ಟರ್ಕಿ ಅಧ್ಯಕ್ಷ ಚುನಾವಣೆಯಲ್ಲಿ ಎರ್ಡೊಗನ್ ಗೆಲುವು
ಈ ಸುದ್ದಿಯನ್ನು ಶೇರ್ ಮಾಡಿ
ಇಸ್ತಾನ್ಬುಲ್, ಜೂ.25-ಟರ್ಕಿ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ರೆಸೆಪ್ ಟಯ್ಯಪ್ ಎರ್ಡೊಗನ್ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಇದು ಘೋಷಿಸಿದ್ದಾರೆ. ತೀವ್ರ ಪೈಪೋಟಿಯ ಚುನಾವಣೆಯಲ್ಲಿ ಟರ್ಕಿಯ ಅಧ್ಯಕ್ಷರು ವಿಜೇತರಾಗುವ ಮೂಲಕ 15 ವರ್ಷಗಳ ತಮ್ಮ ಬಿಗಿ ಹಿಡಿತವನ್ನು ಮತ್ತೆ ವಿಸ್ತರಿಸಿದ್ದು, ಅಧಿಕಾರ ವಶಪಡಿಸಿಕೊಳ್ಳುವ ವಿರೋಧ ಪಕ್ಷಗಳ ಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ.
ಟರ್ಕಿ ಮತದಾರರು ಇದೇ ಮೊದಲ ಬಾರಿಗೆ ಅಧ್ಯಕ್ಷೀಯ ಹಾಗೂ ಪಾರ್ಲಿಮೆಂಟ್ ಈ ಎರಡೂ ಚುನಾವಣೆಗಳಿಗೆ ಮೊದಲ ಬಾರಿಗೆ ಒಟ್ಟಿಗೆ ಮತದಾನ ಮಾಡಿದ್ದರು. ಈ ಚುನಾವಣೆಯಲ್ಲಿ ಎರ್ಡೊಗನ್ ನೇತೃತ್ವದ ಆಡಳಿತರೂಢ ಜಸ್ಟಿಸ್ ಅಂಡ್ ಡೆವಲಪ್ಮೆಂಟ್ ಪಾರ್ಟಿ(ಎಕೆಪಿ) ಸ್ಪಷ್ಟ ಬಹುಮತ ಗಳಿಸಿ ಪುನರಾಯ್ಕೆಯಾಗಿದೆ.
Facebook Comments