‘ನಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಬೇಡ’: ಟರ್ಕಿ ಅಧ್ಯಕ್ಷನಿಗೆ ಭಾರತ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.15-ಪಾಕಿಸ್ತಾನ ಸಂಸತ್‍ನಲ್ಲಿ ಜಮ್ಮು ಮತ್ತು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿರುವ ಟರ್ಕಿ ಅಧ್ಯಕ್ಷ ರೆಸಿಪ್ ಟಯಿಪ್ ಎರ್ಡೋಗಾನ್ ಅವರಿಗೆ ಭಾರತ ತರಾಟೆಗೆ ತೆಗೆದುಕೊಂಡಿದೆ. ನಮ್ಮ ದೇಶದ ಆಂತರಿಕ ವಿಷಯದಲ್ಲಿ ಟರ್ಕಿ ನಾಯಕರು ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರ ಕುರಿತು ಅವರು ನೀಡಿರುವ ಎಲ್ಲಾ ಹೇಳಿಕೆಗಳನ್ನು ಭಾರತ ಸರಾಸಗಟಾಗಿ ತಳ್ಳಿ ಹಾಕುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‍ಕುಮಾರ್ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಮತ್ತು ಅದನ್ನು ಎಂದಿಗೂ ಬೇರ್ಪಡಿಸಲಾಗದ ಭಾಗವಾಗಿದೆ ಎಂದು ರವೀಶ್‍ಕುಮಾರ್ ಪುನರುಚ್ಚರಿಸಿದ್ದಾರೆ. ಟರ್ಕಿ ಅಧ್ಯಕ್ಷರು ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ಪಾಕಿಸ್ತಾನ ಸಂಸತ್‍ನಲ್ಲಿ ಜಮ್ಮು-ಕಾಶ್ಮೀರ ವಿಷಯ ಪ್ರಸ್ತಾಪಿಸಿದ್ದಾರೆ. ಪಾಕಿಸ್ತಾನದಿಂದ ಭಯೋತ್ಪಾದನೆ ಕಾರಣ ಜಮ್ಮು-ಕಾಶ್ಮೀರದಲ್ಲಿ ಉದ್ಭವಿಸಿರುವ ಗಂಭೀರ ಆತಂಕವನ್ನು ಟರ್ಕಿ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ರವೀಶ್‍ಕುಮಾರ್ ತಿರುಗೇಟು ನೀಡಿದ್ದಾರೆ.

ಟರ್ಕಿ ಅಧ್ಯಕ್ಷರು ಪಾಕಿಸ್ತಾನ ಸಂಸತ್‍ನಲ್ಲಿ ಭಾಷಣ ವೇಳೆ ಜಮ್ಮು-ಕಾಶ್ಮೀರದ ಸ್ಥಿತಿಯನ್ನುತಮ್ಮ ದೇಶವು ಒಂದನೇ ಮಹಾಯುದ್ಧದಲ್ಲಿ ವಿದೇಶಿ ಸೇನಾಪಡೆಗಳ ಪ್ರಾಬಲ್ಯದಿಂದ ಜನತೆ ಅನುಭವಿಸಿದ್ದ ಸಂಕಷ್ಟಕ್ಕೆ ಹೋಲಿಸಿ ಹೇಳಿಕೆ ನೀಡಿದ್ದರು.

Facebook Comments