ಮಹಿಳಾ ಕ್ರಿಕೆಟರ್ ಆಯಂತಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಅಗರ್ತಲಾ, ಜೂ. 18- ಇತ್ತೀಚೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಕ್ರಿಕೆಟ್ ಆಟಗಾರ್ತಿ ಆಯಂತಿ ರಿಯಾಂಗ್ ನಿಧನಕ್ಕೆ ತ್ರಿಪುರ ಕ್ರಿಕೆಟ್ ಸಂಸ್ಥೆ ಸಂತಾಪ ಸೂಚಿಸಿದೆ.

ಆಯಂತಿ ಒಬ್ಬ ಉತ್ತಮ ಆಟಗಾರ್ತಿಯಾಗಿದ್ದರು, ಅವರ ಆತ್ಮಹತ್ಯೆ ವಿಷಯ ಕೇಳಿ ನನಗೆ ದಿಗ್ಭ್ರಮೆಯಾಗಿದೆ. ರಾಜ್ಯ ಒಬ್ಬ ಉತ್ತಮ ಕ್ರೀಡಾಪಟುವನ್ನು ಕಳೆದುಕೊಂಡಿದೆ,

ಕ್ರಿಕೆಟ್ ಆಟಗಾರರಾಗಿ ಲಾಕ್‍ಡೌನ್ ವೇಳೆ ಆನ್‍ಲೈನ್ ಕ್ಲಾಸ್ ನಡೆಸಲಾಗುತ್ತಿತ್ತು ಆದರೆ ಆಯಂತಿ ಆ ತರಗತಿಯಲ್ಲಿ ಕಾಣಿಸಿಕೊಂಡಿರಲಿಲ್ಲ ಎಂದು ತ್ರಿಪುರ ಕ್ರಿಕೆಟ್ ಸಂಘದ ಮುಖ್ಯಸ್ಥ ತಿರ್ಮಿ ಚಂದಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಂಡರ್ 19 ಹಾಗೂ ಅಂಡರ್ 23 ವಿಭಾಗದಲ್ಲಿ ತ್ರಿಪುರ ತಂಡದ ಪರ ಆಡಿದ್ದ ಆಯಂತಿ ರಿಯಾಂಗ್ ಇತ್ತೀಚೆಗೆ ಉದಯಪುರ ಜಿಲ್ಲೆಯ ತೆನಾನಿ ಗ್ರಾಮದ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದರು.

ಅಯಂತಿಯ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಆಕೆಯ ಮನೆಯಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments