನಿಂದ ಸಕಲೇಶಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಯಾವುದೇ ಕಾರಣಕ್ಕೂ ಸಹ ಕಾಲೇಜುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವುದು ಬೇಡ ಎಂದು ಆಗ್ರಹಿಸಿದರು.

# ಪ್ರಾಥಮಿಕ ಶಿಕ್ಷಣ ಬಲಗೊಳ್ಳಲಿ;
ರಾಜ್ಯ ಸರ್ಕಾರ ಶಿಕ್ಷಣ ನೀತಿಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು ಪ್ರಾಥಮಿಕ ಹಂತದ ಶಿಕ್ಷಣವನ್ನು ಬಲಪಡಿಸಬೇಕು ; ಈ ನಿಟ್ಟಿನಲ್ಲಿ ರಾಜ್ಯದ ಪ್ರತಿ ಪಂಚಾಯಿತಿಗಳಲ್ಲಿ ಒಂದರಿಂದ ಐದನೇ ತರಗತಿಯ ಶಾಲೆಗಳನ್ನು ತೆರೆಯಬೇಕೆಂದು ರೇವಣ್ಣ ಅವರು ಒತ್ತಾಯಿಸಿದರು . ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ತೆರೆಯದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕುಂಠಿತವಾಗಿ ಶಿಕ್ಷಣ ಕ್ಷೇತ್ರಕ್ಕೆ‌ಹಾನಿ ಸಂಭವಿಸಲಿದೆ ಎಂದರು.

# ರೈಲ್ವೆ ಮೇಲ್ಸೇತುವೆ ಪೂರ್ಣಗೊಳಿಸಿ;
ರೈಲ್ವೆ ಇಲಾಖೆಯಿಂದ ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ರೈಲ್ವೆ ಮೇಲ್ಸೇತುವೆಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಬೇಕು ಇಲ್ಲವಾದರೆ ನಗರದಲ್ಲಿ ಹಾಗೂ ಸಂಪರ್ಕ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಹೆಚ್ಚು ತೊಡಕಾಗಲಿದ್ದು ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿದರು.

# ಹುಡಾದಿಂದ ಮಾತ್ರ ಲೇಔಟ್ ಆಗಲಿ..!!
ನಗರದ ಸುತ್ತಮುತ್ತ ನಿವೇಶನಗಳನ್ನು ಹುಡಾದಿಂದ ಹಾಗೂ ಗೃಹ ನಿರ್ಮಾಣ ಮಂಡಳಿ ಗಳಿಂದಲೇ ಮಾತ್ರ ಯೋಜನೆ ರೂಪಿಸಬೇಕು ಖಾಸಗಿಯವರಿಗೆ ಲೇಔಟ್ ಮಾಡಲು ಬಿಡಬಾರದು ಎಂದು ಒತ್ತಾಯಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ನಿರ್ಮಾಣ ಮಾಡಬೆಕು ಈ‌ ಮೂಲಕ ಮಧ್ಯಮವರ್ಗದ ಜನರಿಗೆ ಹಾಗೂ ನೌಕರರಿಗೆ ನಿವೇಶನಗಳನ್ನು ಕಡಿಮೆ‌ ದರದಲ್ಲಿ ಒದಗಿಸಬೇಕೆಂದು ಆಗ್ರಹಿಸಿದರು.

Facebook Comments

Sri Raghav

Admin