ಕೊರೋನಾ ಭಯ : ಸಂತೆಗೆ ಬಂದ ಜನರನ್ನು ವಾಪಸ್ ಕಳುಹಿಸಿದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಮಾ.21- ದೇಶಾದ್ಯಂತ ಹಾಗೂ ರಾಜ್ಯಾದ್ಯಂತ ಎಲ್ಲಾ ಕಡೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಎಲ್ಲಾ ವಹಿವಾಟುಗಳನ್ನು ಬಂದ್ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ ನಿನ್ನೆಯಷ್ಟೇ ಜಿಲ್ಲಾಡಳಿತ 144 ಸೆಕ್ಷನ್ ಜಾರಿಗೊಳಿಸಿದ್ದರೂ ಇಂದು ಸಂತೆಗೆ ಬಂದ ವ್ಯಾಪಾರಿಗಳನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ. ದಿನೇದಿನೇ ರಾಜ್ಯದಲ್ಲಿ ಕೋರೋನಾ ವೈರಸ್ ಸೋಂಕಿತರು ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಜಾತ್ರೆಗಳು, ಸಂತೆಗಳು, ಮದುವೆಗಳು ಶಾಲಾ-ಕಾಲೇಜುಗಳು ಎಲ್ಲವನ್ನೂ ಬಂದ್ ಮಾಡಲಾಗಿದೆ.

ಸಂಪೂರ್ಣವಾಗಿ ಜಾತ್ರೆ, ಸಂತೆಗಳ ವಹಿವಾಟುಗಳನ್ನು ನಿಷೇಧಿಸಲಾಗಿದೆ. ಆದರೆ ಇದೆಲ್ಲವನ್ನು ಧಿಕ್ಕರಿಸಿ ತುಮಕೂರು ಜಿಲ್ಲಾಯ ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿ ಹೊಸಕೆರೆ ಗ್ರಾಮದಲ್ಲಿ ವಾರದ ಸಂತೆಯಿತ್ತು. ನಿನ್ನೆಯಷ್ಟೇ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ಅಧಿಕೃತವಾಗಿ 144 ಸೆಕ್ಷನ್ ಜಾರಿಗೊಳಿಸಿದ್ದರೂ ಕೂಡ ಇಲ್ಲಿನ ಗ್ರಾಮ ಪಂಚಾಯತಿಯವರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇರುವ ಹಿನ್ನೆಲೆಯಲ್ಲಿ ಇಂದು ಸಂತೆಗೆ ನೂರಾರು ಜನ ಆಗಮಿಸಿದ್ದರು.

ವಿಷಯ ತಿಳಿದ ಕೂಡಲೇ ಚೇಳೂರು ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ವಿಜಯಕುಮಾರ್ ಹಾಗೂ ಸಿಬ್ಬಂದಿ ವರ್ಗ ಸ್ಥಳಕ್ಕೆ ದೌಡಾಯಿಸಿ ಸಂತೆಗೆ ಆಗಮಿಸಿದವರ ಮನವೊಲಿಸಿ ವಾಪಸ್ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವರು  ತಕರಾರು ಮಾಡಿದವರಿಗೆ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ನಂತರ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಪೊಲೀಸರ ವಿರುದ್ಧ ತಕರಾರು ತೆಗೆದ ಕೆಲವರಿಗೆ ಲಾಠಿಯ ರುಚಿಯನ್ನು ತೋರಿಸಲಾಗಿದೆ .

ಹೊಸಕೆರೆ ಗ್ರಾಮ ಪಂಚಾಯತಿಯವರು ನಿರ್ಲಕ್ಷ್ಯ: ಜಿಲ್ಲಾಧಿಕಾರಿಗಳಾದ ರಾಕೇಶ್ ಕುಮಾರ್ ಅವರು ಜಿಲ್ಲಾಯಲ್ಲಿ ಕೋರೋನಾ ವೈರಸ್ ಹಿನ್ನೆಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಯ ಎಲ್ಲಾ ತಾಲೂಕಿನ ತಹಸೀಲ್ದಾರ್‍ಗಳು, ಉಪವಿಭಾಗಾಧಿಕಾರಿಗಳು ಸೇರಿದ ಎಲ್ಲರಿಗೂ ಆದೇಶ ರವಾನೆಯಾಗಿದೆ. ಆದರೆ ಹೊಸಕೆರೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶನಿವಾರವಾದ್ದರಿಂದ ಇಂದು ಸಂತೆಗೆ ಜನರು ಆಗಮಿಸುತ್ತಾರೆ.

ಅದರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕು ಎಂಬ ಅರಿವಿಲ್ಲದೆ ಇದ್ದ ಪರಿಣಾಮ ಇಂದು ಬೆಳಿಗ್ಗೆ ಅಂತ ಜನರು ವ್ಯಾಪಾರಕ್ಕೆ ಆಗಮಿಸಿದ್ದರು. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಚೇಳೂರು ಪೊಲೀಸರು ದೌಡಾಯಿಸಿ ಬಂದಿದ್ದವರೆಲ್ಲರೂ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ . ಇಲ್ಲಿನ ಗ್ರಾಮ ಪಂಚಾಯತಿಯವರು ನಿರ್ಲಕ್ಷದ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ತಹಸೀಲ್ದಾರ್ ಅವರು ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

Facebook Comments