ಅನಿರ್ಧಿಷ್ಟಾವಧಿ ಲಾರಿ ಮುಷ್ಕರ ಆರಂಭ, ಸರಕು ಸಾಗಣೆಯಲ್ಲಿ ಸಂಪೂರ್ಣ ವ್ಯತ್ಯಯ

ಈ ಸುದ್ದಿಯನ್ನು ಶೇರ್ ಮಾಡಿ

Lorry-Strike--01

ಬೆಂಗಳೂರು, ಜೂ.18- ತೈಲ ಬೆಲೆ ಹಾಗೂ ಇನ್ಸೂರೇಷನ್ ಪ್ರಿಮಿಯಂ ದರ ಹೆಚ್ಚಳ ಖಂಡಿಸಿ ಇಂದಿನಿಂದ ದೇಶಾದ್ಯಂತ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಲಾರಿ ಮುಷ್ಕರದಿಂದ ರಾಜ್ಯದಾದ್ಯಂತ ಸರಕು ಸಾಗಣೆಯಲ್ಲಿ ಸಂಪೂರ್ಣ ವ್ಯತ್ಯಯವಾಗಿದ . ಹಾಲು ಮತ್ತು ತರಕಾರಿ ಲಾರಿಗಳು ಹೊರತು ಪಡಿಸಿ ಮರಳು ಹಾಗೂ ಇತರೆ ಸರಕು ಸಾಗಣೆ ಲಾರಿ ಮಾಲೀಕರು ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಯಶವಂತಪುರದಲ್ಲಿ ಸದಾ ಜನಜಂಗುಳಿಯಿಂದ ಕೂಡಿರುತಿತ್ತು. ಆದರೆ ಲಾರಿ ಮುಷ್ಕರದಿಂದ ವಹಿವಾಟಿನಲ್ಲೂ ಅಡಚಣೆ ಉಂಟಾಗಿದೆ.

WhatsApp Image 2018-06-18 at 10.50.53 AM

ಪೆಟ್ರೋಲ್, ಡಿಸೇಲ್, ಟೋಲ್ ಶುಲ್ಕ ಹಾಗೂ ಇನ್ಸೂರೇಷನ್ ಪ್ರಿಮಿಯಂ ದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಲಾರಿ ಮಾಲೀಕರು ಮತ್ತು ಚಾಲಕರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದರು.ಬೆಲೆ ಹೆಚ್ಚಳದಿಂದ ಮಾಲೀಕರು ಹೈರಾಣಾಗಿ ಹೋಗಿದ್ದಾರೆ. ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅನ್ಯ ಮಾರ್ಗವಿಲ್ಲದೆ ಪ್ರತಿಭಟನೆಯ ಹಾದಿ ಹಿಡಿಯಬೇಕಾಗಿದೆ. ಸರಕು ಸರಬರಾಜಿನಲ್ಲಿ ತುಸು ಏರುಪೇರಾಗಿದ್ದು , ಸಾರ್ವಜನಿಕರು ಸ್ಪಂದಿಸಬೇಕೆಂದು ಲಾರಿ ಮಾಲೀಕರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

WhatsApp Image 2018-06-18 at 10.47.49 AM

ಎಪಿಎಂಸಿ, ಆರ್‍ಎಂಸಿ ಹಾಗೂ ತರಕಾರಿ ಮಾರುಕಟ್ಟೆಗಳಲ್ಲಿ ಎಂದಿಗಿಂತ ಸೋಮವಾರ ವಹಿವಾಟು ಜೋರಾಗಿಯೇ ನಡೆಯುತ್ತದೆ. ಲಾರಿ ಮುಷ್ಕರಿಂದ ವ್ಯಾಪಾರ ವಹಿವಾಟಿಗೆ ಅಡಚರಣೆಯಾಗಿದ್ದು , ಖರೀದಿಸಿದ ಉತ್ಪನ್ನಗಳನ್ನು ಸಾಗಿಸಲು ಆಗದೆ ಮಾಲೀಕರು ತೊಂದರೆ ಅನುಭವಿಸುವಂತಾಗಿತ್ತು.
ಇನ್ನು ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲೂ ಸಹ ಲಾರಿಗಳು ಸಂಚರಿಸದೆ ಸಂಚಾರ ವಿರಳವಾಗಿತ್ತು.

WhatsApp Image 2018-06-18 at 10.50.56 AM

Facebook Comments

Sri Raghav

Admin