ಕೇರಳದಲ್ಲಿ ಟ್ರಿಪಲ್ ಲಾಕ್‍ಡೌನ್

ಈ ಸುದ್ದಿಯನ್ನು ಶೇರ್ ಮಾಡಿ

ತಿರುವನಂತಪುರಂ,ಜು.6- ಕೇರಳ ರಾಜಧಾನಿ ತಿರುವನಂತಪುರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವಂತೆ ಅಲ್ಲಿನ ಸರ್ಕಾರ ಟ್ರಿಪಲ್ ಲಾಕ್‍ಡೌನ್ ಘೋಷಿಸಿ ಮುಂದಿನ ಒಂದು ವಾರ ನಗರವನ್ನು ಹೆಚ್ಚಿನ ನಿರ್ಬಂಧಕ್ಕೊಳಪಡಿಸಿದೆ.

ಇಂದು ಸಂಜೆ 6ರಿಂದಲೇ ತ್ರಿವಳಿ ಲಾಕ್‍ಡೌನ್ ಜಾರಿಯಾಗಿದೆ. ಸ್ಥಳೀಯ ಸಂಪರ್ಕದಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ತಿರುವನಂತರಪುರದಲ್ಲಿ ಸಮುದಾಯಕ್ಕೆ ಕೋವಿಡ್ ಹರಡಿರುವುದರಿಂದ ವೇಗವಾಗಿ ಹರಡುತ್ತಿರುವ ಸೋಂಕು ತಡೆಗೆ ಹೆಚ್ಚಿನ ನಿರ್ಬಂಧದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ನಗರದಲ್ಲಿ ನ್ಯಾಯಾಲಯಗಳು ಸಹ ಇನ್ನೊಂದು ವಾರ ಮುಚ್ಚಿರುತ್ತದೆ. ತುರ್ತು ವಿಚಾರಣೆ, ಜಾಮೀನು ಅರ್ಜಿ ಇತ್ಯಾದಿಗಳನ್ನು ಆನ್‍ಲೈನ್‍ನಲ್ಲಿ ನಡೆಸಲಾಗುತ್ತದೆ.

ಕೇವಲ ನಗರಕ್ಕೆ ತುರ್ತು ಕೆಲಸಗಳಿಗೆ ಬರುವವರಿಗೆ ಮಾತ್ರ ಇನ್ನೊಂದು ವಾರ ಅವಕಾಶವಿದ್ದು ಪುನಃ ಹೊರಗೆ ಹೋಗಲು ಸಾಧ್ಯವಿಲ್ಲ. ಯಾವುದೇ ಸರ್ಕಾರಿ ಮತ್ತು ಖಾಸಗಿ ವಾಹನಗಳ ಪ್ರವೇಶಕ್ಕೆ ಅವಕಾಶವಿಲ್ಲ .

Facebook Comments