ಟರ್ಕಿಯಲ್ಲಿ ಪ್ರಬಲ ಭೂಕಂಪ, ಸತ್ತವರ ಸಂಖ್ಯೆ 36ಕ್ಕೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಎಲಝಿಗ್, ಜ.26-ಟರ್ಕಿಯ ಪೂರ್ವಭಾಗದಲ್ಲಿ ನಿನ್ನೆ ನಸುಕಿನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 30 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಈ ವಿನಾಶಕಾರಿ ಪ್ರಕೃತಿ ವಿಕೋಪದಲ್ಲಿ 30ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಕುಸಿದಿರುವ ಕಟ್ಟಡಗಳ ಅಡಿ ಇನ್ನೂ ಹಲವು ಮಂದಿ ಸಿಲುಕಿದ್ದು, ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಯುದ್ಧೋಪಾದಿಯಲ್ಲಿ ಸಾಗಿದೆ. ಎಲಝಿಗ್‍ನ ಪೂರ್ವ ಪ್ರಾಂತ್ಯದ ಸರೋವರದದಂಡೆಯ ಮೇಲೇರಿವ ಸಿವ್‍ರೈಸ್ ಪಟ್ಟಣದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.8ರಷ್ಟಿತ್ತು.

ಪ್ರಬಲ ಭೂಕಂಪದಿಂದಾಗಿ ಈ ಪಟ್ಟಣದ ಹಲವಾರು ಮನೆಗಳು ಮತ್ತು ಕಟ್ಟಡಗಳು ಕುಸಿದಿವೆ. ಉರುಳಿಬಿದ್ದ ಭಗ್ನಾವಶೇಷಗಳಡಿ ಸಿಲುಕಿದ್ದ ಕೆಲವರನ್ನು ರಕ್ಷಿಸಲಾಗಿದೆ. ನಾಪತ್ತೆಯಾಗಿರುವ 30ಕ್ಕೂ ಹೆಚ್ಚು ಜನರಿಗಾಗಿ ತೀವ್ರ ಶೋಧ ಮುಂದುವರಿದಿದೆ.

ಭೂಕಂಪದ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಟರ್ಕಿ ಅಧ್ಯಕ್ಷ ರಿಸೆಪ್ ಟಯ್ಯಿಪ್‍ಎರ್‍ಡೊಗಾನ್, ಪ್ರಕೃತಿ ವಿಕೋಪದಲ್ಲಿ ಬಾಧಿತರಿಗೆ ನೆರವಾಗಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Facebook Comments