‘ಚೀನಾ ಜತೆ ಗಡಿ ಬಿಕ್ಕಟಿನಿಂದ ಮೋದಿ ಮೂಡ್ ಸರಿಯಿಲ್ಲ’ : ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಮೇ 29-ಭಾರತ-ಚೀನಾ ನಡುಗೆ ಉಲ್ಬಣಗೊಂಡಿರುವ ಗಡಿ ಬಿಕ್ಕಟ್ಟಿನಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮೂಡ್ ಸರಿಯಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಉಭಯ ದೇಶಗಳ ನಡುವೆ ತಲೆದೋರಿರುವ ಗಡಿ ಬಿಕ್ಕಟ್ಟನ್ನು ಶಮನಗೊಳಿಸಲು ತಾವು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬು ಪುನರುಚ್ಚರಿಸಿರುವ ಟ್ರಂಪ್, ನಾನು ಈ ಸಂಬಂಧ ಮೋದಿ ಅವರೊಂದಿಗೆ ಮಾತನಾಡಿದ್ದೇನೆ. ಆದರೆ ಅವರ ಮೂಡ್ ಉತ್ತಮ ಸ್ಥಿತಿಯಲ್ಲಿ ಇಲ್ಲ ಎಂದು ಅಸಮಾಧಾನ ಸೂಚಿಸಿದ್ದಾರೆ.

ಅಮೆರಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತ¨sವನದ ತಮ್ಮ ಓವಲ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾzದಲ್ಲಿ ಪಾಲ್ಗೊಂಡ ಅವರು, ಉಭಯ ದೇಶಗಳ ನಡುವೆ ಗಡಿ ಬಿಕ್ಕಟ್ಟು ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ತಲೆದೋರಿದೆ. ಈ ಬಗ್ಗೆ ಪ್ರಧಾನಿ ಮೋದಿ ಬೇಸರಗೊಂಡಿದ್ದಾರೆ. ಅವರ ಮೂಡ್ ಸರಿಯಿಲ್ಲ ಎಂದರು.

ಮೋದಿ ನಮ್ಮ ದೇಶದ ಪರಮಾಪ್ತ ಮಿತ್ರ. ಅವರು ಮಹಾ ನಾಯಕರು ಎಂದು ಮತ್ತೊಬ್ಬ ಗುಣಗಾನ ಮಾಡಿದ ಟ್ರಂಪ್, ಭಾರತದ ಜನ ನನ್ನನ್ನು ತುಂಬಾ ಇಷ್ಟಪಡುತ್ತಾರೆ. ನನ್ನ ದೇಶದ ಮಾಧ್ಯಮದ ಮಂದಿಗಿಂತಳು ಭಾರತೀಯರ ನನ್ನನ್ನು ಇಷ್ಟಪಡುತ್ತಾರೆ ಎಂದು ಅವರು ಹೇಳುವ ಮೂಲಕ ಪತ್ರಕರ್ತರನ್ನು ಕಕ್ಕಾಬಿಕ್ಕಿಗೊಳಿಸಿದರು.

Facebook Comments