10 ಕೋಟಿಗೂ ಹೆಚ್ಚು ಮೌಲ್ಯದ ಕಾರುಗಳೊಂದಿಗೆ ಟ್ರಾವೆಲ್ಸ್ ಮಾಲೀಕ ಎಸ್ಕೇಪ್..!

ಈ ಸುದ್ದಿಯನ್ನು ಶೇರ್ ಮಾಡಿ

ನೆಲಮಂಗಲ,ನ.29- ಟ್ರಾವೆಲ್ಸ ಹೆಸರಲ್ಲಿ ಕಾರುಗಳನ್ನು ಅಟ್ಯಾಚ್ ಮಾಡಿಸಿಕೊಂಡು ಬರೋಬ್ಬರಿ 10ಕೋಟಿಗೂ ಹೆಚ್ಚು ಮೌಲ್ಯದ ಕಾರುಗಳೊಂದಿಗೆ ವಂಚಕ ಪರಾರಿಯಾಗಿರುವ ಘಟನೆ ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ತಮಿಳುನಾಡು ಮೂಲದ ಶಿವಕುಮಾರ್ ಸುಮಾರು 130ಕ್ಕೂ ಹೆಚ್ಚು ಕಾರುಗಳ ಸಮೇತ ಪರಾರಿಯಾಗಿರುವ ವಂಚಕ.

ಬೆಂಗಳೂರಿನ ನಾಗಸಂದ್ರದಲ್ಲಿ ಕಳೆದ ಒಂದು ವರ್ಷದ ಹಿಂದೆ ವಂಚಕ ಶಿವಕುಮಾರ್ ಆರ್ಎಸ್ ಟ್ರಾವೆಲ್ಸ ಆರಂಭಿಸಿದ್ದನು. ಟ್ರಾವೆಲ್ಸ್ ಹೆಸರಲ್ಲಿ 130ಕ್ಕೂ ಹೆಚ್ಚೂ ಅಂದರೆ ಸುಮಾರು 10 ಕೋಟಿಗೂ ಅಕ ಮೌಲ್ಯದ ವಿವಿಧ ಕಾರುಗಳನ್ನು ಅಟ್ಯಾಚ್ ಮಾಡಿಸಿಕೊಂಡಿದ್ದನು. ಮೊದಮೊದಲು ಪ್ರತಿ ತಿಂಗಳ 8 ರಂದು ಅಟ್ಯಾಚ್ ಮಾಡಿದ್ದ ಕಾರು ಮಾಲೀಕರ ಅಕೌಂಟïಗೆ ಬಾಡಿಗೆ ಹಣ ಹಾಕುತ್ತಿದ್ದನು.

ಈತನೊಂದಿಗೆ ವ್ಯವಹಾರ ನಡೆಸಿದವರಿಗೆ ನಂಬಿಕೆ ಮೂಡಿದ್ದರಿಂದ ಹೆಚ್ಚು ಕಾರುಗಳನ್ನು ಅಟ್ಯಾಚ್ ಮಾಡಲಾಗಿತ್ತು.ಇದರಲ್ಲಿ ಐಷಾರಾಮಿ ಕಾರುಗಳಾದ ಇನೋವಾ,ಈಟಿಯೋಸ್, ಸ್ವಿಫ್ಟ ನಂತಹ ಕಾರುಗಳನ್ನ ಬಾಡಿಗೆಗೆ ಅಟ್ಯಾಚ್ಆಗಿದ್ದವು. ಆದ್ರೆ ಈ ತಿಂಗಳು ಹಣ ಹಾಕಿರಲಿಲ್ಲ.

ಮಾಲೀಕರು ಈಬಗ್ಗೆ ವಿಚಾರಿಸಲು ಶಿವಕುಮಾರ್ ಮೊಬೈಲ್ ಗೆ 3-4 ಬಾರಿ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಅನುಮಾನಗೊಂಡ ಕಾರು ಮಾಲೀಕರು ಟ್ರಾವಲ್ಸ್ ಬಳಿ ಬಂದು ನೊಡಿದಾಗ ಕಚೇರಿಗೆ ಬೀಗ ಹಾಕಿರುವುದು ಕಂಡು ಬಂದಿದೆ.

ಅದೇ ರೀತಿ ಒಬ್ಬೊಬ್ಬರಾಗಿ ಟ್ರಾವಲ್ಸ್ ಬಳಿ ಬಂದು ಅಕ್ಕಪಕ್ಕದವರನ್ನು ವಿಚಾರಿಸಿದಾಗ ಕಳೆದೊಂದು ವಾರದಿಂದ ಟ್ರಾವಲ್ಸ್ ಗೆ ಬೀಗ ಹಾಕಿರುವ ವಿಚಾರ ತಿಳಿದು ತಾವುಗಳು ಮೋಸ ಹೋಗಿರುವುದು ಅರಿತು ಇದೀಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.

ಆರೋಪಿ ವಂಚಕ ಬರೋಬ್ಬರಿ 130ಕ್ಕೂ ಹೆಚ್ಚು ಕಾರುಗಳೊಂದಿಗೆ ಎಸ್ಕೇಪ್ ಆಗಿದ್ದಾನೆ. ಸದ್ಯ ಕಾರುಗಳನ್ನ ಅಟ್ಯಾಚ್ ಮಾಡಿದ್ದ ಮಾಲೀಕರು ಕಂಗಾಲಾಗಿದ್ದಾರೆ. ಬಗಲಗುಂಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ವಂಚಕನಿಗಾಗಿ ಬಲೆ ಬೀಸಿದ್ದಾರೆ.

Facebook Comments

Sri Raghav

Admin