ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.21- ನಿರ್ದಿಷ್ಟ ದಿನಾಂಕದಂದು ಎಲ್ಲಾ ಭತ್ಯೆಗಳೊಂದಿಗೆ ಪೂರ್ಣ ಪ್ರಮಾಣದ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟ ನೇತೃತ್ವದಲ್ಲಿ ಮೌರ್ಯ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.

ಸರಿಯಾದ ಸಮಯಕ್ಕೆ ವೇತನವಿಲ್ಲದೆ , ಗಳಿಕೆ ನಗದೀ ಕರಣವಿಲ್ಲದೆ, ಬೋನಸ್ ಎಕ್ಸ್‍ಗ್ರೇಷಿಯಾ, ವೈದ್ಯಕೀಯ ಚಿಕಿತ್ಸೆ , ಓಟಿ ಭತ್ಯೆ ಇಲ್ಲದೆ ಹಲವಾರು ಸಮಸ್ಯೆಗಳಿಗೆ ಕಾರ್ಮಿಕರು ಸಿಲುಕಿದ್ದಾರೆ. ಇದರಿಂದ ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ. ಕೂಡಲೇ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಮುಷ್ಕರ ಸಮಯದಲ್ಲಿ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ವಜಾಗೊಂಡಿರುವ ಅಸಹಾಯಕ ಕಾರ್ಮಿಕರನ್ನು ಮರು ನೇಮಕ ಗೊಳಿಸಲು ಮತ್ತು ಅಮಾನತು ಹಾಗೂ ವರ್ಗಾವಣೆಗೊಳಿಸಿರುವ ಕಾರ್ಮಿಕರನ್ನು ಮರು ನೇಮಕ ಏ.6, 2021ರಂದು ಇದ್ದಂತೆ ಯಥಾಸ್ಥಿತಿಗೆ ಆದೇಶವನ್ನು ಮಾಡಲು ಒತ್ತಾಯಿಸಿದೆ.

ಮೂಲ ವೇತನಕ್ಕೆ ಶೇ.15ರಷ್ಟು ಮಧ್ಯಂತರ ಪರಿಹಾರವಾಗಿ ಘೋಷಿಸಬೇಕು. ನಿವೃತ್ತಿ, ನಿಧನ ಮತ್ತು ಸ್ವಯಂ ನಿವೃತ್ತಿ, ಕಾರ್ಮಿಕರ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

Facebook Comments