ಚೀನಾದ ಅಗ್ರಮಾನ್ಯ ಮೊಬೈಲ್ ಸಂಸ್ಥೆ ಹುವಾಯಿಗೆ ಅಮೆರಿಕ ನಿರ್ಬಂಧ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಮೇ 16- ಚೀನಾದ ಅಗ್ರಮಾನ್ಯ ಮೊಬೈಲ್ ಸಂಸ್ಥೆ ಹುವಾಯಿ ಉತ್ಪನ್ನಗಳಿಗೆ ಅಮೆರಿಕ ನಿರ್ಬಂಧ ವಿಧಿಸಿದ್ದು ಕಪ್ಪು ಪಟ್ಟಿಗೆ ಸೇರಿಸಿದೆ.  ದೇಶದ ಭದ್ರತೆಗೆ ಆತಂಕ ಉಂಟು ಮಾಡಿರುವ ಈ ಸಂಸ್ಥೆಯ ಮೊಬೈಲ್‍ಗಳು ಮತ್ತು ಇತರ ಸಂವಹನ ಸಾಧನಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ, ಅಮೆರಿಕನ್ ಸಂಸ್ಥೆಗಳು ಮತ್ತು ನಾಗರಿಕರಿಗೆ ಸೂಚಿಸಿದೆ.

ಇಂಥ ಉತ್ಪನ್ನಗಳು ದೇಶದ ಭದ್ರತೆಗೆ ಅಪಾಯ ತಂದೊಡ್ಡುತ್ತವೆ ಎಂಬುದು ಈಗಾಗಲೇ ಸಾಬೀತಾಗಿದೆ. ಅಮೆರಿಕ ವಿರುದ್ಧವಾಗಿ ಹುವಾಯಿ ಸಂಸ್ಥೆ ಬೇಹುಗಾರಿಕೆ ನಡೆಸಿದ ಪ್ರಕರಣ ಈಗಾಗಲೇ ಜಗಜಾಹೀರವಾಗಿದೆ.

ದೇಶದ ಭದ್ರತೆ ಮತ್ತು ಅಮೆರಿಕನ್ನರ ಸುರಕ್ಷತೆಗಾಗಿ ನಾವು ಹುವಾಯಿ ಸಂಸ್ಥೆಯ ಮೊಬೈಲ್‍ಗಳನ್ನು ಬ್ಲಾಕ್ ಲಿಸ್ಟ್‍ಗೆ ಸೇರಿಸುತ್ತಿದ್ದೇವೆ. ಈ ಸಂಸ್ಥೆಯ ಉತ್ಪನ್ನಗಳನ್ನು ಯಾರೂ ಬಳಸಬಾರದು ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ