ತಿಮ್ಮಪ್ಪನ ಆಸ್ತಿ ಹರಾಜು ಪ್ರಕ್ರಿಯೆ ರದ್ದುಪಡಿಸಿದ ಟಿಟಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ತಿರುಪತಿ, ಮೇ 26-ವಿಶ್ವ ವಿಖ್ಯಾತ ತಿರುಪತಿ ತಿಮ್ಮಪ್ಪನಿಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ 50ಕ್ಕೂ ಹೆಚ್ಚು ಅತ್ಯಮೂಲ್ಯ ಸ್ಥಿರಾಸ್ತಿಗಳನ್ನು ಹರಾಜು ಹಾಕಲು ಮುಂದಾಗಿದ್ದ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ (ಟಿಟಿಡಿ) ಯತ್ನಕ್ಕೆ ಭಾರೀ ಹಿನ್ನೆಡೆಯಾಗಿದೆ.

ವೆಂಕಟೇಶ್ವರನ ಅಪಾರ ಭಕ್ತ ಸಮೂಹ, ಧಾರ್ಮಿಕ ಮುಖಂಡರು, ವಿರೋಧ ಪಕ್ಷಗಳ ನಾಯಕರು ಮತ್ತು ವಿವಿಧ ಸಂಘ-ಸಂಸ್ಥೆಗಳ ಭಾರೀ ವಿರೋಧಕ್ಕೆ ಮಣಿದ ಆಂಧ್ರಪ್ರದೇಶ ಸರ್ಕಾರವು ಹರಾಜು ಮತ್ತು ಮಾರಾಟ ಪ್ರಕ್ರಿಯೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ.

ದೇಶದ ವಿವಿಧೆಡೆ ಇರುವ 50ಕ್ಕೂ ಹೆಚ್ಚು ಸ್ಥಿರಾಸ್ತಿಗಳನ್ನು ಹರಾಜು ಹಾಕಬೇಕೆಂಬ ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ರಾಜ್ಯ ಸರ್ಕಾರವು ಟಿಟಿಡಿಗೆ ನಿರ್ದೇಶನ ನೀಡಿದೆ.

ಸಪ್ತಗಿರಿ ವಾಸ ವೆಂಕಟೇಶ್ವರನ ಭಕ್ತರು ಆಂಧ್ರಪ್ರದೇಶ, ತಮಿಳುನಾಡು, ಹೃಷಿಕೇಶ ಮತ್ತು ಉತ್ತರಾಖಂಡ ಸೇರಿದಂತೆ ವಿವಿಧೆಡೆಗಳಲ್ಲಿ ಇರುವ ಅಮೂಲ್ಯ ಸ್ವತ್ತುಗಳನ್ನು ಟ್ರಸ್ಟ್‍ಗೆ ದೇಣಿಗೆಯಾಗಿ ನೀಡಿದ್ದರು.

ಆದರೆ ಕೊರೊನಾ ವೈರಸ್‍ನಿಂದ ರಾಜ್ಯ ಸರ್ಕಾರವು ಟಿಟಿಡಿಗೆ ನಿರ್ದೇಶನ ನೀಡಿದೆ. ಡೆಡ್ಲಿ ಕೊರೊನಾ ವೈರಸ್ ದಾಳಿಯಿಂದ ತಿರುಪತಿ ದೇವಸ್ಥಾನ ಕಳೆದ ಎರಡು ತಿಂಗಳಿನಿಂದ ಮುಚ್ಚಲ್ಪಟ್ಟಿದ್ದು, ದೇಗಲು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ವಿವಿಧೆಡೆ ಇರುವ ಟ್ರಸ್ಟ್‍ನ ಕೋಟ್ಯಂತರ ರೂ. ಮೌಲ್ಯದ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಿ ನಷ್ಟವನ್ನು ಸರಿದೂಗಿಸಲು ಟಿಟಿಡಿ ಉದ್ದೇಶಿಸಿತ್ತು.

ಆದರೆ ಟ್ರಸ್ಟ್‍ನ ನಿರ್ಧಾರಕ್ಕೆ ಭಕ್ತ ಕೋಟಿ, ಧಾರ್ಮಿಕ ಮುಖಂಡರು, ವಿವಿಧ ಪಕ್ಷಗಳ ನಾಯಕರಿಂದ ತೀವ್ರ ಪ್ರತಿಭಟನೆ ಎದುರಾದ ಹಿನ್ನೆಲೆಯಲ್ಲಿ ಟ್ರಸ್ಟ್‍ನ ಆಸ್ತಿಗಳ ಹರಾಜು ಪ್ರಕ್ರಿಯೆಯನ್ನು ಆಂಧ್ರಪ್ರದೇಶ ಸರ್ಕಾರ ರದ್ದುಗೊಳಿಸಿದೆ.

Facebook Comments