ಶಾಲೆಗಳನ್ನು ಆರಂಭಿಸದಿದ್ದರೆ ಅನುದಾನ ಕಟ್ : ಟ್ರಂಪ್ ಬೆದರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಜು.9- ನವೆಂಬರ್‍ನಲ್ಲಿ ನಡೆಯುವ ಚುನಾವಣೆಗೂ ಮುನ್ನವೇ ಶಾಲೆಗಳನ್ನು ಪುನಃ ಆರಂಭಿಸದಿದ್ದರೆ ಸರ್ಕಾರದಿಂದ ಸಿಗುವ ಅನುದಾನವನ್ನು ಕಡಿತ ಮಾಡುವುದಾಗಿ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ವಿಶ್ವದಾದ್ಯಂತ ಸಾಂಕ್ರಾಮಿಕ ರೋಗ ಕೊರೊನಾದಿಂದಾಗಿ ಜನ ಬೆಚ್ಚಿ ಬಿದ್ದಿದ್ದಾರೆ. ಗುಂಪು ಸೇರಬಾರದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂಬ ಎಚ್ಚರಿಕೆಯ ಸಂದೇಶಗಳು ಪದೇ ಪದೇ ಬಿತ್ತರವಾಗುತ್ತಿವೆ,

ಇತ್ತೀಚೆಗೆ 32 ದೇಶಗಳ 300ಕ್ಕೂ ಹೆಚ್ಚು ವಿಜ್ಞಾನಿಗಳು ಅಧ್ಯಯನ ನಡೆಸಿ ಕೊರೊನಾ ಸೋಂಕು ಗಾಳಿಯಲ್ಲೂ ಹರಡಲಿದೆ ಎಂದು ಪ್ರತಿಪಾದಿಸಲಿದ್ದಾರೆ. ಇಂತಹ ಸಂದಿಗ್ಧ ಕಾಲದಲ್ಲಿ ಶಾಲೆಗಳನ್ನು ಆರಂಭಿಸುವಂತೆ ಅಮೆರಿಕಾ ಅಧ್ಯಕ್ಷರು ಸೂಚನೆ ನೀಡಿರುವುದು ಅಮೆರಿಕನ್ನರನ್ನು ಕೆರಳಿಸಿದೆ.

ಜರ್ಮನಿ, ಡೆನ್ಮಾರ್ಕ್, ನಾರ್ವೆ, ಸ್ವಿಡನ್ ಸೇರಿದಂತೆ ಹಲವಾರು ದೇಶಗಳಲ್ಲಿ ಶಾಲೆಗಳು ಪುನರಾರಂಭವಾಗಿವೆ, ಯಾವುದೇ ಸಮಸ್ಯೆಗಳಾಗಿಲ್ಲ. ಹಾಗೆಯೇ ಅಮೆರಿಕಾದಲ್ಲೂ ಕೂಡ ನವೆಂಬರ್‍ನ ಚುನಾವಣೆಗೂ ಮುನ್ನವೇ ಶಾಲೆಗಳು ಆರಂಭವಾಗಬೇಕು. ಇದು ಮಕ್ಕಳ ಭವಿಷ್ಯ ಮತ್ತು ಅವರ ಕುಟುಂಬದ ಹಿತದೃಷ್ಟಿಯಿಂದ ಅತ್ಯಗತ್ಯ ಎಂದು ಹೇಳಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕಾರಣ ಮಾಡಬಾರದು, ಆದೇಶ ಉಲ್ಲಂಘಿಸಿ ಶಾಲೆಗಳನ್ನು ತೆರೆಯದೆ ಇದ್ದರೆ ಅಮೆರಿಕಾ ಸರ್ಕಾರ ನೀಡುವ ಆರ್ಥಿಕ ನೆರವನ್ನು ಕಡಿತ ಮಾಡಲಾಗುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಟ್ರಂಪ್ ಅವರ ಈ ಆದೇಶಕ್ಕೆ ಅವರ ಪುತ್ರಿ ಇವಂಕಾ ಟ್ರಂಪ್, ಅಮೆರಿಕಾದಲ್ಲಿ ಮಕ್ಕಳ ಸುರಕ್ಷತೆಗಾಗಿ ಜಾರಿಗೊಳಿಸುತ್ತಿರುವ ಸುರಕ್ಷತೆ ಮುನ್ನೆಚ್ಚರಿಕೆ ಕ್ರಮಗಳು ಕೈಗೆಟಕುವ ದರದಲ್ಲಿಲ್ಲ,

ಹೀಗಾಗಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮತ್ತಷ್ಟು ಆರ್ಥಿಕ ನೆರವನ್ನು ಒದಗಿಸಬೇಕಾಗಿದೆ. ಮಕ್ಕಳ ಪೋಷಕರು ಮರಳಿ ಕೆಲಸಕ್ಕೆ ಹೋಗಬೇಕು, ದುಡಿಮೆ ಆರಂಭಿಸಬೇಕು, ಮಕ್ಕಳ ಸುರಕ್ಷತೆಗಾಗಿ ಹೆಚ್ಚಿನ ಆದ್ಯತೆ ನೀಡಬೇಕೆಂದು ಕರೆ ನೀಡಿದ್ದಾರೆ.

ಮಕ್ಕಳ ಸುರಕ್ಷತೆಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಹೊರಡಿಸಿರುವ ಸುರಕ್ಷತಾ ಮಾರ್ಗಸೂಚಿಗಳು ದುಬಾರಿಯಾಗಿದ್ದು ಅವಾಸ್ತವಿಕವೆಂದು ಖುದ್ದು ಡೊನಾಲ್ಡ್ ಟ್ರಂಪ್ ಅವರೇ ಟೀಕೆ ಮಾಡಿದರು. ಈಗ ಹಿಂದು ಮುಂದು ನೋಡದೆ ಶಾಲೆಗಳನ್ನು ಪುನರಾರಂಭಿಸಿ ಎಂದು ಆದೇಶಿಸಿದ್ದಾರೆ.

ನ್ಯೂಯಾರ್ಕ್‍ನ ಮೇಯರ್ ಬಿಲ್ ಡಿ.ಬೆಸ್ಲಿಯೋ ಅವರು ಮಕ್ಕಳು ಶಾಲೆಗೆ ಬಂದರೆ ಸುರಕ್ಷಿತ ವಾತಾವರಣವಿಲ್ಲ ಹಾಗಾಗಿ ಆನ್‍ಲೈನ್ ಶಿಕ್ಷಣವೇ ಸೂಕ್ತ ಎಂದು ಆದೇಶ ನೀಡಿದ್ದಾರೆ.

Facebook Comments