ಚೀನಾ-ಅಮೆರಿಕ ನಡುವಿನ ‘ಕೊರೋನಾ ಬಿಕ್ಕಟ್ಟು’ ಬಗೆಹರಿಸಲು ಡಬ್ಲ್ಯುಎಚ್‍ಒ ಮಹತ್ವದ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಜಿನಿವಾ(ಸ್ವಿಟ್ಜರ್ಲೆಂಡ್), ಮೇ 18- ವಿಶ್ವ ಆರೋಗ್ಯ ಸಂಸ್ಥೆ ತನ್ನ ಮೊಟ್ಟಮೊದಲ ವರ್ಚುವಲ್ ಅಸೆಂಬ್ಲಿಯನ್ನು(ವಾಸ್ತವ ಸ್ಥಿತಿಯ ಸಾಮಾನ್ಯ ಸಭೆ) ಇಂದು ಆರಂಭಿಸುತ್ತಿದೆ. ಆದರೆ ಕೊರೊನಾ ವೈರಸ್ ಸೋಂಕು ವಿಷಯದಲ್ಲಿ ಅಮೆರಿಕ ಮತ್ತು ಚೀನಾ ನಡುವೆ ಉಂಟಾಗಿರುವ ಉದ್ವಿಗ್ನತೆಗಳು ಕೋವಿಡ್ -19 ಬಿಕ್ಕಟ್ಟನ್ನು ಪರಿಹರಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಹಳಿ ತಪ್ಪಿಸಬಹುದು ಎಂಬ ಆತಂಕ ಎದುರಾಗಿದೆ.

ಕಳೆದ ಮೂರು ವಾರಗಳಲ್ಲಿಯೇ ಇಂದು ಮತ್ತು ನಾಳಿನ ಸಭೆಗಳು ಅತ್ಯಂತ ಮಹತ್ವದ್ದಾಗಿದ್ದು, ಇಂದು ಮಧ್ಯಾಹ್ನ ಆರಂಭವಾಗಲಿರುವ ಸಭೆಯಲ್ಲಿ ಕೋವಿಡ್ -19ರ ಮೇಲೆ ಮಾತ್ರ ಕೇಂದ್ರೀಕರಿಸುವ ನಿರೀಕ್ಷೆಯಿದೆ.

ಸಭೆಯಲ್ಲಿ ಹಲವಾರು ರಾಷ್ಟ್ರಗಳ ಮುಖ್ಯಸ್ಥರು, ಸರ್ಕಾರಿ ಮುಖ್ಯಸ್ಥರು, ಆರೋಗ್ಯ ಸಚಿವರು ಮತ್ತು ಇತರ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.1948ರಲ್ಲಿ ಡಬ್ಲ್ಯುಎಚ್‍ಎಎಸ್ ಸ್ಥಾಪನೆಯಾದಾಗಿನಿಂದ ಈ ಕಾರ್ಯಕ್ರಮವು ಅತ್ಯಂತ ಮಹತ್ವದ್ದಾಗಿದೆ ಎಂದು ಡಬ್ಲ್ಯುಎಚ್‍ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅಭಿಪ್ರಾಯಪಟ್ಟಿದ್ದಾರೆ.

ಸಾಂಕ್ರಾಮಿಕ ರೋಗವನ್ನು ಎದುರಿಸಲು ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಸಂಬಂಧಗಳು ಸ್ಥಿರವಾಗಿ ಹದಗೆಡುವುದರ ಮೂಲಕ ಬಿಕ್ಕಟ್ಟನ್ನು ಪರಿಹರಿಸಲು ಜಾಗತಿಕ ಕ್ರಮಗಳ ಬಗ್ಗೆ ಒಪ್ಪಂದಕ್ಕೆ ಬರುವ ಅವಕಾಶಕ್ಕೆ ಧಕ್ಕೆಯಾಗುವ ಸಾಧ್ಯತೆ ಹೆಚ್ಚಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವಾರ ಚೀನಾದೊಂದಿಗಿನ ಸಂಬಂಧವನ್ನು ಕಡಿತಗೊಳಿಸುವುದಾಗಿ ಹೇಳಿದ್ದರು. ಅಲ್ಲದೆ ಕೋವಿಡ್ -19 ಹರಡುವಲ್ಲಿ ಅದರ ಪಾತ್ರದ ಬಗ್ಗೆ ಮತ್ತು ಚೀನಾದ ಪ್ರಯೋಗಾಲಯದಲ್ಲಿ ವೈರಸ್ ಹುಟ್ಟಿಕೊಂಡಿದೆ ಎಂದು ಸಾಬೀತುಪಡಿಸದ ಆರೋಪಗಳನ್ನು ಪದೇ ಪದೇ ಮಾಡಿದ್ದಾರೆ.

ಅಲ್ಲದೆ ಡಬ್ಲ್ಯುಎಚ್‍ಒಗೆ ಧನಸಹಾಯವನ್ನು ಸ್ಥಗಿತಗೊಳಿಸಿದ್ದಾರೆ. ಉದ್ವಿಗ್ನತೆಗಳ ಹೊರತಾಗಿಯೂ ಸಾಂಕ್ರಾಮಿಕ ರೋಗಗಳಿಗೆ ಜಂಟಿ ಪ್ರತಿಕ್ರಿಯೆಯನ್ನು ಒತ್ತಾಯಿಸುವ ನಿರ್ಣಯವನ್ನು ಒಮ್ಮತದ ಮೂಲಕ ಅಂಗೀಕರಿಸಲು ದೇಶಗಳು ಆಶಿಸುತ್ತವೆ.

ಕಠಿಣ ಮಾತುಕತೆಗಳ ನಂತರ ಕಳೆದ ವಾರ ಪಠ್ಯದ ಸುತ್ತಲಿನ ಸಮಾಲೋಚನೆಗಳು ಮುಕ್ತಾಯಗೊಂಡಿವೆ. ಹಲವಾರು ದಿನಗಳ ನಂತರ, ನಿರ್ಣಯವನ್ನು ಅನುಮೋದಿಸಲು ತಾತ್ಕಾಲಿಕ ಒಪ್ಪಂದವನ್ನು ಮಾಡಿಕೊಳ್ಳಲಾಯಿತು,.

ಇದು ಪರೀಕ್ಷೆಗಳು, ವೈದ್ಯಕೀಯ ಉಪಕರಣಗಳು, ಸಂಭಾವ್ಯ ಚಿಕಿತ್ಸೆಗಳು ಮತ್ತು ಭವಿಷ್ಯದ ಲಸಿಕೆಗಳಿಗೆ ಹೆಚ್ಚು ಸಮನಾದ ಪ್ರವೇಶವನ್ನು ಸಹ ನೀಡುತ್ತದೆ ಎಂದು ಸ್ವಿಟ್ಜರ್ಲೆಂಡ್‍ನ ಸಾರ್ವಜನಿಕ ಆರೋಗ್ಯ ಕಚೇರಿಯ ಅಂತರರಾಷ್ಟ್ರೀಯ ವ್ಯವಹಾರಗಳ ವಿಭಾಗದ ಮುಖ್ಯಸ್ಥರಾದ ನೋರಾ ಕ್ರೋನಿಗ್ ಹೇಳಿದ್ದಾರೆ.

Facebook Comments

Sri Raghav

Admin