ರಂಗೇರುತ್ತಿದೆ ಅಮೆರಿಕ ಅಧ್ಯಕ್ಷೀಯ ಚುನಾವಣೆ, ಅಭ್ಯರ್ಥಿಗಳಿಗಿಲ್ಲ ಭದ್ರತೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಆ.30- ಅಧ್ಯಕ್ಷೀಯ ಚುನಾವಣೆ ರಂಗೇರುತ್ತಿರುವ ನಡುವೆಯೇ ರಾಷ್ಟ್ರದ ಅತ್ಯುನ್ನತ ಗುಪ್ತಚರ ಸಂಸ್ಥೆಯು ಭದ್ರತೆಯನ್ನು ನಿಲ್ಲಿಸಲಿದೆ. ಇದು ರಾಷ್ಟ್ರದ ರಕ್ಷಣಾ ವಿಷಯಕ್ಕಲ್ಲ. ಆದರೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಸರ್ಕಾರಿ ವೆಚ್ಚದಲ್ಲಿ ಕೆಲಸ ಮಾಡಲು ಅವಕಾಶ ಇಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಲಾಗಿದೆ.

ಈ ನಿರ್ಧಾರವನ್ನು ಸಂಸದರ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಆದರೆ ಪುನರಾಯ್ಕೆ ಬಯಸಿರುವ ಟ್ರಂಪ್ ಮಾತ್ರ ಇದಕ್ಕೆ ಕಿಡಿಕಾರಿದ್ದಾರೆ.

ಗುಪ್ತಚರ ಸಂಸ್ಥೆಗೆ ದಣಿವಾಗಿದೆ. ಅದಕ್ಕಾಗಿ ಇಂತಹ ನಿರ್ಧಾರ ಕೈಗೊಂಡಿದೆ, ಕಾಂಗ್ರೆಸ್ ಸೆನೆಟರ್‍ಗಳ ನಿರ್ಧಾರವನ್ನು ಬಹಿರಂಗ ಪಡಿಸುವ ಮೂಲಕ ಮುರಿಯಲಾಗಿದೆ ಎಂದು ಟೀಕಿಸಿದ್ದಾರೆ.

ನಮ್ಮ ವೈರಿಗಳು ಅವಕಾಶವನ್ನು ಬಳಸಿಕೊಂಡು ಕುಚೋದ್ಯಗಳನ್ನು ನಡೆಸಬಹುದು. ಅದಕ್ಕಾಗಿ ರಾಷ್ಟ್ರೀಯ ಗುಪ್ತಚರ ನಿರ್ದೇಶಕರು ಈ ಹೇಳಿಕೆ ನೀಡಿದ್ದಾರೆ ಎಂದು ಸೆನೆಟರ್ ಅಂಗಸ್ ಕಿಂಗ್ ಸಮರ್ಥಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಚುನಾವಣೆ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಕಾರ್ಯವಾಗಿದೆ. ಇಂತಹ ಸಂದರ್ಭದಲ್ಲಿ ವಿದೇಶಿ ಸಂಸ್ಥೆಗಳನ್ನು ಬಳಸಿಕೊಳ್ಳುವುದು ಸರಿಯಲ್ಲ. ಇದರಿಂದ ನಮಗೆ ಬೆದರಿಕೆಯೊಡ್ಡುವ ಕಾರ್ಯತಂತ್ರಗಳು ನಡೆಯುತ್ತವೆ ಎಂದು ಹೇಳಲಾಗಿದೆ.

ಒಟ್ಟಾರೆ ಕಳದೆ ಚುನಾವಣೆಯ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಪ್ರಭಾವ ಬೆಳೆಸಿ ಉದ್ಯಮ ವಲಯವನ್ನು ಸೆಳೆದು ಜಯ ಗಳಿಸಿದ್ದರು. ಇದಕ್ಕೆ ಚೀನಾ ಕೂಡ ಸಾಥ್ ನೀಡಿತ್ತು ಎಂದು ಮಾಧ್ಯಮಗಳು ಆಗ ವರದಿ ಮಾಡಿತ್ತು.

ಈಗ ಅದನ್ನು ತಡೆಯುವ ನಿಟ್ಟಿನಲ್ಲಿ ಹೊಸ ವಿಚಾರಗಳನ್ನು ಚುನಾವಣಾ ಆಯೋಗ ತೆಗೆದುಕೊಳ್ಳುತ್ತಿದೆ.

Facebook Comments

Sri Raghav

Admin