ಸಾರಿಗೆ ಕಚೇರಿಯಲ್ಲಿ ಹೆಚ್ಚುವರಿ ಹುದ್ದೆಗಳ ಸೃಷ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ಸಾರಿಗೆ ಇಲಾಖೆಯ ಚೆಕ್‍ಫೋಸ್ಟ್ ಹಾಗೂ ಇತರ ಆಯಕಟ್ಟಿನ ಕಚೇರಿಗಳಿಗೆ ಲಿಪಿಕ ವರ್ಗದ ಸಹಾಯಕ ಕಾರ್ಯದರ್ಶಿ/ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಕೇಂದ್ರ ಸ್ಥಾನೀಯ ಸಹಾಯಕರನ್ನು ಹಾಗೂ ತೆರಿಗೆ ಮತ್ತು ಖಜಾನೆ ಅಧಿಕಾರಿ ವೃಂದದವರನ್ನು ನೇಮಿಸಲು 10 ಹೊಸ ಹುದ್ದೆಗಳನ್ನು ಸೃಷ್ಟಿಸಲಾಗಿದೆ.

ಸಾರಿಗೆ ಕಚೇರಿಗಳಲ್ಲಿ ಈಗಾಗಲೇ ಮಂಜೂರಾಗಿರುವ 29 ಹುದ್ದೆಗಳ ಜೊತೆಗೆ ಹೆಚ್ಚವರಿಯಾಗಿ 10 ಹುದ್ದೆಗಳನ್ನು ಸೃಷ್ಟಿಸ ಲಾಗಿದೆ. ಅವುಗಳಲ್ಲಿ ಸಾರಿಗೆ ಆಯುಕ್ತರ ಕಚೇರಿ, ಬೆಂಗಳೂರಿನ ಕೇಂದ್ರ, ಪಶ್ಚಿಮ, ಪೂರ್ವ, ಉತ್ತರ, ದಕ್ಷಿಣ ಸಾರಿಗೆ ಕಚೇರಿಗಳು, ಅತ್ತಿಬೆಲೆ, ಬಾಗೇಪಲ್ಲಿ, ಝಲ್ಕಿ, ನಿಪ್ಪಾಣಿ ತನಿಖಾ ಠಾಣೆಗಳಲ್ಲಿ ಈಗ ಇರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆಡಳಿತ) ಹುದ್ದೆಗಳನ್ನು ಸೃಷ್ಟಿಸಲಾಗಿದೆ.

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹುದ್ದೆಗೆ ಬಡ್ತಿ ನೀಡುವಾಗ ಶೇ.90ರಷ್ಟು ಸ್ಥಾನಗಳಿಗೆ ಹಿರಿಯ ಮೋಟಾರು ವಾಹನ ನಿರೀಕ್ಷಕರನ್ನು ನಿಯೋಜನೆ ಮಾಡಲಾಗುತ್ತದೆ. ಶೇ.10ರಷ್ಟು ಹುದ್ದೆಗಳಿಗೆ ಲಿಪಿಕ ವರ್ಗದ ಸಹಾಯಕ ಕಾರ್ಯದರ್ಶಿ/ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಕೇಂದ್ರ ಸ್ಥಾನೀಯ ಸಹಾಯಕರನ್ನು ಹಾಗೂ ತೆರಿಗೆ ಮತ್ತು ಖಜಾನೆ ಅಧಿಕಾರಿ ವೃಂದದವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಹುದ್ದೆಗೆ ತಾಂತ್ರಿಕ ನೈಪುಣ್ಯತೆ ಬೇಕಿದೆ. ಅದಕ್ಕೆ ಲಿಪಿಕ ವರ್ಗದಲ್ಲಿ ಕೆಲಸ ಮಾಡಿದವರನ್ನು ನೇಮಿಸುವುದು ಸೂಕ್ತವಲ್ಲ ಎಂಬ ವರದಿ ಇದೆ. ಹೀಗಾಗಿ ಲಿಪಿಕ ವರ್ಗಕ್ಕೆ ಅವಕಾಶ ನೀಡಲು ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಲಾಗಿದೆ.

Facebook Comments