ಗುಂಡು ಹಾರಿಸಿ ರೌಡಿಯನ್ನು ಸೆರೆಹಿಡಿದ ಪೊಲೀಸರು
ತುಮಕೂರು, ನ.8- ಸಾರ್ವಜನಿಕರನ್ನು ಹಾಗೂ ಅಂಗಡಿಗಳ ಮಾಲೀಕರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ರೌಡಿಯನ್ನು ಬಂಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಮಾಡಿದಾಗ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ತಗುಲಿ ಸಿಕ್ಕಿ ಬಿದ್ದಿದ್ದಾನೆ.ತುಮಕೂರು ತಾಲ್ಲೂಕು ಅರೆಕೆರೆ ಗ್ರಾಮದ ನಿವಾಸಿ ರೋಹಿತ್ (27) ಪೊಲೀಸರ ಗುಂಡೇಟು ತಗುಲಿ ಗಾಯಗೊಂಡಿರುವ ಆರೋಪಿ.ಕೊಲೆ, ದರೋಡೆ , ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಈತ ಹಲವಾರು ಪ್ರಕರಣಗಳ ರುವಾರಿಯೂ ಹೌದು.
ತುಮಕೂರು ನಗರದ ಕುಖ್ಯಾತ ರೌಡಿಶೀಟರ್ ರೋಹಿತ್ನನ್ನು ಕ್ಯಾತ್ಸಂದ್ರ ಪೊಲಿಸ್ ಠಾಣೆ ವ್ಯಾಪ್ತಿಯ ಜಲ್ಲಿ ಕ್ರಷರ್ ಸಮೀಪದ ಬಳಿ ಇರುವ ತೋಟದ ಮನೆಯೊಂದರಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಮೇರೆಗೆ ನಿನ್ನೆ ಸಂಜೆ ರೋಹಿತ್ನನ್ನು ಹಿಡಿಯಲು ಹೋದ ಪೊಲಿಸರ ಮೇಲೆಯೇ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ತಕ್ಷಣ ತಿಲಕ್ ಪಾರ್ಕ್ವೃತ್ತ ನಿರೀಕ್ಷಕರಾದ ಮುನಿರಾಜು ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಆರೋಪಿ ರೋಹಿತ್ಗೆ ಎಚ್ಚರಿಸಿದ್ದಾರೆ.
ಪೊಲೀಸರ ಮಾತಿಗೆ ಕಿವಿಗೊಡದೆ ಮಚ್ಚಿನಿಂದ ಹೆಡ್ಕಾನ್ಸ್ಟೇಬಲ್ ಹನುಮರಂಗಯ್ಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದಾಗ ಆತ್ಮರಕ್ಷಣೆಗಾಗಿ ಮುನಿರಾಜು ಅವರು ಹಾರಿಸಿದ ಗುಂಡು ರೋಹಿತ್ ಬಲಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.
ತಕ್ಷಣ ರೋಹಿತ್ನನ್ನು ವಶಕ್ಕೆ ಪಡೆದು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಂಜೆಯ್ ಗಾಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಹೆಡ್ಕಾನ್ಸ್ಟೇಬಲ್ ಹನುಮರಂಗಯ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈತನ ವಿರುದ್ಧ 15ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ ಎಂದು ಪೊಲಿಸ್ ಮೂಲಗಳಿಂದ ತಿಳಿದು ಬಂದಿದೆ.
ಇತ್ತೀಚೆಗಷ್ಟೇ ಹೊಸ ಬಡಾವಣೆ ಪೊಲೀಸ್ ಠಾಣೆಯ ವ್ಯಾಪ್ತಿಯ ವಾಲ್ಮೀಕಿ ನಗರದ ವಿಶ್ವೇಶ್ವರ ಆರಾಧ್ಯ ಎಂಬುವರ ಮನೆಗೆ ಹಾಡು ಹಗಲೇ ದರೋಡೆಕೋರರು ನುಗ್ಗಿ 5.87 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳನ್ನು ಹಾಗೂ ನಗದನ್ನು ದೋಚಿಕೊಂಡು ಪರಾರಿಯಾಗಿದ್ದರು. ಇದರ ಸಂಬಂಧ 10 ಜನರನ್ನು ಬಂಸಿದ್ದರು. ಆದರೆ ಘಟನೆಯ ರೂವಾರಿ ರೋಹಿತ್ ನಾಪತ್ತೆಯಾಗಿದ್ದ.
ನಿನ್ನೆ ಸಂಜೆ ಈತನ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೊನೆಗೂ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್ಪಿ ಕೋನ ವಂಶಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೆಪೊಲೀಸ್ ವರಿಷ್ಠಾಕಾರಿ ಉದ್ದೇಶ ನೇತೃತ್ವದಲ್ಲಿ ಡಿವೈಎಸ್ಪಿ ತಿಪ್ಪೇಸ್ವಾಮಿ, ತಿಲಕ್ ಪಾರ್ಕ್ ವೃತ್ತ ನಿರೀಕ್ಷಕ ಮುನಿರಾಜು, ನಗರ ಠಾಣೆಯ ವೃತ್ತ ನಿರೀಕ್ಷಕರಾದ ನವೀನ್, ಸಬ್ ಇನ್ಸ್ಪೆಕ್ಟರ್ಗಳಾದ ಮಂಜುನಾಥ್, ನವೀನ್, ಎಎಸ್ಐಗಳಾದ ಪರಮೇಶ್, ರಮೇಶ, ಸಿಬ್ಬಂದಿಗಳಾದ ಸೈಮನ್ ವಿಕ್ಟರ್, ಮುನಾವರ್ ಪಾಷ, ಹನುಮರಂಗಯ್ಯ, ಎಸ್ಪಿ ಕಛೇರಿಯ ನರಸಿಂಹ ರಾಜು, ನುರಿತ ವಾಹನಗಳ ಚಾಲಕರನ್ನು ಒಳಗೊಂಡ ವಿಶೇಷ ತಂಡ ಆರೋಪಿಯನ್ನು ಬಂಸುವಲ್ಲಿ ಯಶಸ್ವಿಯಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಕೋನ ವಂಶಿ ಕೃಷ್ಣ ಅವರು ಈ ಸಂಜೆ ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಸಾರ್ವಜನಿಕರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆರೋಪಿ ರೋಹಿತ್ನನ್ನು ಹಿಡಿಯಲು ಶ್ರಮಿಸಿದ ಎಲ್ಲಾ ಅಕಾರಿಗಳು , ಸಿಬ್ಬಂದಿಗಳ ಕಾರ್ಯ ವೈಖರಿ ಬಗ್ಗೆ ಅಭಿನಂದಿಸುತ್ತೇನೆ ಎಂದು ಅವರು ತಿಳಿಸಿದರು.