“ಸಾಕಪ್ಪ ಸಾಕು ಚೀನಾ ಸಹವಾಸ, ಇನ್ಮುಂದೆ ಯಾವುದೇ ವ್ಯವಹಾರ ಮಾಡಲ್ಲ” : ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಮೇ 12-ಚೀನಾದ ವಾಣಿಜ್ಯ ಸಮರ ಮತ್ತು ಕೊರೊನಾ ವೈರಸ್ ಕೊಡುಗೆಯಿಂದ ಬೇಸತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಮ್ಯೂನಿಸ್ಟ್ ದೇಶದ ಜೊತೆ ಯಾವುದೇ ಕಾರಣಕ್ಕೂ ಮತ್ತೆ ವಾಣಿಜ್ಯ ವಹಿವಾಟು ನಡೆಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಶ್ವೇತಭವನದ ರೋಸ್‍ಗಾರ್ಡನ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಚೀನಾ ಜೊತೆ ಮತ್ತೆ ವಾಣಿಜ್ಯ ಸಂಬಂಧ ಕುದುರಿಸುವ ಸಾಧ್ಯತೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದರು.

ಅಮೆರಿಕ ಮತ್ತು ಚೀನಾ ನಡುವೆ ಭುಗಿಲೆದ್ದ ವಾಣಿಜ್ಯ ಸಮರವನ್ನು ಶಮನಗೊಳಿಸಲು ಈ ವರ್ಷಾರಂಭದಲ್ಲಿ ವಾಷಿಂಗ್ಟನ್ ಸಲ್ಲಿಸಿದ್ದ ದ್ವಿಪಕ್ಷೀಯ ಒಪ್ಪಂದ ಪ್ರಸ್ತಾವನೆಯನ್ನು ಬೀಜಿಂಗ್ ಗೌರವಿಸಿಲ್ಲ. ಇದಕ್ಕಾಗಿ ಆ ದೇಶವು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಮತ್ತೊಮ್ಮೆ ಗಂಭೀರ ಎಚ್ಚರಿಕೆ ನೀಡಿದರು.

#10 ದಶಲಕ್ಷ ಟೆಸ್ಟ್ :  ಅಮೆರಿಕದಲ್ಲಿ ಕೊರೊನಾ ರೋಗ ತಡೆಗಾಗಿ ಸಾರ್ವಜನಿಕರಿಗೆ ಪರೀಕ್ಷಾ ಸಾಮಥ್ರ್ಯವನ್ನು ಹೆಚ್ಚಿಸಲಾಗುತ್ತಿದ್ದು, ಈ ವಾರದಲ್ಲಿ ಆರೋಗ್ಯ ತಪಾಸಣೆಗೆ ಒಳಪಟ್ಟವರ ಸಂಖ್ಯೆ 10 ದಶಲಕ್ಷ (1 ಕೋಟಿ) ದಾಟಲಿದೆ ಎಂದು ಪ್ರಶ್ನೆಯೊಂದಕ್ಕೆ ಅಧ್ಯಕ್ಷರು ಉತ್ತರಿಸಿದರು.

Facebook Comments

Sri Raghav

Admin