ತುಮಕೂರಲ್ಲಿ 7 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು :  ಶಾಲೆ ಮುಗಿಸಿ ಕೊಂಡು ಮನೆಗೆ ತೆರಳುತ್ತಿದ್ದ ಮೂರನೆ ತರಗತಿ ಬಾಲಕಿಯನ್ನು ಕಾಮುಕನೊಬ್ಬ ರಸ್ತೆ ದಾಟಿಸುವ ನೆಪದಲ್ಲಿ ಕರೆದೊಯ್ದು ಅತ್ಯಾ ಚಾರವೆಸಗಿರುವ ಘಟನೆ ತಿಲಕ್‍ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ಹಾಡಹಗಲೇ ನಡೆದಿದ್ದು, ಕಲ್ಪತರು ನಾಡಿನ ಜನರನ್ನು ಆತಂಕಕ್ಕೀಡುಮಾಡಿದೆ.

ಘಟನೆ ಸಂಬಂಧ ಈದ್ಗಾ ಮೈದಾನ ಸಮೀಪವಿರುವ ಚಾಂದಿನಿ ಚೌಕ್‍ನ ಎರಡನೆ ಕ್ರಾಸ್‍ನಲ್ಲಿ ವೆಲ್ಡಿಂಗ್ ಶಾಪ್ ಮತ್ತು ದ್ವಿಚಕ್ರ ವಾಹನಗಳ ಸರ್ವೀಸ್ ಸ್ಟೇಷನ್ ಇಟ್ಟುಕೊಂಡಿರುವ ಹುಸೇನ್ ಪಾಷ (56) ಎಂಬಾತನನ್ನು ಪೊಲೀಸರು ರಾತ್ರಿ ಬಂಧಿಸಿದ್ದಾರೆ.

ನಿನ್ನೆ ಬಾಲಕಿ ಮಧ್ಯಾಹ್ನ ಶಾಲೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಈತ ಬಾಲಕಿಯನ್ನು ತಡೆದು ಆಟೋ ಬರುತ್ತಿದೆ ನಿಂತುಕೋ ಎಂದು ಹೇಳಿ ನಾನು ನಿನಗೆ ರಸ್ತೆ ದಾಟಲು ಸಹಾಯ ಮಾಡುತ್ತೇನೆಂದು ಪುಸಲಾಯಿಸಿ ಕೈ ಹಿಡಿದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ. ಬಾಲಕಿಯ ಚೀರಾಟ ಕೇಳಿಸಿಕೊಂಡ ದಾರಿಹೋಕರು ಸಮೀಪ ಹೋಗಿ ನೋಡಿದಾಗ ಬಾಲಕಿ ಅಸ್ವಸ್ಥಗೊಂಡಿ ರುವುದನ್ನು ಕಂಡು ತಕ್ಷಣ ತಿಲಕ್‍ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನವಂಶಿಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದ್ದೇಶ್, ಡಿವೈಎಸ್‍ಪಿ ತಿಪ್ಪೆಸ್ವಾಮಿ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದರು.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಡಿವೈಎಸ್‍ಪಿ ತಿಪ್ಪೆಸ್ವಾಮಿ ಹಾಗೂ ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುವುದು ಕಂಡುಬಂದಿದೆ.

Facebook Comments