ಭಾರತದ ಲಸಿಕೆ ರಫ್ತು ಕ್ರಮಕ್ಕೆ ಅಮೆರಿಕಾ ಶ್ಲಾಘನೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಜ.23-ವಿಶ್ವದ ಅತಿ ದೊಡ್ಡ ಕೊರೊನಾ ಲಸಿಕೆ ತಯಾರಿಕೆ ಕೇಂದ್ರವಾಗಿರುವ ಭಾರತ ತಾನು ಉತ್ಪಾದಿಸುತ್ತಿರುವ ಲಸಿಕೆಗಳನ್ನು ಇತರ ರಾಷ್ಟ್ರಗಳಿಗೆ ಸರಬರಾಜು ಮಾಡುತ್ತಿರುವ ಕ್ರಮವನ್ನು ಅಮೆರಿಕಾ ಸ್ವಾಗತಿಸಿದೆ. ಇತ್ತಿಚೆಗೆ ಭಾರತದಲ್ಲಿ ಕಂಡು ಹಿಡಿದಿರುವ ಲಸಿಕೆಯನ್ನು ಬ್ರೆಜಿಲ್, ಸೌದಿ ಸೇರಿದಂತೆ ಕೊರೊನಾ ಸೋಂಕಿನಿಂದ ಕಂಗೆಟ್ಟಿರುವ ರಾಷ್ಟ್ರಗಳಿಗೆ ಸರಬರಾಜು ಮಾಡುತ್ತಿರುವ ಕ್ರಮಕ್ಕೆ ಅಮೆರಿಕಾದಿಂದ ಚಪ್ಪಾಳೆ ಎಂದು ಅಲ್ಲಿನ ಸ್ಟೇಟ್ ಡಿಪಾರ್ಟ್‍ಮೆಂಟ್ ಟ್ವೀಟ್ ಮಾಡಿದೆ.

ಜಾಗತಿಕ ಸಮುದಾಯಕ್ಕೆ ಲಸಿಕೆ ವಿತರಿಸುವ ಮೂಲಕ ಭಾರತ ನಿಜವಾದ ಸ್ನೇಹಿತ ರಾಷ್ಟ್ರವಾಗಿದೆ ಎಂದು ಟ್ವೀಟ್‍ನಲ್ಲಿ ಬಣ್ಣಿಸಲಾಗಿದೆ. ವಿಶ್ವದ ಶೇ.60ರಷ್ಟು ಲಸಿಕೆ ತಯಾರಿಸುತ್ತಿರುವ ಭಾರತ ಮತ್ತು ಲಸಿಕೆಗಳನ್ನು ಅಗತ್ಯ ಉಳ್ಳವರಿಗೆ ಸರಬರಾಜು ಮಾಡಲು ಮುಂದಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕ್ರಮ ಬಣ್ಣಿಸಲು ಅಸಾಧ್ಯ ಎಂದು ಹೇಳಲಾಗಿದೆ.
ಅದೇ ರೀತಿ ಅಮೆರಿಕಾದ ಗಣ್ಯ ವ್ಯಕ್ತಿಗಳು ಹಾಗೂ ಅಲ್ಲಿನ ಮಾಧ್ಯಮಗಳು ಭಾರತದ ಕ್ರಮವನ್ನು ಮುಕ್ತ ಕಂಠದಿಂದ ಶ್ಲಾಘಿಸಿವೆ.

Facebook Comments