ತುಮಕೂರು ಜಿಲ್ಲೆಯಲ್ಲಿ ಶತಕ ದಾಟಿದ ಸೋಂಕಿತರ ಸಂಖ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜು.1- ಜಿಲ್ಲಾಯಲ್ಲಿ ಇಂದು ಒಂದೇ ದಿನ 20 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ,ಸೋಂಕಿತರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ. ಇನ್ನೂ 2242 ಜನರ ಪರೀಕ್ಷಾ ವರದಿ ಬಾಕಿಯಿದ್ದು, ಮುಂದಿನ ದಿನಗಳಲ್ಲಿ ಸೊಂಕಿತರ ಸಂಖ್ಯೆ ಶರವೇಗದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ.

ತಾಲ್ಲೂಕುವಾರು ಸೊಂಕಿತರ ಸಂಖ್ಯೆ: ಮಧುಗಿರಿ-2, ಕುಣಿಗಲ್-3, ತುಮಕೂರು-6, ಪಾವಗಡ-5, ಕೊರಟಗೆರೆ-1, ಶಿರಾ-3. ಮಧುಗಿರಿ ತಾಲ್ಲೂಕಿನ ಬಂದ್ರೆಹಳ್ಳಿ ಗ್ರಾಮದಲ್ಲಿ 28 ಹಾಗೂ 25 ವರ್ಷದ ಇಬ್ಬರು ಯುವಕರಿಗೆ ಇಂದು ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಕುಣಿಗಲ್ ತಾಲ್ಲೂಕಿನಲ್ಲಿ ಮೂರು ಪ್ರಕರಣಗಳು ಇಂದು ಪತ್ತೆಯಾಗಿದ್ದು, ದೊಡ್ಡಕಲ್ಲಹಳ್ಳಿ ಗ್ರಾಮದ 17 ವರ್ಷದ ಯುವಕ ಮತ್ತು ಸಣಬ ಗ್ರಾಮದ 37 ವ್ಯಕ್ತಿ ಹಾಗೂ 36 ವರ್ಷದ ಮತ್ತೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ತುಮಕೂರು ನಗರದಲ್ಲಿ 6 ಪ್ರಕರಣಗಳು ಕಂಡುಬಂದಿದ್ದು, ಬಿಎಂಟಿಸಿ ಬಸ್ ಚಾಲಕ ಶ್ರೀನಗರದ ನಿವಾಸಿ 55 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಚಿಕ್ಕಪೇಟೆ ಬಾಲಾಜಿ ರಸ್ತೆಯಲ್ಲಿ ವಾಸವಿರುವ ದಂಪತಿಗೆ ಸೋಂಕು ದೃಢಪಟ್ಟಿದೆ.

ರೈಲ್ವೆ ಇಲಾಖೆ ಉದ್ಯೋಗಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇವರು ತಮಿಳುನಾಡು, ಆಂಧ್ರದಿಂದ ತುಮಕೂರಿನ ಗಾಂಧಿನಗರಕ್ಕೆ ಬಂದಿದ್ದರು.

ಬೆಂಗಳೂರಿನ ದೊಡ್ಡಕಲ್ಲಸಂದ್ರ ಮೂಲದ 53 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಮತ್ತೊಬ್ಬರು ಜೂ.26ರಂದು ಅಪಘಾತದಲ್ಲಿ ಗಾಯಗೊಂಡು ಸಿದ್ಧಗಂಗಾ ಆಸ್ಪತ್ರೆಯಲ್ಲಿ ಸ್ಪೆ ೈನಲ್ ಕಾರ್ಡ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮರಳೂರು ದಿಣ್ಣೆ ನಿವಾಸಿ 29 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಬಳಿಕ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಪಾವಗಡ ತಾಲ್ಲೂಕಿನಲ್ಲಿ 5 ವರ್ಷದ ಗಂಡು ಮಗು ಸೇರಿದಂತೆ 5 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎಸ್ ಪಾಳ್ಯದ ಮೂವರಲ್ಲಿ ಸೋಂಕು ಪತ್ತೆಯಾಗಿದ್ದು, 5 ವರ್ಷದ ಗಂಡು, 38 ವರ್ಷದ ಮಹಿಳೆ, 63 ವರ್ಷದ ವೃದ್ಧನಿಗೆ ಸೋಂಕು ಇದೆ. ಪಟ್ಟಣದ ಸಾಯಿರಾಮ್ ಛತ್ರದ ಎದುರು ವಾಸವಿರುವ 28 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

ಮತ್ತೊಬ್ಬ ಸೋಲನಾಯ್ಕನಹಳ್ಳಿ ನಿವಾಸಿ 73 ವರ್ಷದ ವ್ಯಕ್ತಿಗೆ ಪಾಸಿಟಿವ್ ಬಂದಿದೆ. ಇವರೆಲ್ಲರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಲಾಗುತ್ತಿದೆ. ಕೊರೊಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದ 67 ವರ್ಷದ ವೃದ್ಧ ಕೆಮ್ಮು, ನೆಗಡಿ, ಜ್ವರದಿಂದ ಜಿಲ್ಲಾಸ್ಪತ್ರೆಗೆ ಬಂದಿದ್ದು, ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಬುದ್ಧಿ ಕಲಿಯದ ಜನರು: ದಿನೇ ದಿನೇ ತುಮಕೂರು ನಗರ ಸೇರಿದಂತೆ ಜಿಲ್ಲಾಯಾದ್ಯಂತ ಕೋವಿಡ್ -19 ಸೋಂಕು ಹೆಚ್ಚುತ್ತಿದ್ದು, ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡದೆ ಮನಸೋ ಇಚ್ಛೆ ಓಡಾಡುತ್ತಿದ್ದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸಲಿದೆ.

Facebook Comments