ದೂರವಾಣಿಯಲ್ಲೇ ತಲಾಖ್ ನೀಡಿದ್ದ ಪತಿ ವಿರುದ್ಧ ದೂರು ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

ಪೂನಾ, ನ.23- ದೂರವಾಣಿ ಮೂಲಕ ತನ್ನ ಪತ್ನಿಗೆ ತಲಾಖ್ ನೀಡಿರುವ ವ್ಯಕ್ತಿಯೊಬ್ಬನ ವಿರುದ್ಧ ದೂರು ದಾಖಲಾಗಿದೆ. ಮಹಾರಾಷ್ಟ್ರದ ಅಹಮದಾನಗರ್ ಮೂಲದ ಮಹಿಳೆಯೊಬ್ಬರು ತನ್ನ 32 ವರ್ಷದ ಪತಿ ವಿರುದ್ಧ ದೂರು ನೀಡಿದ್ದಾರೆ.

ಈ ಹಿಂದೆ ದುಬೈನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಇತ್ತೀಚೆಗಷ್ಟೇ ಅಹಮದಾನಗರಕ್ಕೆ ಹಿಂದಿರುಗಿದ್ದರು. ಮುಂಬೈನಲ್ಲಿ ನೆಲೆಸಿದ್ದ ಆಕೆಯ ಪತಿ ನ.20ರಂದು ದೂರವಾಣಿ ಮೂಲಕ ಕರೆ ಮಾಡಿ ನಿನ್ನ ಜತೆ ಯಾವುದೇ ಸಂಬಂಧವಿರಿಸಿಕೊಳ್ಳಲು ನನಗೆ ಇಷ್ಟ ಇಲ್ಲ. ಹೀಗಾಗಿ ನಿನಗೆ ತಲಾಖ್ ನೀಡುತ್ತಿದ್ದೇನೆ ಎಂದು ದೂರವಾಣಿ ಮೂಲಕವೇ ಮೂರು ಬಾರಿ ತಲಾಖ್ ನೀಡಿದ್ದ.

ಈ ಕುರಿತಂತೆ ಮಹಿಳೆ ನೀಡಿರುವ ದೂರು ದಾಖಲಿಸಿಕೊಂಡಿರುವ ಬಿಂಗರ್ ಕ್ಯಾಂಪ್ ಪೊಲೀಸರು ಮುಸ್ಲಿಂ ಮಹಿಳಾ ವಿವಾಹ ರಕ್ಷಣಾ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments