ಭಾರತ-ಪಾಕ್ ಶಾಂತಿ ಸಂಧಾನ, ಸಾಕಷ್ಟು ಪ್ರಗತಿಯಾಗಿದೆ : ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಸೆ.17- ಆರ್ಟಿಕಲ್ 370 ರದ್ಧತಿ ನಂತರ ಪ್ರಕ್ಷುಬ್ಧಗೊಂಡಿದ್ದ ಭಾರತ-ಪಾಕ್ ಗಡಿಯಲ್ಲಿ ಪರಿಸ್ಥಿತಿ ತಿಳಿಯಾಗಿದೆ. ಉಭಯದೇಶಗಳ ನಡುವೆ ಶಾಂತಿ ಸಂಧಾನ ಪ್ರಕ್ರಿಯೆಯಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಶ್ವೇತ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಭಾರತ ಮತ್ತು ಪಾಕಿಸ್ತಾನದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಮತ್ತು ಇಮ್ರಾನ್ ಖಾನ್ ಅವರನ್ನು ಸಧ್ಯದಲ್ಲೇ ಭೇಟಿ ಮಾಡಲಿದ್ದು, ಉಭಯ ದೇಶಗಳ ಪರಿಸ್ಥಿತಿ ಸುಧಾರಿಸಲಿದೆ ಎಂದು ಹೇಳಿದರು.

ಹೌಸ್ಟ್‍ನಲ್ಲಿ ಸೆ. 22ರಂದು ನಡೆಯುವ ಸಮಾವೇಶವೊಂದರಲ್ಲಿ ಟ್ರಂಪ್ ಮತ್ತು ಮೋದಿ ಭಾರತೀಯ ಮೂಲದ ಅಮೆರಿಕರನ್ನು ಉದ್ದೇಶಿಸಿ ಜಂಟಿ ಭಾಷಣ ಮಾಡಲಿದ್ದಾರೆ. ಆದರೆ ಟ್ರಂಪ್ ಎಲ್ಲಿ, ಯಾವಾಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡುತ್ತಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ.

Facebook Comments