ಭಾರತ, ಚೀನಾ ದೇಶಗಳಿಗೆ ನೀಡುವ ಸಬ್ಸಿಡಿಗೆ ಟ್ರಂಪ್ ಕತ್ತರಿ

ಈ ಸುದ್ದಿಯನ್ನು ಶೇರ್ ಮಾಡಿ

Trump--02
ಚಿಕಾಗೋ, ಸೆ.7- ಭಾರತ ಮತ್ತು ಚೀನಾದಂಥ ಆರ್ಥಿಕವಾಗಿ ಪ್ರಗತಿ ಹೊಂದುತ್ತಿರುವ ದೇಶಗಳಿಗೆ ಸಬ್ಸಿಡಿ ನಿಲ್ಲಿಸಲು ತಾವು ಬಯಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದರೊಂದಿಗೆ ಭಾರತಕ್ಕೆ ಅಮೆರಿಕದ ಸಹಾಯಧನ ಕಡಿತವಾಗುವ ಮುನ್ಸೂಚನೆ ಇದೆ.

ನಾರ್ತ್ ಡಕೋಟಾದ ಫಾರ್ಗೊ ನಗರದಲ್ಲಿ ಸಂಪನ್ಮೂಲ ಕ್ರೋಢೀಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಚೀನಾ ಇತರ ರಾಷ್ಟ್ರಗಳಿಗಿಂತಲೂ ಶೀಘ್ರ ಬೆಳವಣಿಗೆಯಾಗುತ್ತಿರುವ ದೇಶಗಳೆಂದು ತಾವು ಪರಿಗಣಿಸಿದ್ದು, ಅವುಗಳಿಗೆ ನೀಡುತ್ತಿರುವ ಸಬ್ಸಿಡಿ ನಿಲ್ಲಿಸಲು ಇಚ್ಚೆ ಹೊಂದಿರುವುದಾಗಿ ಹೇಳಿದರು.

ಚೀನಾ ದೊಡ್ಡ ಆರ್ಥಿಕ ಶಕ್ತಿಶಾಲಿ ರಾಷ್ಟ್ರವಾಗಲು ಅವಕಾಶ ನೀಡಿದ ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯುಟಿಒ) ಕ್ರಮದ ಬಗ್ಗೆ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದರು. ಕೆಲವು ದೇಶಗಳನ್ನು ನಾವು ಆರ್ಥಿಕವಾಗಿ ಪ್ರಗತಿ ಹೊಂದುತ್ತಿರುವ ರಾಷ್ಟ್ರಗಳೆಂದು ಪರಿಗಣಿಸಿದ್ದೇವೆ. ಇನ್ನೂ ಹಲವು ದೇಶಗಳು ಇನ್ನೂ ಪ್ರೌಢಾವಸ್ಥೆ ಹಂತ ತಲುಪಿಲ್ಲ. ಹೀಗಾಗಿ ಅಂಥ ರಾಷ್ಟ್ರಗಳಿಗೆ ಸಹಾಯಧನ ನೀಡುವುದನ್ನು ಮುಂದುವರಿಸುತ್ತೇವೆ. ಹಾಗೆಯೇ ಘಾರತ ಮತ್ತು ಚೀನಾದಂಥ ರಾಷ್ಟ್ರಗಳು ಸದೃಢ ಆರ್ಥಿಕ ಅಭಿವೃದ್ದಿಯತ್ತ ದಾಪುಗಾಲು ಹಾಕುತ್ತಿವೆ. ಅಂಥ ದೇಶಗಳಿಗೆ ಸಬ್ಸಿಡಿ ನಿಲ್ಲುಸುವುದು ನಮ್ಮ ಇಚ್ಚೆಯಾಗಿದೆ ಎಂದು ಟ್ರಂಪ್ ಹೇಳಿದರು.

Facebook Comments

Sri Raghav

Admin