ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣ ಹೋಮ

ಈ ಸುದ್ದಿಯನ್ನು ಶೇರ್ ಮಾಡಿ

Trees--01
ತುಮಕೂರು, ಜು.11- ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಸಾಲು ಸಾಲು ಮರಗಳ ಮಾರಣ ಹೋಮ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದ ಹನುಮಂತಪುರದ ಬಳಿ ರಸ್ತೆ ಬದಿಯಲ್ಲಿದ್ದ ಬೃಹತ್ ಮರಗಳನ್ನು ಧರೆಗುರುಳಿಸಲಾಗಿದೆ. ರಸ್ತೆ ಅಭಿವೃದ್ಧಿಗೆ ಯಾವುದೇ ತೊಡಕಾಗದಿರುವ ಉದ್ಯಾನವನದ ಪಕ್ಕದಲ್ಲಿರುವ ಮರಗಳನ್ನು ಸಹ ಕಡಿಯಲಾಗಿದ್ದು , ಅರಣ್ಯ ಇಲಾಖೆಯ ಅಧಿಕಾರಿಗಳು ಸಹ ಕಣ್ಮುಚ್ಚಿ ಕುಳಿತಿದ್ದಾರೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ.

ಜನಸಾಮಾನ್ಯರು ಅವರ ಜಮೀನುಗಳಲ್ಲಿ ಬೆಳೆದಿರುವ ಹಾಗೂ ರಸ್ತೆ ಬದಿ ಬೆಳೆಗಳಿಗೆ ತೊಂದರೆಯಾಗುವ ಮರಗಳನ್ನು ಕಡಿದರೆ 101 ಕಾನೂನುಗಳನ್ನು ಕೇಳುತ್ತೀರಿ. ಈಗ ಯಾವುದೇ ನಿಯಮ ಪಾಲಿಸದೆ ಏಕಾಏಕಿ ರಾತ್ರೋ ರಾತ್ರಿ ಮರವನ್ನು ಕಡಿದಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೂರಾರು ಪಕ್ಷಿಗಳು ಈ ಮರಗಳಲ್ಲಿ ತಮ್ಮ ಗೂಡುಗಳನ್ನು ಕಟ್ಟಿಕೊಂಡು ಆಶ್ರಯ ಪಡೆದಿದ್ದವು. ಈಗ ಮರಗಳನ್ನು ಕಡಿದಿರುವುದರಿಂದ ಅವು ಸಹ ಅತಂತ್ರ ಸ್ಥಿತಿಯಲ್ಲಿವೆ. ಇನ್ನು ವಾಯು ವಿಹಾರಕ್ಕೆ ಬರುವ ಹಿರಿಯ ನಾಗರಿಕರು ಮರದ ನೆರಳಿನಲ್ಲಿ ಆಶ್ರಯ ಪಡೆಯುತ್ತಿದ್ದರು. ಅವರಿಗೂ ಸಹ ತೊಂದರೆಯಾಗಿದೆ.

Facebook Comments

Sri Raghav

Admin