ಚುನಾವಣೆಗೆ ರಾಜಕೀಯ ಹಿಂಸಾಚಾರ ಆರೋಪಗಳ ಮುನ್ನುಡಿ

ಈ ಸುದ್ದಿಯನ್ನು ಶೇರ್ ಮಾಡಿ

ಅಗರ್ತಲ,ನ.25- ರಾಜಕೀಯ ಹಿಂಸಾಚಾರದ ಆರೋಪಗಳ ನಡುವೆ ತ್ರಿಪುರಾದ 14 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇಂದು ಬೆಳಗ್ಗೆ ಮತದಾನ ಆರಂಭವಾಯಿತು. ರಾಜ್ಯ ರಾಜಧಾನಿ ಅಗರ್ತಲದಲ್ಲಿ ಪಕ್ಷದ ಓರ್ವ ಕಾರ್ಯಕರ್ತನನ್ನು ವಾರ್ಡ್ ನಂ.5ರಲ್ಲಿ ಥಳಿಸಲಾಗಿದೆ ಎಂದು ಟಿಎಂಸಿ ಪದಾಧಿಕಾರಿಗಳು ಪ್ರತಿಪಾದಿಸಿದ್ದಾರೆ. ಹೀಗಿದ್ದರೂ ಪೊಲೀಸರು ಯಾವುದೇ ಅಹಿತಕರ ಘಟನೆಯನ್ನು ದೃಢಪಡಿಸಿಲ್ಲ.

ಆಡಳಿತ ಪಕ್ಷವು ದಕ್ಷಿಣ ತ್ರಿಪುರಾ ಜಿಲ್ಲೆಯಲ್ಲಿ ಮತದಾರರಿಗೆ ಬೆದರಿಕೆಯನ್ನೊಡ್ಡುತ್ತಿದೆ ಮತ್ತು ನಮ್ಮ ಪಕ್ಷದ ಕಾರ್ಯಕರ್ತರಿಗೆ ಮುಕ್ತವಾಗಿ ಕೆಲಸ ನಿರ್ವಹಿಸಲು ಅಡಚಣೆ ಉಂಟು ಮಾಡುತ್ತಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿತೇನ್ ಚೌಧರಿ ಅವರು ಆರೋಪಿಸಿದ್ದಾರೆ.

ಆದಾಗ್ಯೂ ಆಡಳಿತಾರೂಢ ಬಿಜೆಪಿ ಈ ಆಪಾದನೆಗಳನ್ನು ನಿರಾಕರಿಸಿದ್ದು, ಮತದಾನವು ಸಂಭ್ರಮದ ಸೂರ್ತಿಯೊಂದಿಗೆ ಆರಂಭವಾಗಿದೆ ಎಂದು ಪಕ್ಷದ ವಕ್ತಾರ ನಬೇಂದು ಭಟ್ಟಾಚಾರರ್ಯ ನುಡಿದಿದ್ದಾರೆ.

Facebook Comments