ಐಎಎಸ್ ವರ್ಗಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.16- ಆಡಳಿತ ಯಂತ್ರದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಏಳು ಉಪವಿಭಾಗಗಳ ಉಪವಿಭಾಗಾಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ.  ಕೆಎಎಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಆ ಸ್ಥಾನಗಳಿಗೆ 2017ನೇ ಸಾಲಿನ ಏಳು ಮಂದಿ ಯುವ ಐಎಎಸ್ ಅಧಿಕಾರಿಗಳನ್ನು ಉಪವಿಭಾಗಾಧಿಕಾರಿಗಳನ್ನಾಗಿ ನಿಯೋಜನೆ ಮಾಡಲಾಗಿದೆ.

ಹುದ್ದೆಯ ನಿರೀಕ್ಷೆಯಲ್ಲಿದ್ದ ಶಿಕಾ ತನ್ವೀರ್ ಆಸೀಫ್ ಅವರನ್ನುಹೊಸಪೇಟೆಗೆಡಾ.ನವೀನ್ ಭಟ್ ಅವರನ್ನು ಹಾಸನಕ್ಕೆ, ಅಕ್ಷಯ್ ಶ್ರೀಧರ್‍ರನ್ನು ಬೀದರ್‍ಗೆ, ಡಾ.ದೀಲೇಶ್ ಸಾಸಿ ಅವರನ್ನು ಲಿಂಗಸಗೂರಿಗೆ ಡಾ.ಕೆ.ನಂದಿನಿ ದೇವಿ ಅವರನ್ನು ಮಧುಗಿರಿಗೆ, ಲೋಖಂಡೆ ಸ್ನೇಹಲ್ ಸುಧಾಕರ್‍ರನ್ನು ಇಂಡಿಗೆ ಹಾಗೂ ಬನ್ವರ್ ಸಿಂಗ್ ಅವರನ್ನು ಬಸವಕಲ್ಯಾಣದ ಉಪವಿಭಾಗಾಧಿಕಾರಿಗಳನ್ನಾಗಿ ವರ್ಗಾವಣೆ ಮಾಡಲಾಗಿದೆ.

Facebook Comments