ನವಜಾತ ಶಿಶುವನ್ನು ಬೇಲಿಯಲ್ಲಿ ಬಚ್ಚಿಟ್ಟು ಹೋದ ತಾಯಿ

ಈ ಸುದ್ದಿಯನ್ನು ಶೇರ್ ಮಾಡಿ

babyತುರುವೇಕೆರೆ, ನ.16- ಅದ್ಯಾವ ಮಹಾತಾಯಿ ಹೆತ್ತ ಮಗುವೋ ಏನೋ ನಿರ್ದಯವಾಗಿ ತನ್ನ ಪುಟ್ಟ ಕಂದನನ್ನು ಗೋಣಿಚೀಲದಲ್ಲಿಟ್ಟು ಹೊಲದ ಬಳಿ ಬಿಟ್ಟು ಹೋಗಿರುವ ಹೇಯ ಘಟನೆ ತಾಲೂಕಿನ ದೊಡ್ಡಮಲ್ಲಿಗೆರೆಯಲ್ಲಿ ನಡೆದಿದೆ.

ದೊಡ್ಡ ಮಲ್ಲಿಗೆರೆ ಗ್ರಾಮದ ಶಿವಮ್ಮ ಎಂಬುವವರು ಹೊಲಕ್ಕೆ ಹೋಗಿದ್ದಾಗ ಮಗು ಅಳುವ ಶಬ್ದ ಕೇಳಿದೆ. ಕೂಡಲೇ ಆಕೆ ಪರಿಶೀಲಿಸಿದಾಗ ಹೊಲದ ಬೇಲಿಯ ಸಮೀಪ ಗೋಣಿ ಚೀಲದಲ್ಲಿ ಸುತ್ತಿ ಹಸುಗೂಸನ್ನು ಬಿಟ್ಟುಹೋಗಿರುವುದು ಗೊತ್ತಾಗಿದೆ. ತಕ್ಷಣ ಶಿವಮ್ಮ ಮಗುವನ್ನು ಎತ್ತಿಕೊಂಡು ಮನೆಗೆ ಬಂದು ಆರೈಕೆ ಮಾಡಿದ್ದಾರೆ.

ಸುದ್ದಿ ತಿಳಿದ ಪೊಲೀಸರು ಮಾಯಸಂದ್ರ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ದು, ಮಗು ಆರೋಗ್ಯವಾಗಿದೆ. ಮಗು ಯಾರದ್ದು ಎಂದು ಪತ್ತೆಯಾಗಿಲ್ಲ. ಯಾವ ತಾಯಿ ಮಗುವನ್ನು ಬಿಟ್ಟು ಹೋಗಿದ್ದಾಳೊ ತಿಳಿಯದು. ಹೆಣ್ಣೆಂಬ ಕಾರಣಕ್ಕೋ ಅಥವಾ ಅನೈತಿಕ ಸಂಬಂಧದಲ್ಲಿ ಜನಿಸಿದ ಮಗುವೋ ತಿಳಿಯದು.

ಒಟ್ಟಾರೆ ನಿರ್ದಯವಾಗಿ ಕೂಸನ್ನು ಬಿಟ್ಟು ಹೋಗಿರುವುದು ಜನರಲ್ಲಿ ಬೇಸರ ತರಿಸಿದೆ. ಮಗುವನ್ನು ಹೆತ್ತ ಮಹಿಳೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಆಸ್ಪತ್ರೆಯಲ್ಲಿರುವ ಮಗುವನ್ನು ಮಕ್ಕಳ ಸಂರಕ್ಷಣಾಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ.

Facebook Comments