ಸಾರಿಗೆ ನೌಕರರು ಮುಷ್ಕರ : ಸಾರ್ವಜನಿಕರಿಗೆ ತೊಂದರೆ ಆಗದಂತೆ ಪರ್ಯಾಯ ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.6- ಒಂದು ವೇಳೆ ನಾಳೆ ಸಾರಿಗೆ ನೌಕರರು ಮುಷ್ಕರ ಕೈಗೊಂಡರೆ ಸಾರ್ವಜನಿಕರ ಹಿತಕ್ಕಾಗಿ ಈಗಾಗಲೇ ಪರ್ಯಾಯ ಕ್ರಮವನ್ನು ಕೈಗೊಂಡಿದೆ. ಖಾಸಗಿ ಬಸ್‍ಗಳು, ಸ್ಕೂಲ್ ಬಸ್‍ಗಳು, ಟ್ಯಾಕ್ಸಿ, ಕ್ಯಾಬ್ ಯಾರೂ ಬೇಕಾದರೂ ಎಲ್ಲಿಯಾದರೂ ಓಡಿಸಬಹುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಲ್ಲರೂ ಸಹಕರಿಸಬೇಕೆಂದು ಮುಖ್ಯ ಕಾರ್ಯದರ್ಶಿ ರವಿಕುಮಾರ್ ಮನವಿ ಮಾಡಿದರು.

ಈಗಾಗಲೇ ಸಾರಿಗೆ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳುವತ್ತ ಕಾರ್ಯೋನ್ಮು ಖರಾಗಿದ್ದಾರೆ. ಯಾರಾದರೂ ಪ್ರಚೋದನಕಾರಿ ಹೇಳಿಕೆ ಕೊಡುವುದು, ಮುಷ್ಕರ ನಡೆಸಲು ಕುಮ್ಮಕ್ಕು ನೀಡಿದರೆ ಅವರ ಮೇಲೂ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು.

ಸಾರಿಗೆ ನೌಕರರ ಸಂಘದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಜೊತೆ ಮಾತುಕತೆ ನಡೆಸುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರ ಜೊತೆಯೂ ಸಂಧಾನ ನಡೆಸುವ ಪ್ರಶ್ನೆಯೇ ಇಲ್ಲ. ಅದು ಮುಗಿದ ಅಧ್ಯಾಯ. ಮುಷ್ಕರ ನಡೆಸುವವರು ಮತ್ತು ಕುಮ್ಮಕ್ಕು ನೀಡುವವರಿಗೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಖಡಕ್ಕಾಗಿ ಹೇಳಿದರು.

Facebook Comments