83ನೇ ಹುಟ್ಟುಹಬ್ಬ ಆಚರಿಸಿಕೊಂಡ ಟಿಬೆಟ್ ಧರ್ಮಗುರು ದಲೈಲಾಮಾ

ಈ ಸುದ್ದಿಯನ್ನು ಶೇರ್ ಮಾಡಿ

Dalai-Lama--01

ಲೇಹ್, ಜು.6- ಟಿಬೆಟ್ ಧರ್ಮ ಗುರು, ನೋಬೆಲ್ ಪ್ರಶಸ್ತಿ ಪುರಸ್ಕøತ ದಲೈಲಾಮ ಅವರು ಇಂದು ತಮ್ಮ 83ನೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಜಮ್ಮು ಕಾಶ್ಮೀರದ ಲಡಕ್‍ನಲ್ಲಿ ತಮ್ಮ ಸಹಸ್ರಾರು ಸಂಖ್ಯೆಯ ಅನುಯಾಯಿ ಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕೇಕ್ ಕತ್ತರಿಸುವ ಮೂಲಕ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು.

ಸಮಾರಂಭದಲ್ಲಿ ಟಿಬೆಟಿಯನ್‍ನ ಪ್ರಧಾನಿ ಲೊಬ್‍ಸಾಂಗ್ ಸಾಂಘೈ ಸೇರಿದಂತೆ ಅನೇಕ ಧಾರ್ಮಿಕ ಮುಖಂಡರು ಹಾಗೂ ರಾಜಕಾರಣಿಗಳು ಪಾಲ್ಗೊಂಡು ದಲೈಲಾಮಾಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಈ ವೇಳೆ ಮಾತನಾಡಿದ ದಲೈಲಾಮಾ, ಈ ಸುಂದರ ಪರಿಸರದಲ್ಲಿ ನನ್ನ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವುದು ಸಂತಸವಾಗಿದೆ.  ನಾನು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿದ್ದು ಹವಾಮಾನದ ವೈಪರೀತ್ಯದಿಂದಾಗಿ ಇನ್ನು ಕೆಲವು ದಿನಗಳ ಕಾಲ ಇಲ್ಲೇ ಕಾಲ ಕಳೆದು ಲಡಖ್ ಮಂದಿಯ ಅತಿಥ್ಯ ಸ್ವೀಕರಿಸಲಿದ್ದೇನೆ ಎಂದರು.

Facebook Comments

Sri Raghav

Admin