ತುಮಕೂರು ಸಂಪೂರ್ಣ ಸ್ತಬ್ಧ, ಹಿಂದೂಗಳ ವಿರಾಟ ಶಕ್ತಿ ಪ್ರದರ್ಶನ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಅ.22- ಭಜರಂಗದಳ ಕಾರ್ಯಕರ್ತರ ಮೇಲೆ ನಡೆದ ಹಲ್ಲೇ ಖಂಡಿಸಿ, ಅಕ್ರಮ ಗೋಹತ್ಯಾ ನಿಷೇಧಿಸುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ತುಮಕೂರು ಬಂದ್‍ಗೆ ನಗರ ಸಂಪೂರ್ಣ ಸ್ತಬ್ಧಗೊಂಡಿದೆ.

ಬಂದ್ ಹಿನ್ನೆಲೆಯಲ್ಲಿ ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು, ವಾಹನ ಓಡಾಟಕ್ಕೆ ಅವಕಾಶ ನೀಡಿದ್ದರು ಸಹ ಪ್ರಯಾಣಿಕರಿಲ್ಲದೇ ರಸ್ತೆಗಳು ಬಣಗುಡುತ್ತಿದ್ದವು. ಪ್ರಮುಖ ವಾಣಿಜ್ಯ ರಸ್ತೆಯಾದ ಎಂಜಿ ರಸ್ತೆ ಸಂಪೂರ್ಣ ಸ್ತಬ್ಧಗೊಂಡಿದೆ.

ಬಿಗಿ ಬಂದೋಬಸ್ತ್  : ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕರೆ ನೀಡಿರುವ ಬಂದ್ ಹಿನ್ನೆಲೆಯಲ್ಲಿ ಆರು ಕೆಎಸ್‍ಆರ್‍ಪಿ ತುಕಡಿಗಳು, ಡಿಎಆರ್ ಪೊಲೀಸ್ ಸೇರಿದಂತೆ 800ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ತಿಳಿಸಿದರು.

ಘಟನೆಗೆ ಸಂಬಂಸಿದಂತೆ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಟೌನ್‍ಹಾಲ್ ನಲ್ಲಿ ಪ್ರತಿಭಟನಾ ಸಭೆ ಮಾತ್ರ ನಡೆಯಲಿದ್ದು, ಎಲ್ಲ ಸಮುದಾಯಗಳು ಸಹ ಶಾಂತಿ ಬಯಸುತ್ತಿದ್ದು, ಶಾಂತಿ ಕದಡುವ ಪ್ರಯತ್ನಕ್ಕೆ ಅವಕಾಶವಿಲ್ಲದಂತೆ ಸ್ವಯಂ ಪ್ರೇರಿತ ಬಂದ್ ಆಚರಣೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಕಟ್ಟೆಚ್ಚರ: ಬಂದ್ ಹಿನ್ನೆಲೆಯಲ್ಲಿ ಪ್ರಮುಖ ಪ್ರದೇಶಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಘಟನೆ ನಡೆದ ಗುಬ್ಬಿ ಗೇಟ್, ಬಿ.ಜಿ.ಪಾಳ್ಯ, ಟೌನ್‍ನಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್  ಏರ್ಪಡಿಸಲಾಗಿದ್ದು, ಕೇಂದ್ರ ವಲಯ, ಬೆಂಗಳೂರಿನ ಪೊಲೀಸ್ ತುಕಡಿಗಳು ಬಂದೋಬಸ್ತ್ ನಲ್ಲಿ ಭಾಗವಹಿಸಿದ್ದು, ಡಿವೈಎಸ್ಪಿ ಶ್ರೀನಿವಾಸ್, ಸರ್ಕಲ್ ಇನ್ ಸ್ಪೆಕ್ಟರ್‍ಗಳಾದ ಮುನಿರಾಜು, ನವೀನ್ ಬಂದೋಬಸ್ತ್  ನೇತೃತ್ವ ವಹಿಸಿದ್ದರು.

Facebook Comments