ಸಂಚಾರ ನಿಯಮ ಉಲ್ಲಂಘನೆ ಮಾಡಿದ ಟ್ರಕ್ ಚಾಲಕನಿಗೆ ಬಿತ್ತು 1.41 ಲಕ್ಷ ದಂಡ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.11- ಕಟ್ಟುನಿಟ್ಟಿನ ನೂತನ ಸಂಚಾರಿ ನಿಯಮದ ಪ್ರಕಾರ ದುಬಾರಿ ದಂಡದ ದಾಖಲೆಯನ್ನು ರಾಜಸ್ಥಾನ ಮೂಲದ ಟ್ರಕ್ ಡ್ರೈವರ್ ಮುರಿದಿದ್ದು, ಓವರ್ ಲೋಡ್ ನಿಯಮದನ್ವಯ ಟ್ರಕ್ ಮಾಲೀಕನಿಗೆ ಬರೋಬ್ಬರಿ 1.41 ಲಕ್ಷ ರೂ ದಂಡ ವಿಧಿಸಲಾಗಿದೆ.

ಕೇಂದ್ರ ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ದಂಡ ಪರಿಷ್ಕರಣೆ ಮಾಡಿದ ನಂತರ ಸಂಚಾರ ನಿಮಯ ಉಲ್ಲಂಘಿಸಿದ್ದಕ್ಕಾಗಿ ಹಲವು ವಾಹನ ಸವಾರರು ಭಾರೀ ದಂಡ ತೆತ್ತು ಸುದ್ದಿಯಾಗಿದ್ದರು. ಈ ಹಿಂದೆ ಒಡಿಶಾದಲ್ಲಿ ಹಾಕಲಾಗಿದ್ದ 80 ಸಾವಿರ ರೂ. ದಂಡವೇ ವೈಯುಕ್ತಿಕ ಗರಿಷ್ಠ ದಂಡ ಪ್ರಕರಣವಾಗಿತ್ತು.

ಆದರೆ ಇದೀಗ ಅದನ್ನೂ ಮೀರಿಸುವಂತೆ ರಾಜಸ್ತಾನ ಮೂಲದ ಟ್ರಕ್ ಡ್ರೈವರ್ ಒಬ್ಬನಿಗೆ ಪೊಲೀಸರು ಬರೊಬ್ಬರಿ 1.41 ಲಕ್ಷ ರೂ. ದಂಡ ವಿಧಿಸಿದ್ದಾರೆ. ರಾಜಸ್ಥಾನದ ಬಿಕಾನೇನರ್ ಹರ್ಮಾನ್ ರಾಮ್ ಭಾಂಬು ಎಂಬ ಟ್ರಕ್ ಮಾಲೀಕನಿಗೆ ಟ್ರಕ್‍ನಲ್ಲಿ ನಿಯಮಕ್ಕಿಂತ ಹೆಚ್ಚಿನ ಸರಕು ತುಂಬಿದ್ದಕ್ಕಾಗಿ ಓವರ್ಲೋಡ್ ನಿಯಮದನ್ವಯ ದಂಡ ವಿಧಿಸಲಾಗಿದೆ. ಸೆ.5 ರಂದು ದೆಹಲಿ ಪೊಲೀಸರು ದಂಡ ವಿಧಿಸಿ ಟ್ರಕ್ ವಶಕ್ಕೆ ಪಡೆದಿದ್ದರು.

ಇಷ್ಟು ದುಬಾರಿ ಮೊತ್ತವನ್ನು ಹೊಂದಿಸಲು 5 ದಿನವೇ ಬೇಕಾಯಿತು. 5 ದಿನದ ನಂತರ ಸೆ.9 ರಂದು ಕೋರ್ಟ್‍ನಲ್ಲಿ ದಂಡ ಪಾವತಿಸಿ ವಾಹನ ಬಿಡಿಸಿಕೊಂಡಿದ್ದೇವೆ ಎಂದು ಟ್ರಕ್ ಮಾಲೀಕ ತಿಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ