ತುಮಕೂರಿನಲ್ಲಿ ದಿನೇದಿನೇ ಹೆಚ್ಚುತ್ತಲೇ ಇದೆ ಕೊರೊನಾ ಸೋಂಕಿತರ ಸಂಖ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಜೂ.29- ಜಿಲ್ಲೆಯಲ್ಲಿ ದಿನೇದಿನೇ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು ಇದುವರೆಗೆ ಒಟ್ಟು 93 ಸೊಂಕಿತ ಪ್ರಕರಣಗಳು ಕಂಡು ಬಂದಿದ್ದು ಇನ್ನೂ ಹೆಚ್ಚಾಗುವ ಸಾದ್ಯತೆ ದಟ್ಟವಾಗಿದೆ. ಗುಬ್ಬಿ-1, ಕೊರಟಗೆರೆ-2, ಮದುಗಿರಿ-2, ಪಾವಗಡ-5, ತಿಪಟೂರು-1, ತುಮಕೂರು-7, ಒಟ್ಟು-18 ಪ್ರಕರಣಗಳು ದೃಢಪಟ್ಟಿವೆ.

ತುಮಕೂರು ತಾಲ್ಲೂಕಿನಲ್ಲಿ 7 ಪ್ರಕರಣಗಳು ಕಂಡುಬಂದಿದ್ದು ಭೈರಸಂದ್ರ ಗ್ರಾಮದಲ್ಲಿ ಕಂಟೈನ್ ಮೆಂಟ್ ಜೋನ್ ನಲ್ಲಿದ್ದ 45 ವರ್ಷದ ಮಹಿಳೆ ಗೆ ಸೊಂಕು ದೃಡಪಟ್ಟಿದೆ. ಕ್ವಾರೆಂಟೈನ್ ನಲ್ಲಿದ್ದ ಹೊನ್ನುಡಿಕೆ ಗ್ರಾಮದ 54 ವರ್ಷದ ವ್ಯಕ್ತಿಗೆ ಸೊಂಕು ತಗುಲಿದೆ. ಮಹಾರಾಷ್ಟ್ರದಿಂದ ಬಂದಿದ್ದ ತುಮಕೂರು ನಗರದ ಶಾಂತಿನಗರದ 58 ವರ್ಷದ ವ್ಯ್ಕಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಜಿಲ್ಲಾ ನ್ಯಾಯಾಲಯದಲ್ಲಿ ಸರ್ಕಾರಿ ವಕೀಲರಾಗಿ ಕೆಲಸ ಮಾಡುತ್ತಿದ್ದ 42 ವರ್ಷದ ಮಹಿಳೆಗೆ ಕೊರೊನಾ ಸೊಂಕು ತಗುಲಿದೆ. ಕ್ಯಾತ್ಸಂದ್ರದಲ್ಲಿ 34 ವರ್ಷದ ವ್ಯಕ್ತಿಯಲ್ಲಿ ಸೊಂಕು ಕಾಣಿಸಿಕೊಡಿದೆ, ಬಡ್ಡಿಹಳ್ಳಿ ಯಲ್ಲಿ 65 ಹಾಗೂ 76 ವರ್ಷದ ಇಬ್ಬರು ವೃದ್ದರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಪಾವಗಡ ತಾಲ್ಲೂಕಿನಲ್ಲಿ 5 ಪ್ರಕರಣಗಳು ವರದಿಯಾಗಿದ್ದು ಕೆಂಚಗಾನಹಳ್ಳಿ ಗ್ರಾಮದ 32 ವರ್ಷದ ವ್ಯಕ್ತಿಯಲ್ಲಿ ಸೊಂಕು ಪತ್ತೆಯಾಗಿದೆ.

ಕಡಮಲ ಕುಂಟೆ ಗ್ರಾಮದ 34 ವರ್ಷದ ವ್ಯಕ್ತಿಗೆ ಸೊಂಕು ದೃಡಪಟ್ಟಿದೆ,ಭೂಪೂರು ತಾಂಡಾದಲ್ಲಿ 40 ವರ್ಷದ ವ್ಯಕ್ತಿಗೆ ಸೊಂಕು ದೃಡಪಟ್ಟಿದೆ. ಪಾವಗಡದ 36 ವರ್ಷದ ಹಾಗೂ 45 ವರ್ಷದ ಇಬ್ಬರಿಗೆ ಸೊಂಕು ಪತ್ತೆಯಾಗಿದೆ. ಮದುಗಿರಿಯಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿದ್ದು ಬೆಂಗಳೂರಿನ ನಂದಿನಿ ಲೇ ಔಟ್ ನಿಂದ ಮದುಗಿರಿಗೆ ಬಂದಿದ್ದ 16 ವರ್ಷದ ಬಾಲಕನಿಗೆ ಸೊಂಕು ದೃಡಪಟ್ಟಿದೆ.ಮತ್ತೊಂದು ಬಡವನಹಳ್ಳಿಯ 63 ವರ್ಷದ ವೃದ್ದನಿಗೆ ಸೊಂಕು ದೃಡಪಟ್ಟಿದೆ.

ಕೊರಟಗೆರೆ ತಾಲ್ಲೂಕಿನಲ್ಲಿ ಇಬ್ಬರು ಮಕ್ಕಳಲ್ಲಿ ಕೊರೊನಾ ಸೊಂಕು ಕಾಣಿಸಿಕೊಂಡಿದ್ದು ಕೊರಟಗೆರೆ ಪಟ್ಟಣದ 9 ವರ್ಷದ ಬಾಲಕ ಹಾಗೂ ಎಸ್ ಟಿ ಹಳ್ಳಿ ಗ್ರಾಮದ 9.5 ವರ್ಷದ ಬಾಲಕಿಗೆ ಕೊರೊನಾ ಹೆಮ್ಮಾರಿ ವ್ಯಾಪಿಸಿದೆ.ಇಬ್ಬರು (ಐ ಎಲ್ ಐ) ಸಾಮಾನ್ಯ ಜ್ವರ ಕೆಮ್ಮು ನೆಗಡಿಯಂತಹ ಲಕ್ಷಣಗಳು ಕಂಡು ಬಂದಿದೆ.

ತಿಪಟೂರು ಹಾಗೂ ಗುಬ್ಬಿ ತಾಲ್ಲೂಕಿನಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿದ್ದು ತಿಪಟೂರು ನಗರದ ಚಾಮುಂಡೇಶ್ವರಿ ಬಡಾವಣೆ 38 ವರ್ಷದ ಮಹಿಳೆಗೆ ಕೊರೊನಾ ಸೊಂಕು ಪತ್ತೆಯಾಗಿದೆ. ಇವರು ತಮಿಳುನಾಡಿನಿಂದ ಬಂದಿದ್ದು ಪಿ879 ಸಂಪರ್ಕದಲ್ಲಿದ್ದರು. ಗುಬ್ಬಿ ತಾಲ್ಲೂಕಿನ ಕೊಂಡ್ಲಿಕ್ರಾಸ್ ಬಳಿಯ ಎನ್ ಹೊಸಹಳ್ಳಿ ಗ್ರಾಮದ 35 ವರ್ಷದ ಲಾರಿ ಚಾಲಕನಿಗೆ ಕೊರೊನಾ ಸೊಂಕು ತಗುಲಿದ್ದು ಇವರು ಬೆಂಗಳೂರು ಹುಬ್ಬಳ್ಳಿಗೆ ಹೋಗಿ ಬಂದಿದ್ದರು.

18 ಜನ ಸೊಂಕಿತರಲ್ಲಿ 9 ಜನರಿಗೆ (ಥಿmಠಿಣomಚಿಣಛಿ IಐI) ಜ್ವರ,ಕೆಮ್ಮು ನೆಗಡಿಯಂತಹ ಲಕ್ಷಣಗಳು ಕಂಡುಬಂದಿದ್ದು 9 ಜನರಿಗೆ ಸೊಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಎಲ್ಲಾ 18 ಜನ ಸೊಂಕಿತರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಆರೋಗ್ಯವಾಗಿದ್ದಾರೆ. ಸೊಂಕಿತರು ವಾಸವಿದ್ದ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳಲಾಗಿದೆ.

ಇಂದು ಕಂಡು ಬಂಧಿರುವ 18 ಜನ ಸೊಂಕಿತರಲ್ಲಿ ಒಬ್ಬರು ಕ್ವಾರೆಂಟೈನ್ ನಲ್ಲಿದ್ದರು, ಮತ್ತೊಬ್ಬರು ಕಂಟೇನ್ ಮೆಂಟ್ ಏರಿಯಾದಲ್ಲಿದ್ದವರು, ತುಮಕೂರು, ಗುಬ್ಬಿ, ಮದುಗಿರಿ ಯ ನಾಲ್ವರು ಸೊಂಕಿತರಿಗೆ ಪ್ರಯಾಣದ ಹಿನ್ನೆಲೆಯಿದೆ. ಉಳಿದಂತೆ 12 ಜನರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಪತ್ತೆಯಾಗಿಲ್ಲ.

ಕೊರೊನಾ ಸೊಂಕು ಸರ್ಕಾರಿ ಕಚೇರಿಗಳಿಗೂ ಲಗ್ಗೆ ಇಟ್ಟಿದ್ದು ಇತ್ತೀಚೆಗಷ್ಟೇ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿ ಲ್ಯಾಬ್ ಟೆಕ್ನಿಷೀಯನ್ ಗೆ ಸೊಂಕು ತಗುಲಿತ್ತು.ಮತ್ತೊಂದು ಪಾವಗಡದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ವಿಸ್ತರಣಾಧಿಕಾರಿಗೆ ಸೊಂಕು ವಕ್ಕರಿಸಿತ್ತು. ಇದೀಗ ಜಿಲ್ಲಾ ನ್ಯಾಯಾಲಯದ ಆವರಣಕ್ಕೂ ಕೊರೊನಾ ಹೆಮ್ಮಾರಿ ಕಾಲಿಟ್ಟಿದ್ದು ಜಿಲ್ಲೆಯ ಸರ್ಕಾರಿ ನೌಕರರನ್ನೇ ಬೆಚ್ಚಿ ಬೇಳಿಸಿದೆ.

Facebook Comments