ಟರ್ಫ್ ಕ್ಲಬ್‍ನಲ್ಲಿ ದಾಂಧಲೆ, ದೂರು ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.16- ನಗರದ ಟರ್ಫ್ ಕ್ಲಬ್‍ನಲ್ಲಿ ನಿನ್ನೆ ನಡೆದ ದಾಂಧಲೆ ಬಗ್ಗೆ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣ ಸಂಬಂಧ ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಟರ್ಫ್ ಕ್ಲಬ್‍ನಲ್ಲಿ ಅಳವಡಿಸಿರುವ ಸಿಸಿಟಿವಿ ಪುಟೇಜನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್‍ಸಿಂಗ್ ರಾಥೋಡ್ ಈ ಸಂಜೆಗೆ ತಿಳಿಸಿದ್ದಾರೆ.

ಟರ್ಫ್ ಕ್ಲಬ್ ಕಾರ್ಯದರ್ಶಿ ಘಟನೆ ಸಂಬಂಧ ಹೈಗ್ರೌಂಡ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಘಟನೆ ಹಿನ್ನೆಲೆ: ನಿನ್ನೆ ನಗರದ ಟಫ್ ಕ್ಲಬ್‍ನಲ್ಲಿ ಚಳಿಗಾಲದ ಮೊದಲ ರೇಸ್ ನಡೆಯುತ್ತಿದ್ದ ವೇಳೆ ಕುದುರೆಯೊಂದು ಓಡುತ್ತಿದ್ದಾಗ ಮುಗ್ಗರಿಸಿ ಬಿದ್ದು ಸೋತ ಪರಿಣಾಮ ಬಾಜಿ ಕಟ್ಟಿದ್ದವರು ಹಣ ವಾಪಸ್ ಕೊಡುವಂತೆ ಒತ್ತಾಯಿಸಿದ್ದಾರೆ.  ಹಣ ಕೊಡಲು ಟರ್ಫ್ ಕ್ಲಬ್ ಸಿಬ್ಬಂದಿ ನಿರಾಕರಿಸಿದ್ದರಿಂದ ರೊಚ್ಚಿಗೆದ್ದ ಬಾಜಿದಾರರು ಟರ್ಫ್ ಕ್ಲಬ್‍ನ ಪೀಠೋಪಕರಣ, ಟಿಕೆಟ್ ಕೌಂಟರ್‍ನ್ನ ಧ್ವಂಸಗೊಳಿಸಿ ದಾಂಧಲೆ ನಡೆಸಿದ್ದಾರೆ.

ಘಟನೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಬಾಜಿದಾರರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದ್ದರು. ಕುದುರೆ ಕೆಳಗೆ ಬಿದ್ದು ಕಾಲು ಮುರಿದುಕೊಂಡಿದ್ದರೆ,
ಮೂವರು ಜಾಕಿಗಳು ಗಾಯ ಗೊಂಡಿದ್ದಾರೆ.

Facebook Comments