ನಿಪ್ಪಾಣಿ ಬಳಿ ಟ್ರಕ್-ಬುಲೆರೋ ನಡುವೆ ಭೀಕರ ಅಪಘಾತ, ನಾಲ್ವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Nippani-Accident--01

ಬೆಳಗಾವಿ, ಜೂ.25- ಟ್ರಕ್ ಹಾಗೂ ಬುಲೆರೋ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟಿರುವ ಘಟನೆ ನಿಪ್ಪಾಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಬುಲೆರೋ ವಾಹನದಲ್ಲಿದ್ದ ಶಬ್ಬೀರ ಕರೀಂ ಸಯ್ಯದ್ (30) , ರಾಜಾ ಅಹಂದ ಬಾಗವಾನ (37) , ನದೀಂ ಬಾಗವಾನ (27) ಮತ್ತು ಟ್ರಕ್ ಚಾಲಕ ರಮೇಶ (40) ಮೃತಪಟ್ಟ ದುರ್ದೈವಿಗಳು.

Nippani-Accident--02

ಗೋಕಾಕ ತಾಲ್ಲೂಕಿನ ಘಟಪ್ರಭಾದಿಂದ ತರಕಾರಿಯನ್ನು ಟ್ರಕ್‍ನಲ್ಲಿ ಲೋಡ್ ಮಾಡಿಕೊಂಡು ಚಾಲಕ ರಮೇಶ ಕೊಲ್ಲಾಪುರಕ್ಕೆ ಹೋಗುತ್ತಿದ್ದಾಗ ನಿಪ್ಪಾಣಿ ತಾಲ್ಲೂಕಿನ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಬುಲೆರೋ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಟ್ರಕ್ ಚಾಲಕ ಹಾಗೂ ಬುಲೆರೋ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಘಟನೆಯಲ್ಲಿ ಬುಲೆರೋದಲ್ಲಿದ್ದ ಇನ್ನೂ ಮೂವರು ಗಂಭೀರ ಗಾಯಗೊಂಡಿದ್ದು, ಇವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಟ್ರಕ್ ಚಾಲಕ ರಮೇಶ ಹಿರೆಕೆರೂರು ನಿವಾಸಿ ಎಂದು ಹೇಳಲಾಗಿದೆ. ಬುಲೆರೋದಲ್ಲಿದ್ದವರು ಕೊಲ್ಲಾಪುರದ ನಿವಾಸಿಗಳು.

Nippani-Accident--03

ಸುದ್ದಿ ತಿಳಿಯುತ್ತಿದ್ದಂತೆ ನಿಪ್ಪಾಣಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ವಾಹನದೊಳಗೆ ಸಿಕ್ಕಿಕೊಂಡಿದ್ದ ಮೃತ ದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.  ಬೆಳಗ್ಗೆ 9.30ರಲ್ಲಿ ಈ ಅಪಘಾತ ಸಂಭವಿಸಿದ್ದರಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿತ್ತು. ಸಂಚಾರಿ ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Nippani-Accident--01

Facebook Comments

Sri Raghav

Admin