ಮುಂಬಡ್ತಿಗಾಗಿ ಕಳ್ಳದಾರಿ ಹಿಡಿದು ಯಾಮಾರಿಸಿದ್ದ ಎಸ್ಐ ನಾಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು : ಪೊಲೀಸ್ ಅಧಿಕಾರಿಗಳನ್ನು ಬೆಚ್ಚಿ ಬೀಳಿಸುವ ಪ್ರಸಂಗ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ನಡೆದಿದೆ.

ಬ್ರಿಟಿಷರ ಕಾಲದಿಂದಲೂ ಪೊಲೀಸ್ ಇಲಾಖೆಯನ್ನು ಶಿಸ್ತಿನ ಇಲಾಖೆ ಎಂದು ಕರೆಯಲಾಗುತ್ತದೆ .ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟ ಹಾಕುವುದಲ್ಲದೆ ಶಾಂತಿ ಕಾಪಾಡುವುದು ಹಾಗೂ ಜನಸಾಮಾನ್ಯರಿಗೆ ನ್ಯಾಯ ದೊರಕಿಸುವುದಕ್ಕೆ ಹತ್ತಿರವಾದ ಇಲಾಖೆ ಎಂದರೆ ಅದು ಪೊಲೀಸ್ ಇಲಾಖೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವವರು ಪೊಲೀಸರು ಎಂದೇ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರಗಳು ಪೊಲೀಸರಿಗೆ ಹಲವಾರು ಸೌಲಭ್ಯಗಳನ್ನು ನೀಡಿದೆ ವಾಹನ ಸೌಲಭ್ಯ ವಸತಿ ಸೌಲಭ್ಯ ಆರೋಗ್ಯ ಸೌಲಭ್ಯ ಕುಟುಂಬದವರಿಗೆ ಆರೋಗ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ಸರ್ಕಾರಗಳು ನೀಡುತ್ತಿವೆ ಅಲ್ಲದೆ ಕೈತುಂಬಾ ಸಂಬಳ ಉನ್ನತ ಹುದ್ದೆಗಳಿಗೆ ಬಡ್ತಿ ಬಡ್ತಿ ನೀಡಿ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದರೂ ಕೆಲವು ಆಸೆಬುರುಕ ಅಧಿಕಾರಿಗಳು ಮಾಡಬಾರದ್ದನ್ನು ಮಾಡಿ ಕಡೆಗೆ ಅಧಿಕಾರಿಗಳಿಗೆ ಸಿಕ್ಕಿ ಹಾಕಿಕೊಂಡು ನಾಪತ್ತೆ ಆಗುವಂತಹ ಪ್ರಕರಣಗಳು ನಡೆಯುತ್ತಿವೆ ಅಂತಹ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲ್ಲಿದೆ ನೋಡಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಬೆಚ್ಚಿ ಬೀಳಿಸುವ ಪ್ರಸಂಗ .

..ಏನಪ್ಪ ಇದು ಪೀಠಿಕೆ ಅಂತೀರಾ ಇಲ್ಲಿದೆ ನೋಡಿ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ನಡೆದಿರುವ ಮಹಾನ್ ಕರ್ಮಕಾಂಡ .

ತನ್ನ ಮೇಲಿರುವ ಕ್ರಿಮಿನಲ್ ಪ್ರಕರಣಗಳನ್ನು ಮುಚ್ಚಿ ಹಾಕಿಕೊಂಡು ನನ್ನ ಮೇಲೆ ಯಾವುದೇ ಪ್ರಕರಣಗಳಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಸಬ್ ಇನ್ಸ್ಪೆಕ್ಟರ್ ಒಬ್ಬರು ಡಿಕ್ಲೇರೇಶನ್ ಸಲ್ಲಿಸಿ ಆ ಡಿಕ್ಲರೇಷನ್ ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಸಿಬ್ಬಂದಿಯೊಬ್ಬರು ಆಮಿಷಕ್ಕೆ ಒಳಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ದಿಕ್ಕು ತಪ್ಪಿಸಿ ಅವರಿಂದ ಸಹಿ ಹಾಕಿಸಿ ಕೇಂದ್ರೀಯ ವಲಯದ ಐಜಿಪಿ ಅವರಿಗೆ ಕಳುಹಿಸಿ ಸಿಕ್ಕಿಬಿದ್ದಿರುವ ಪ್ರಸಂಗ ಈಗ ನಡೆದಿದೆ ಕಳೆದ ಎರಡು ದಿನಗಳಿಂದ ಸಬ್ ಇನ್ಸ್ ಪೆಕ್ಟರ್ ನಾಪತ್ತೆಯಾಗಿದ್ದು ಈ ಪ್ರಕರಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೋನಾ ವಂಶಿಕೃಷ್ಣ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ .

#ಪೂರ್ಣ ವಿವರ ಇಲ್ಲಿದೆ ನೋಡಿ :
ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಬ್ ಇನ್ಸ್ಪೆಕ್ಟರ್ ಒಬ್ಬರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು .

ಕಳೆದ ಎಂಟು ವರ್ಷಗಳಿಂದ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುವಾಗ ನಕಲಿ ದಾಖಲೆ ಸೃಷ್ಟಿ ಹಾಗೂ ಹತ್ತರಿಂದ ಹದಿನೈದು ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಲ್ಲದೆ ಇವರ ಮೇಲೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಕೂಡ ಸಲ್ಲಿಸಲಾಗಿದೆ ಅದರಲ್ಲಿ ನಾಲ್ಕನೇ ಆರೋಪಿಯಾಗಿ ಇಲ್ಲಿನ ಸಬ್ ಇನ್ಸ್ಪೆಕ್ಟರ್ ಇದ್ದಾರೆ .
ರಾಜ್ಯ ಸರ್ಕಾರ ಅರ್ಹ ಸಬ್ ಇನ್ಸ್ಪೆಕ್ಟರ್ಗಳಿಗೆ ಬಡ್ತಿಗಾಗಿ ಡಿಕ್ಲರೇಷನ್ ಕಾಲ್ ಮಾಡಿದ್ದಾರೆ .ಡಿಕ್ಲರೇಷನ್ ಕಾಫಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಿ ಇಲ್ಲಿಂದ ದೃಢೀಕರಿಸಿ ಕೇಂದ್ರೀಯ ವಲಯದ ಐಜಿಪಿ ಅವರಿಗೆ ಕಳುಹಿಸಿಕೊಡಬೇಕು ಆದರೆ ಮಾಹಿತಿಯನ್ನೇ ತಿರುಚಿ ಅಧಿಕಾರಿಗಳನ್ನು ದಿಕ್ಕು ತಪ್ಪಿಸಿ ಸಹಿ ಹಾಕಿಸಿ ಡಿಕ್ಲರೇಷನ್ ಕಳಿಸಿರುವ ಪ್ರಸಂಗ ತುಮಕೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದಿದ್ದು ಇಲಾಖೆಯ ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ ಈ ಪ್ರಕರಣ .

ಸಬ್ ಇನ್ಸ್ಪೆಕ್ಟರ್ ಒಬ್ಬರು ತುಮಕೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಡಿಕ್ಲರೇಷನ್ ಸಲ್ಲಿಸಿದ್ದು ನನ್ನ ಮೇಲೆ ಯಾವುದೇ ರೀತಿಯ ಪ್ರಕರಣಗಳು ದಾಖಲಾಗಿರುವುದಿಲ್ಲ ಕಳೆದ ಎಂಟು ವರ್ಷಗಳಿಂದ ಒಂದು ಕಪ್ಪು ಚುಕ್ಕಿಯೂ ಇರದಂತೆ ನಾನು ಕರ್ತವ್ಯ ನಿರ್ವಹಿಸುತ್ತಿದ್ದೇನೆ ಒಂದು ವೇಳೆ ನನ್ನ ಮೇಲೆ ಅಂತಹ ಪ್ರಕರಣಗಳೇನಾದರೂ ದಾಖಲಾಗಿದ್ದರೆ ಅದಕ್ಕೆ ನಾನೇ ನೇರ ಹೊಣೆ ಎಂದು ಡಿಕ್ಲೇರ್ ಹೆಸರು ಸಲ್ಲಿಸಿದ್ದಾರೆ .

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಸಿಬ್ಬಂದಿಯೊಬ್ಬರು ಇವರ ಜೊತೆ ಶಾಮೀಲಾಗಿ ಇವರ ಮೇಲೆ ಯಾವುದೇ ರೀತಿಯ ಪ್ರಕರಣಗಳು ಇರುವುದಿಲ್ಲ ಇವರು ನೀಡಿರುವ ಎಲ್ಲ ಮಾಹಿತಿ ಸತ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಡತವನ್ನು ನೀಡಿ ಸಹಿ ಹಾಕಿಸಿದ್ದಾರೆ .ಜಿಲ್ಲೆಗೆ ನೂತನವಾಗಿ ಬಂದಿರುವ ಅತ್ಯಂತ ಕ್ರಿಯಾಶೀಲ ಹಾಗೂ ಶಿಸ್ತುಬದ್ಧ ಅಧಿಕಾರಿಯೆಂದೇ ಹೆಸರಾಗಿರುವ ಇಲ್ಲಿನ ಎಸ್ಪಿ ಅವರು ಇದೇ ಮೊದಲ ಬಾರಿಗೆ ಜಿಲ್ಲೆಯ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಸಿಬ್ಬಂದಿಗಳು ನೀಡಿರುವ ವರದಿ ಸರಿ ಇರಬಹುದೆಂದು ಸಹಿ ಹಾಕಿದ್ದಾರೆ.

ನಂತರ ಈ ಡಿಕ್ಲರೇಷನ್ ಪ್ರತಿ ಬೆಂಗಳೂರಿನ ಕೇಂದ್ರೀಯ ವಲಯದ ಐಜಿಪಿ ಅವರಾದ ಶರತ್ಚಂದ್ರ ಅವರ ಕಚೇರಿಗೆ ಕಡತ ಹೋದ ಬಗ್ಗೆ ಬೆಂಗಳೂರಿನ ನಿವಾಸಿಗಳಾದ ಶಿವರುದ್ರ ರಾಜು ಎಂಬುವರು ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಕೆ ಸಂತೋಷ್ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ ಅದರಲ್ಲಿ ನಾಲ್ಕನೇ ಆರೋಪಿಯಾಗಿದ್ದಾರೆ ಇಲ್ಲಿನ ಸಬ್ ಇನ್ಸ್ಪೆಕ್ಟರ್ .

ಆದರೆ ಈ ಮಾಹಿತಿಯನ್ನ ಮರೆಮಾಚಿ ನನ್ನ ಮೇಲೆ ಯಾವುದೇ ಪ್ರಕರಣಗಳಿಲ್ಲ ಎಂದು ತುಮಕೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಖಾಂತರ ಬೆಂಗಳೂರಿನ ನಿಮ್ಮ ಕಚೇರಿಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ದೂರು ಸಲ್ಲಿಸಿದಾಗ ತಕ್ಷ ಣವೇ ಕಾರ್ಯೋನ್ಮುಖರಾದ ಕೇಂದ್ರೀಯ ವಲಯದ ಐಜಿಪಿ ಅವರು ತುಮಕೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾಕ್ಟರ್ ಕೋನಾ ವಂಶಿಕೃಷ್ಣ ಅವರಿಂದ ಮಾಹಿತಿ ಕೇಳಿದ್ದಾರೆ .

ಇದರಿಂದ ಗಲಿಬಿಲಿಯಾದ ಎಸ್ಪಿ ಅವರು ಸಂಬಂಧಪಟ್ಟಂತೆ ಸಿಬ್ಬಂದಿಯನ್ನು ಕರೆದು ಮಾಹಿತಿ ಕೇಳಿದ್ದಾರೆ .ಮಾಹಿತಿ ಕೇಳಿದ ತಕ್ಷಣ ಇಲ್ಲಿನ ಸಿಬ್ಬಂದಿ ಕಂಗಾಲಾಗಿ ಹೋಗಿದ್ದಾನೆ.ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೊಳ್ಳದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಬ್ ಇನ್ಸ್ಪೆಕ್ಟರ್ ಕಚೇರಿಗೆ ಬರುವಂತೆ ಸೂಚಿಸಿದ್ದಾರೆ .

ಮಾಹಿತಿ ತಿಳಿದ ಕೂಡಲೇ ಇಲ್ಲಿನ ಸಬ್ ಇನ್ಸ್ ಪೆಕ್ಟರ್ ನಾಪತ್ತೆಯಾಗಿದ್ದಾನೆ .ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಇಲ್ಲಿನ ಸಬ್ ಇನ್ಸ್ ಪೆಕ್ಟರ್ ಮೇಲೆ 120/ 15 ಕಲ 120 B .420.468.471 ಪ್ರಕರಣ ದಾಖಲಾಗಿದೆ ಹಾಗೂ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದ್ದು ಅದರಲ್ಲಿ ನಾಲ್ಕನೇ ಆರೋಪಿಯಾಗಿದ್ದಾರೆ .ಎಂದು ಮಾಹಿತಿ ತಿಳಿದು ಬಂದಿದೆ.

ಕೇವಲ ಬಡ್ತಿಗಾಗಿ ತನ್ನ ಮೇಲೆ ಯಾವುದೇ ಪ್ರಕರಣಗಳಿಲ್ಲ ಎಂದು ಸುಳ್ಳು ಮಾಹಿತಿಯನ್ನು ತುಮಕೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ನೀಡಿ ಸಿಬ್ಬಂದಿಯೊಬ್ಬರನ್ನು ಶಾಮೀಲು ಮಾಡಿಕೊಂಡು ಅವರಿಂದ ಎಸ್ಪಿ ಅವರನ್ನು ದಿಕ್ಕು ತಪ್ಪಿಸಿ ಸಹಿ ಹಾಕಿಸಿ ಕೇಂದ್ರೀಯ ವಲಯದ ಐಜಿಪಿಗೆ ದಾಖಲೆಗಳನ್ನು ಸಲ್ಲಿಸಿ ನಂತರ ಅಲ್ಲಿ ಬಹಿರಂಗಗೊಂಡಿರುವ ಈ ಪ್ರಕರಣ ಇಡೀ ರಾಜ್ಯದ ಪೊಲೀಸ್ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ .ನಮ್ಮ ಇಲಾಖೆಯಲ್ಲಿಯೇ ಇಂತಹವರು ಇದ್ದರೆ ಹೇಗೆ …ದಿನ ಬೆಳಗಾದರೆ ಸಮಾಜವನ್ನು ತಿದ್ದುವ ನಾವು ನಮ್ಮಲ್ಲಿಯೇ ಇಂತಹ ಪ್ರಸಂಗಗಳು ನಡೆದರೆ ನಾವು ಯಾರಿಗೆ ಹೇಳುವುದು ಇಂತಹ ಪ್ರಕರಣಗಳು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದು ಹಾಗೂ ಸಚಿವರ ಗಮನಕ್ಕೆ ಹೋದರೆ ಜನ ನಮ್ಮನ್ನು ಎಂದುಕೊಳ್ಳುತ್ತಾರೆ ಪ್ರತಿದಿನ ನಾವು ಪೊಲೀಸ್ ಇಲಾಖೆ ಜನಸ್ನೇಹಿ ಇಲಾಖೆಗೆ ಮಾಡಬೇಕೆಂದು ಹರಸಾಹಸ ಪಡುತ್ತಿದ್ದರೆ ನಮ್ಮ ಇಲಾಖೆಯಲ್ಲಿಯೇ ಇಂತಹವರು ಮೂರು ಖಾಸಗಿ ಹರಾಜು ಹಾಕುತ್ತಿದ್ದಾರೆ ಛೆ ಇದು ಎಂತಹ ದೂರ ದುರ್ದೈವದ ಸಂಗತಿ ಎಂದು ಇಲಾಖೆಯ ಅಧಿಕಾರಿಗಳು ತೀವ್ರ ಬೇಸರ ಮಾಡಿಕೊಳ್ಳುತ್ತಿದ್ದಾರೆ

Facebook Comments