ಸಾರಿಗೆ ನೌಕರರ ಜೈಲ್ ಬರೋ ಚಳವಳಿ: ಪೊಲೀಸ್ ಠಾಣೆಗೆ ಮುತ್ತಿಗೆ ಯತ್ನ, ಲಾಠಿ ಚಾರ್ಜ್

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ, ಏ.20- ಜೈಲ್ ಭರೋ ಚಳವಳಿ ನಡೆಸಲು ಮುಂದಾದ ಸಾರಿಗೆ ನೌಕರರ ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಕೋಲಾರ ಹೊರವಲಯದ ಸಂಗೊಂಡಹಳ್ಳಿ ಬಳಿ ನೂರಾರು ಸಾರಿಗೆ ನೌಕರರು ಜಮಾವಣೆಗೊಂಡು ಪ್ರತಿಭಟನೆ ನಡೆಸಲು ಮುಂದಾದಾಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ.

ನಿಷೇಧಾಜ್ಞೆ ಜಾರಿಯಲ್ಲಿದೆ. ಚಳವಳಿ ಕೈ ಬಿಡಿ ಎಂದು vಲೀಸರು ಮನವಿ ಮಾಡಿದರೂ ನೌಕರರು ಪೊಲೀಸರ ಮನವಿಯನ್ನು ಲೆಕ್ಕಿಸದೆ ಜೈಲ್ ಭರೋಗೆ ಮುಂದಾದರು. ಈ ವೇಳೆ ಗುಂಪು ಚದುರಿಸಿ ಹಲವರನ್ನು vಲೀಸರು ವಶಕ್ಕೆ ಪಡೆದರು. ಆ ಸಂದರ್ಭದಲ್ಲಿ ನಮ್ಮವರನ್ನು ಬಿಡಿ ಎಂದು ಕೋಲಾರ ಗ್ರಾಮಾಂತರ vಲೀಸ್ ಠಾಣೆ ಮುಂದೆ ನೌಕರರು ಜಮಾವಣೆಗೊಂಡರು. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

 

ಆರನೇ ವೇತನಕ್ಕೆ ಆಗ್ರಹಿಸಿ ಜೈಲ್ ಬರೋ ನೌಕರರು ಪೊಲೀಸರ ವಶಕ್ಕೆ
ಬೆಂಗಳೂರು,ಏ.20- ಎರಡು ವಾರಗಳಿಂದ ಆರನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರ ಮುಂದುವರೆದಿದ್ದು, ಇಂದು ವಿವಿಧೆಡೆ ಜೈಲ್ ಭರೋ ಪ್ರತಿಭಟನೆಗೆ ಮುಂದಾದ ನೌಕರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಹುತೇಕ ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆಯನ್ನು ತೀವ್ರಗೊಳಿಸಿ ದ್ದಾರೆ. ನಿನ್ನೆ ಉಪವಾಸ ಸತ್ಯಾಗ್ರಹ ಮಾಡಲು ಮುಂದಾದ ನೌಕರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇಂದು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿ ಜೈಲ್ ಭರೋ ನಡೆಸಲು ಮುಂದಾದ ಹಲವು ನೌಕರರನ್ನು ಪೊಲೀಸರು ವಶಕ್ಕೆ ಪಡೆದರು.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಸಾರಿಗೆ ನಿಗಮದ ನೌಕರರು ಪ್ರತಿಭಟನೆಯನ್ನು ಮುಂದುವರೆಸಿ ತಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿದ್ದಾರೆ. ಮುಷ್ಕರದ ನಡುವೆಯೇ ಸಾವಿರಾರು ಬಸ್‍ಗಳ ಸಂಚಾರ ಪ್ರಾರಂಭವಾಗಿದೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಈಶಾನ್ಯ ವಾಯುವ್ಯ ಸೇರಿದಂತೆ ನಾಲ್ಕು ನಿಗಮಗಳಿಂದ ಶೇ.40 ರಷ್ಟು ಬಸ್‍ಗಳು ಸಂಚಾರ ಆರಂಭಿಸಿ ವೆಯಾದರೂ ಪ್ರಯಾಣಿಕರ ಪರದಾಟ ಮಾತ್ರ ತಪ್ಪಿಲ್ಲ.

ಇತ್ತ ಬೆಂಗಳೂರಿನ ಮೆಜೆಸ್ಟಿಕ್ ಮತ್ತು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‍ಗಳ ದರ್ಬಾರ್ ಎಂದಿನಂತೆ ಜೋರಾಗಿದೆ. ಖಾಸಗಿ ಹಾಗೂ ಸರ್ಕಾರಿ ಬಸ್‍ಗಳ ನಡುವೆ ಪ್ರಯಾಣಿಕರನ್ನು ಸೆಳೆಯಲು ಪೈಫೋಟಿ ನಡೆದಿದೆ. ಬಿಎಂಟಿಸಿ ಮತ್ತು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದೊಳಗೆ ಖಾಸಗಿ ಬಸ್‍ನವರು ಬಂದು ಪ್ರಯಾಣಿಕರನ್ನು ಸೆಳೆಯಲು ಪೈಫೋಟಿ ನಡೆಸಿದ್ದರಿಂದ ಚಾಲಕರು ಮತ್ತು ನಿರ್ವಾಕರ ನಡುವೆ ಮಾತಿನ ಚಕಮಮಕಿ ಕೂಡ ನಡೆದಿದೆ.

ಸಾರಿಗೆ ನೌಕರರ ಪದಾಕಾರಿಗಳೊಂದಿಗೆ ಸರ್ಕಾರ ಮಾತುಕತೆ ನಡೆಸಲು ಸಿದ್ದವಿಲ್ಲ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಜೊತೆ ಕೈ ಜೋಡಿಸಬೇಕು. ಮುಷ್ಕರವನ್ನು ಹಿಂಪಡೆದು ಕರ್ತವ್ಯಕ್ಕೆ ಹಾಜರಾಗಿ ತಮ್ಮ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದ್ದೇವೆ ಎಂದು ಸರ್ಕಾರ ಹೇಳಿದೆ. ಆದರೆ ಪಟ್ಟು ಬಿಡದ ನೌಕರರು ಮುಷ್ಕರವನ್ನು ಮುಂದುವರೆಸಿದ್ದಾರೆ. ಮುಷ್ಕರ ಪ್ರಾರಂಭವಾಗಿ ಎರಡು ವಾರ ಕಳೆದಿದ್ದು, ಪ್ರಯಾಣಿಕರ ಪರದಾಟವೂ ಮುಂದುವರೆದಿದೆ.

113 ಬಸ್‍ಗಳಿಗೆ ಹಾನಿ: ಬಸ್‍ಗಳ ಸಂಚಾರ ಹೆಚ್ಚಳದಿಂದಾಗಿ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವ, ಕಲ್ಲು ತೂರುವ ಘಟನೆಗಳು ಹೆಚ್ಚಾಗಿದ್ದು, ಈವರೆಗೆ 113 ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆಸಿ ಹಾನಿ ಮಾಡಲಾಗಿದೆ.

ಕೆಎಸ್‍ಆರ್‍ಟಿಸಿಯ 71, ಬಿಎಂಟಿಸಿಯ 6, ಈಶಾನ್ಯ ಸಾರಿಗೆ 13, ವಾಯುವ್ಯ ಸಾರಿಗೆ 23 ಸೇರಿದಂತೆ 113 ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಲಾಗಿದೆ. ಮುಷ್ಕರದ ನಡುವೆ ಇಂದು ನಾಲ್ಕು ನಿಗಮಗಳಿಂದ 5 ಸಾವಿರಕ್ಕೂ ಹೆಚ್ಚು ಬಸ್‍ಗಳು ಸಂಚಾರ ನಡೆಸಿವೆ. ಹಲವೆಡೆ ಬಸ್‍ಗಳ ಸಂಚಾರಕ್ಕೆ ಪೆÇಲೀಸ್ ಭದ್ರತೆ ಕಲ್ಪಿಸಲಾಗಿದೆ.

Facebook Comments