ಕೊರೊನಾ ಭೀತಿಯಿಂದ ಭಾರತದ ಔಷಧಿ ಸೇವಿಸುತ್ತಿರುವ ಟ್ರಂಪ್..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಮೇ 19-ಕಿಲ್ಲರ್ ರೊನಾ ವೈರಸ್‍ಅಮೆರಿಕ ಮೇಲೆ ವ್ಯಾಪಕ ದಾಳಿ ನಡೆಸುತ್ತಿದ್ದರೂ ಫೇಸ್ ಮಾಸ್ಕ್ ಧರಿಸದಿದ್ದ ಅಧ್ಯಕ್ಷ ಡೊನಾಲ್ಡ್‍ ಟ್ರಂಪ್, ಈ ಹೆಮ್ಮಾರಿಗೆ ಹೆದರಿ ಕಳೆದೊಂದು ವಾರದಿಂದ ಭಾರತದ ಮಲೇರಿಯಾ ನಿರೋಧಕಔಷಧಿ ಸೇವಿಸುತ್ತಿದ್ದಾರೆ.

ಈ ವಿಷಯವನ್ನು ಸ್ವತ: ಟ್ರಂಪ್ ಹೇಳಿದ್ದಾರೆ. ರೆಸ್ಟೋರೆಂಟ್ ಮಾಲೀಕರು ಮತ್ತು ಮುಖ್ಯಸ್ಥರ ಸಭೈಯಲ್ಲಿ ಭಾಗವಹಿಸಿದ್ದ ಅಮೆರಿಕಅಧ್ಯಕ್ಷರು, ಕೊರೊನಾ ಸೋಂಕು ತಗಲುವುದನ್ನುತಪ್ಪಿಸಲುತಾವು ಪ್ರತಿದಿನ ಹೈಡ್ರೋಕ್ಸಿಕ್ಲೋರೊಕ್ವಿನ್ (ಎಚ್‍ಸಿಕೂ) ಔಷಧಿಯನ್ನು ಸೇವಿಸುತ್ತಿರುವುದಾಗಿ ತಿಳಿಸಿದರು.

ಅಮೆರಿಕದಲ್ಲಿಕಿಲ್ಲರ್‍ಕೊರೊನಾ ಸೋಂಕು ವ್ಯಾಪಕವಾಗಿ ಸಾವು ಮತ್ತು ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಟ್ರಂಪ್‍ತಮ್ಮದೇಶಕ್ಕೆ ಮಲೇರಿಯಾ ಪ್ರತಿರೋಧಕ ಎಚ್‍ಸಿಕ್ಯೂ ಔಷಧಿಗಳನ್ನು ರವಾನಿಸುವಂತೆ ಭಾರತಕ್ಕೆ ಮನವಿ ಮಾಡಿದ್ದರು.

ಇದಕ್ಕ ಸ್ಪಂದಿಸಿ ಪ್ರಧಾನಿ ನರೇಂದ್ರ ಮೋದಿ ನಿರ್ಬಂದವನ್ನು ಸಡಿಸಿಲಿ ಅಮೆರಿಕ ಸೇರಿದಂತೆಇತರ 30 ದೇಶಗಳಿಗೆ ಔಷಧಿಗಳನ್ನು ರಫ್ತು ಮಾಡಿದ್ದರು. ಟ್ರಂಪ್‍ಅವರ ಆಪ್ತ ವೈದ್ಯರು ಈ ಔಷಧಿ ಸೇವಿಸುವುದು ಬೇಡ.

ಅನಗತ್ಯವಾಗಿಇದನ್ನು ಸೇವಿಸಿದರೆ ಅಸುರಕ್ಷಿತಎಂದು ಸಲಹೆ ಮಾಡಿದ್ದರು. ಆದರೆ ಶ್ವೇತಭವನದ ವೈದ್ಯರ ಸೂಚನೆ ಮೇರೆಗೆ ಮಲೇರಿಯಾ ಪ್ರತಿರೋಧಔಷಧಿಯನ್ನುಟ್ರಂಪ್ ಬಳಸುತ್ತಿದ್ದಾರೆ.

ಅಮೆರಿಕ ಮೇಲೆ ಕಳೆದ ನಾಲ್ಕು ತಿಂಗಳುಗಳಿಂದ ಕಿಲ್ಲರ್‍ಕೊರೊನಾ ವೈರಸ್ ದಾಳಿ ನಡೆಸಿ 3 ಲಕ್ಷಕ್ಕೂಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿದ್ದರೂ, ಟ್ರಂಪ್ ಮಹಾಶಯರು ಪೇಶ್ ಮಾಸ್ಕ್ ಧರಿಸಿಲ್ಲ. ಆದರೆ ಮುನ್ನೆಚ್ಚರಿಕೆಕ್ರಮವಾಗಿ ಭಾರತದ ಎಚ್‍ಸಿಕ್ಯೂ ಔಷಧಿ ಸೇವಿಸುತ್ತಿದ್ದಾರೆ.

Facebook Comments

Sri Raghav

Admin