ಮಹಿಳೆಯರ ರಕ್ಷಣೆಗಾಗಿ ಆಕ್ಟೀವ್ ಆದ ತುಮಕೂರು ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಡಿ.10- ಹೆಣ್ಣು ಮಕ್ಕಳು ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ತಡೆಯಲು ಫೋಲಿಸರು ವಿವಿಧ ಪ್ಲಾನ್ ಮಾಡುತ್ತಾರೆ. ಅಷ್ಟೇ ಏಕೆ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಬೆಂಗಳೂರು ಫೋಲೀಸರು ಆ್ಯಪ್ ಕೂಡ ಮಾಡಿದ್ದಾರೆ. ಆದರೆ ನಮ್ಮ ಜಿಲ್ಲೆಯ ಫೋಲೀಸರು ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ಹೆಣ್ಣುಮಕ್ಕಳಿಗೆ ಅಂತಾನೆ ವಿಶೇಷ ಪಡೆ ರಚನೆಮಾಡಿ. ಆಲ್ರೆಡಿ ಆಕ್ಟೀವ್ ಮಾಡಲಾಗಿದೆ.ಯಾವುದು ಆ ಪಡೆ, ಹೇಗಿದೆ ಅದರ ಕಾರ್ಯ ವೈಖರಿ ನೋಡಿ ನಮ್ಮ ಜಿಲ್ಲೆಯ ಎಸ್ಪಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಬಗ್ಗೆ ಎಷ್ಟು ಕಾಳಜಿ ವಹಿಸಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.  ಬಸ್ ನಿಲ್ದಾಣ ಒಂದರಲ್ಲಿ ಯುವತಿಯರನ್ನು ಹಾಗೂ ಯುವಕರನ್ನೂ ಮಹಿಳಾ ಫೋಲೀಸರು ಮಾತಾಡಿಸುತ್ತಿದ್ದ ಈ ದೃಶ್ಯ ಕಂಡುಬಂದ್ದು ತುಮಕೂರು ನಗರದಲ್ಲಿ. ತುಮಕೂರು ಫೋಲಿಸರು ಪಕ್ಕಾ ಪ್ಲಾನ್ ಮಾಡಿ ವಿಶೇಷ ಪಡೆಯೊಂದನ್ನ ರಚಿಸಿ ನಗರಕ್ಕೆ ಬಿಟ್ಟಿದ್ದಾರೆ ಅದೇ ಈ ಮಹಿಳಾ ಫೋಲಿಸರ ಕಲ್ಪತರು ಪಡೆ.

ಮಹಿಳೆಯರು ಮತ್ತು ಮಕ್ಕಳು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಫೋಲೀಸ್ ಇಲಾಖೆಯಿಂದ ತುರ್ತು ಸೇವೆ ಒದಗಿಸುವ ಉದ್ದೇಶದೊಂದಿಗೆ ವಿಶೇಷ ಕಲ್ಪತರು ಪಡೆ ರಚಿಸಲಾಗಿದೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನ 40 ಮಹಿಳಾ ಸಿಬ್ಬಂದಿ ಒಳಗೊಂಡ ವಿಶೇಷ ಪಡೆ ನಗರದಲ್ಲಿ ಹೆಣ್ಣು ಮಕ್ಕಳಿಗೆ ಏನೂ ಸಮಸ್ಯೆ ಆಗದಂತೆ ಕಟ್ಟೆಚ್ಚರ ವಹಿಸಿಸಲಿದೆ.

ಇದೇ ಸಂದರ್ಭದಲ್ಲಿ ಈ ಸಂಜೆ ಪತ್ರಿಕೆಯೊಂದಿಗೆ ಮಾತನಾಡಿದ ಕವಿತ, ಸಾರ್ವಜನಿಕರು ತುಮಕೂರಿನಲ್ಲಿ ಮಹಿಳೆಯರ ಹಾಗೂ ಮಕ್ಕಳ ರಕ್ಷಣೆ ಗೋಸ್ಕರ ವಿಶೇಷ ಕಲ್ಪತರು ಪಡೆ ಎಂಬ ತಂಡವನ್ನು ರಚಿಸಿ ರಕ್ಷಣೆಗೆ ಬಿಟ್ಟಿರುವುದು ಸಂತೋಷದ ಸಂಗತಿ. ಬೀದಿ ಬದಿಯಲ್ಲಿ ಕಾಮುಕರು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಇಂತಹವರನ್ನು ಪತ್ತೆ ಹಚ್ಚಿ ಫೋಲೀಸರು ನಿರ್ದಾಕ್ಷಿಣ್ಯವಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

ನಗರದ ಎಂಪ್ರಸ್ ಕಾಲೇಜು, ಸಿದ್ದಗಂಗಾ ಮಹಿಳಾ ಕಾಲೇಜು, ವಿದ್ಯಾನಿಕೇತನ ಕಾಲೇಜು, ಸರ್ವೋದಯ ಕಾಲೇಜುಗಳಿಗೆ ಭೇಟಿ ನೀಡಿ ಶಾಲಾ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸುರಕ್ಷತೆ, ಅಪರಾಧಗಳಿಂದ ರಕ್ಷಿಸಿಕೊಳ್ಳುವ ಹಾಗೂ ಕಾನೂನಿನ ಅರಿವು ಮೂಡಿಸೋ ಕಾರ್ಯವನ್ನ ಈ ಪಡೆ ಮಾಡುತ್ತಿದೆ. ಸಧ್ಯಕ್ಕೆ ಮಹಿಳಾ ಸಿಬ್ಬಂದಿ ಹಾಗೂ ವಾಹನ ವ್ಯವಸ್ಥೆ ಕಡಿಮೆ ಇರುವುದರಿಂದ ಒಂದೇ ವಾಹನ ಮತ್ತು ಆರುಜನ ಸಿಬ್ಬಂದಿ ತುಮಕೂರು ನಗರವನ್ನ ಪ್ರದಕ್ಷಿಣೆ ಹಾಕುತ್ತಿದೆ.

ಇನ್ನು ಪಾರ್ಕ್, ರಸ್ತೆ ಬದಿ ಹಾಗೂ ಒಬ್ಬಂಟಿಯಾಗಿ ಕಾಣೋ ಹೆಣ್ಣು ಮಕ್ಕಳನ್ನು ಪೂರ್ವಾಪರ ವಿಚಾರಿಸಿ ಅವರಿಗೆ ಸೂಕ್ತ ಮಾಹಿತಿ ನೀಡಿ ಎಲ್ಲಿಗೋಗ್ಬೇಕೋ ಅಲ್ಲಿಗೆ ತಲುಫೋಸೋ ಪ್ರಯತ್ನ ಮಾಡುತ್ತಿದೆ. ಇನ್ನೂ ಜಿಲ್ಲಾ ಫೋಲಿಸರ ಈ ಕಾರ್ಯಕ್ಕೆ ಎಲ್ಲೆಲ್ಲೂ ಪ್ರಶಂಸೆಗಳ ಸುರಿಮಳೆಯೇ ಬರುತ್ತಿದೆ.

ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಶಾಲಿನಿ ಮಾತನಾಡಿ, ದೇಶ ರಾಜ್ಯ ಜಿಲ್ಲೆಗಳಲ್ಲಿ ದಿನೇದಿನೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಿರಂತರವಾಗಿ ನಡೆಯುತ್ತಲೇ ಇವೆ. ಇದನ್ನು ಬೇರು ಸಮೇತ ಕಿತ್ತು ಹಾಕಲು ಫೋಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಮಹಿಳೆಯರು ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗುವವರ ಬಗ್ಗೆ ತೀವ್ರ ನಿಗಾ ವಹಿಸಬೇಕು.

ತುಮಕೂರಿನಲ್ಲಿ ಮಹಿಳೆಯರು, ಯುವತಿಯರು, ಮಕ್ಕಳ ರಕ್ಷಣೆಗಾಗಿ ತುಮಕೂರಿನ ಎಸ್ಪಿ ಕೋನ ವಂಶಿ ಕೃಷ್ಣ ಹಾಗೂ ಹೆಚ್ಚುವರಿ ಫೋಲೀಸ್ ವರಿಷ್ಠಾಧಿಕಾರಿ ಉದ್ದೇಶ್, ನಗರದ ಡಿವೈಎಸ್ಪಿ ತಿಪ್ಪೇಸ್ವಾಮಿ ಅವರ ಮಾರ್ಗದರ್ಶನದಲ್ಲಿ ತುಮಕೂರು ನಗರದಾದ್ಯಂತ ಎರಡು ವಿಶೇಷ ಕಲ್ಪತರು ಪಡೆ ರಚಿಸಿ ಕಾರ್ಯಗತಗೊಳಿಸಿದ್ದಾರೆ.

ಒಟ್ಟಾರೆ ಹೈದರಾಬಾದ್ ದುರಂತಕ್ಕೂ ಮುನ್ನ ತುಮಕೂರು ಫೋಲಿಸರ ಈ ಪ್ಲಾನ್ ಸಕ್ಸಸ್ ಆಗಿದೆ, ಪುಂಡು ಫೋಕರಿಗಳಿಗೆ ಎಲ್ಲಂದ್ರಲ್ಲಿ ಉಗಿದು ಬುದ್ದಿ ಹೇಳುತ್ತಿದ್ದಾರೆ ಮಾತು ಕೇಳದವರಿಗೆ ಲಾಟಿ ರುಚಿಯನ್ನೂ ತೋರಿಸುತ್ತಿದ್ದಾರೆ. ಇವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.

Facebook Comments