ಸರ್ಕಾರಿ ನೌಕರರ ವರ್ಗಾವಣೆ 10 ದಿನ ವಿಸ್ತರಣೆ

ಈ ಸುದ್ದಿಯನ್ನು ಶೇರ್ ಮಾಡಿ

transfer-1
ಬೆಂಗಳೂರು, ಆ.1-ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಆ.10ರವರೆಗೆ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಸಕ್ತ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಯನ್ನು ಜು.31ರವರೆಗೆ ಮಾಡಲು ಅವಕಾಶ ನೀಡಿ ಸರ್ಕಾರ ಜೂ.23 ರಂದು ಆದೇಶಿಸಲಾಗಿತ್ತು.  ನಿನ್ನೆ ಈ ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೆ 10 ದಿನಗಳ ಕಾಲ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಯನ್ನು ವಿಸ್ತರಿಸಿದೆ. ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಆಯಾ ಇಲಾಖೆಗಳ ಕಾರ್ಯನಿರತ ವೃಂದಬಲದ ಶೇ.4ರಷ್ಟಕ್ಕೆ ಸೀಮಿತಗೊಳಿಸಿ ವರ್ಗಾವಣೆ ಮಾಡಲು ಆಯಾ ಇಲಾಖೆ ಮುಖ್ಯಸ್ಥರಿಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಕಂದಾಯ, ಲೋಕೋಪಯೋಗಿ, ಅರಣ್ಯ ಸೇರಿದಂತೆ ಹಲವು ಇಲಾಖೆಗಳು ಸಾಕಷ್ಟು ವರ್ಗಾವಣೆಗಳನ್ನು ಮಾಡಿದ್ದವು.

Facebook Comments

Sri Raghav

Admin